ದೇಶದಲ್ಲಿ ನಡೆಯುತ್ತಿರುವ ಗುಂಪು ಘರ್ಷಣೆ ನಿಯಂತ್ರಿಸಲು ಮುಸ್ಲಿಂ ಒಕ್ಕೂಟ ಒತ್ತಾಯ

ಲೋಕದರ್ಶನ ವರದಿ

ಕಾರವಾರ 30: ದೇಶದೆಲ್ಲೆಡೆ ನಡೆಯುತ್ತಿರುವ ಗುಂಪು ಘರ್ಷಣೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಬಿತಾ ಎ ಮಿಲ್ಲತ್ ಮುಸ್ಲಿಮ್ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತದ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. 

ಕಳೆದ ಐದು ವರ್ಷಗಳಿಂದ ದೇಶದಲ್ಲಿ ಧಾಮರ್ಿಕ ಉನ್ಮಾದದಿಂದಾಗಿ ಬಹುಧಮರ್ಿಯ ಸಂಸ್ಕೃತಿಗೆ ಧಕ್ಕೆಯುಂಟಾಗುತ್ತಿದೆ. ದೇಶದ ಅಲ್ಪಸಂಖ್ಯಾತರು, ದಲಿತರನ್ನು ಗುರಿಯನ್ನಾಗಿಸಿಕೊಂಡು ಗುಂಪು ಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಿವೆ. ದೇಶದ ನಾಗರಿಕರು ಭಯದ ವಾತವರಣದಲ್ಲಿ ಬದುಕುವಂತಾಗಿದೆ. ಕೇಂದ್ರದಲ್ಲಿ ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬಂದಾಗಿನಿಂದ ಹಲವು ಗುಂಪು ಹತ್ಯೆಗಳು ನಡೆದಿದ್ದು, ಪರಸ್ಪರ ಸಹೋದರರಂತಿದ್ದ ಹಿಂದೂ ಮುಸ್ಲಿಮರನ್ನು ತಮ್ಮ ರಾಜಕೀಯ ದುಲರ್ಾಭಕ್ಕಾಗಿ ಪರಸ್ಟರಲ್ಲಿ ದ್ವೇಷ ಅಸೂಯೆ ಹುಟ್ಟಿಸುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಗೋ ಸಾಗಾಟ, ಗೋಮಾಂಸ ಸೇವನೆ, ಲವ್ ಜಿಹಾದ್ ಮತ್ತಿತರರ ಹೆಸರಲ್ಲಿ ದೇಶದ ಅಲ್ಪಸಂಖ್ಯಾತ ಸಮುದಾಯದ ಮೇಲೆ ಗುಂಪು ಹಲ್ಲೆಗಳು ನಡೆಯುತ್ತಿದ್ದು. ಇದನ್ನು ನೋಡಿ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ. ಅದೇ ರೀತಿ ಜಾರ್ಖಂಡ್ನ ತಬ್ರೇಜ್ ಅನ್ಸಾರಿ ಎಂಬ ವ್ಯಕ್ತಿ ಬೈಕ್ ಕಳುವು ಮಾಡಿದ್ದ ನೆಪದಲ್ಲಿ ಉನ್ಮಾದಿತ ವ್ಯಕ್ತಿಗಳು ಜೈಶ್ರೀರಾಂ, ಜೈ ಹನುಮಾನ ಎಂಬ ಘೋಷಣೆಯನ್ನು ಕೂಗುವಂತೆ ಒತ್ತಾಯಿಸಿ, ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಅಲ್ಲದೆ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ. ಇದರಿಂದಾಗಿ ದೇಶದೆಲ್ಲೇಡೆ ಅಲ್ಪಸಂಖ್ಯಾತರಲ್ಲಿ  ಆತಂಕವುಂಟಾಗಿದೆ.  ಇಷ್ಟೇಲ್ಲಾ ನಡೆಯುತ್ತಿದ್ದರೂ ದೇಶದ ಪ್ರಧಾನಿ, ಕೇಂದ್ರ ಸಚಿವರು ಹಾಗೂ ಸಂಸದರು ಸುಮ್ಮನೆ ಕುಳಿತಿದ್ದಾರೆ ಎಂದು  ಮನವಿಯಲ್ಲಿ ಆರೋಪಿಸಲಾಗಿದೆ. ಉಪವಿಭಾಗಾಧಿಕಾರಿ ಬಿ.ಅಭಿಜಿನ್ ಮನವಿ ಸ್ವೀಕರಿಸಿದರು.