ಸಂಗೀತಾಸಕ್ತರ ಮನಸೂರೆಗೊಂಡ ರಂಗ ಸಂಭ್ರಮ
Music lover's mind blown stage celebration
ಸಂಗೀತಾಸಕ್ತರ ಮನಸೂರೆಗೊಂಡ ರಂಗ ಸಂಭ್ರಮ
ಬೆಳಗಾವಿ 07: ನವರಸಭರಿತ ರಂಗಗೀತೆಗಳ ಸುಮಧುರ ಸುಶ್ರಾವ್ಯ ಸಂಗೀತ ಗಾಯನ, ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಎಚ್‌ಎಸ್.ವೆಂಕಟೇಶ ಮೂರ್ತಿ, ಗೀರೀಶ ಕಾರ್ನಾಡ್ ಅವರು ರಚಿಸಿದ ರಂಗಗೀತೆಗಳ ಹಿರಿಯ ಖ್ಯಾತ ರಂಗಕಲಾವಿದೆ, ಗಾಯಕಿ ಪದ್ಮಶ್ರೀ ಬಿ. ಜಯಶ್ರೀ ಅವರ ಕಂಠಸಿರಿಯಲ್ಲಿ ಮೂಡಿ ಬರುತ್ತಿದ್ದಂತೆ, ಕಿಕ್ಕಿರಿದು ತುಂಬಿದ ಸಭಾಂಗಣ, ಜನರ ಚಪ್ಪಾಳೆ, ಶಿಳ್ಳೆ, ಕರತಾಡನ, ಮಂತ್ರಮುಗ್ಧಗೊಂಡ ಸಂಗೀತ ಪ್ರೇಮಿಗಳು ಈ ಅದ್ಭುತ ಚಿತ್ರಣಗಳು ಕಂಡು ಬಂದಿದ್ದು ನಗರದ ಕನ್ನಡ ಭವನದಲ್ಲಿ ದಿ. 5ರಂದು. ಹೌದು. ನಿನ್ನೆ ನಾನು ನಮ್ಮವರೊಂದಿಗೆ ಪ್ರತಿಷ್ಠಾನ ಮತ್ತು ಮಹಿಳಾ ಅಭಿವೃದ್ಧಿ ಸೇವಾ ಸಂಸ್ಥೆಗಳು ಗುರುವಾರ ದಿ.05 ರಂದು ನೆಹರೂ ನಗರದ ಕನ್ನಡ ಭವನದಲ್ಲಿ ಏರಿ್ಡಸಿದ್ದ ಖ್ಯಾತ ರಂಗಭೂಮಿ ಗಾಯಕ ರಾಜಪ್ರಭು ಧೋತ್ರೆ ಅವರು ರಂಗಗೀತೆ ಹಾಡುವ ಮೂಲಕ ರಂಗ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹೆಸರಾಂತ ರಂಗಗೀತೆಗಳ ಗಾಯಕಿ, ರಂಗಭೂಮಿ ಕಲಾವಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬಿ. ಜಯಶ್ರೀ ಹಾಗೂ ಅವರ 12 ಕಲಾವಿದರ ತಂಡದ ರಂಗ ಸಂಭ್ರಮ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಜಯಶ್ರೀ ಅವರ ವಯಸ್ಸನ್ನು ನಾಚಿಸುವ ಅವರ ಹಾಡುಗಾರಿಕೆ ಸುಶ್ರಾವ್ಯವಾಗಿ, ನಿರಂತರ ಹಾಡು, ಹಾಡಿನಲ್ಲಿ ತನ್ಮಯತೆ, ಹಾವಭಾವ, ಏರು ಸ್ವರ ಒಂದಕ್ಕಿಂತ ಒಂದು ಅದ್ಭುತವಾಗಿ ಇಡೀ ಭವನವನ್ನೇ ತಮ್ಮ ರಂಗಗೀತೆಗಳಿಂದ ಕಟ್ಟಿ ಹಾಕಿಬಿಟ್ಟಿದ್ದರು ಜಯಶ್ರೀ ಅವರು. ಬಿ. ಜಯಶ್ರೀ ನೇತೃತ್ವದ ತಂಡ ಎರಡು ತಾಸುಗಳ ಕಾಲ ಹಾಡುಗಳ ಮೂಲಕ ಜನಮನ ಮಂತ್ರಮುಗ್ಧಗೊಳಿಸಿತು. ಗುಬ್ಬಿ ಕಂಪನಿ ನಾಟಕದ ಕಾಳಿಂಗರಾವ್ ನಿರ್ದೇಶನದ ಹಾಡುಗಳು, ಕಾರ್ನಾಡ, ಕಾರಂತ, ಕಂಬಾರ ಮೊದಲಾದವರ ಹಯವದನ, ಕಾಕನಕೋಟೆ, ಕರಿಮಾಯಿ ಮೊದಲಾದ ನಾಟಕಗಳ ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು. ಇಳಿವಯಸ್ಸಿನಲ್ಲಿಯೂ ಅದ್ಭುತ ಕಂಠತ್ರಾಣ ಹೊಂದಿದ ಬಿ. ಜಯಶ್ರೀ ಅವರ ಹಾಡುಗಾರಿಕೆ ಕಲಾರಸಿಕರ ಮನ ಸೆಳೆಯಿತು. ಸಹಗಾಯಕರೂ ಉತ್ತಮ ಸಹಗಾಯನ ನೀಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 