ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರ ಅಸಭ್ಯ ವರ್ತನೆ: ವಿದ್ಯಾರ್ಥಿಗಳ ಪ್ರತಿಭಟನೆ

ಲೋಕದರ್ಶನ ವರದಿ

ಶಿರಹಟ್ಟಿ 02: ತಾಲೂಕಿನ ವಡವಿಯಲ್ಲಿರುವ ಮೂರಾಜರ್ಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ರವಿ ಉದ್ದನ್ನವರ ಅವರು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿ ಸುತ್ತಿದ್ದು, ಮನಬಂದಂತೆ ಬೈಯುತ್ತಾರೆ ಇವರು ಈ ಶಾಲೆಯಿಂದ ಇವರನ್ನು ವಗರ್ಾಯಿಸಿ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

7ನೇ ತರಗತಿ  ವಿದ್ಯಾರ್ಥಿಗಳು ತಮ್ಮ ಪ್ರಾಂಶುಪಾಲರು ನಮ್ಮನ್ನು ಶೌಚಾಲಯ ಸ್ವಚ್ಛ ಗೊಳಿಸುವಂತೆ ಹೇಳುತ್ತಾರೆ. ಒಲ್ಲೆ ಎಂದರೆ ಅವರು ಬೈಯುವುದು, ಹೊಡೆಯುದು ಮಾಡುತ್ತಾರೆ. ಇಲ್ಲಿ ಬರೆದಿಟ್ಟಿರುವ ಮೆನು ಪ್ರಕಾರ ಯಾವುದೇ ಆಹಾರ ತಯಾರಿಸುವದಿಲ್ಲ. ತಿಳಿ ಸಾರು, ನುಸಿಪಿಡಿತ ಅನ್ನ, ರೊಟ್ಟಿಯು ವಿಷವಾಗಿರುತ್ತವೆ, ಇಂತಹ ಆಹಾರ ಸೇವಿಸುವರಿಂದ ನಮ್ಮ ಆರೋಗ್ಯ ಹದಗೆಡುತ್ತದೆ ಎಂದು ಶಾಸರ ರಾಮಣ್ಣ ಲಮಾಣಿ ಅವರ ಬಳಿ ಅವಲತ್ತುಕೊಂಡರು.

ಎಲ್ಲಿಯವರೆಗೂ ಇಲ್ಲಿಂದ ಪ್ರಾಂಶಿಪಾಲರು ಕದಲುವದಿಲ್ಲವೋ ಅಲ್ಲಿಯವರೆಗೆ ನಾವು ಹಾಸ್ಟೆಲ್ಗೆ, ಶಾಲೆಗೆ ಬರುವದಿಲ್ಲ ಎಂದು ಪಟ್ಟು ಹಿಡಿದ ಘಟನೆ ಜರಗಿತು. ಊಟ, ತಿಂಡಿ, ಅಡುಗೆ ತಯಾರಿಸುವ ಹಾಗೂ ವಿದ್ಯಾಥರ್ಿಗಳ ಕುಂದು ಕೊರತೆ ಕೇಳುವವರೇ ಇಲ್ಲ. ಶುಚಿಯಾಗದ ಪಾತ್ರೆಗಳು, ಕುಲಷಿತ ನೀರು, ಅಪೌಷ್ಟಿಕ ಆಹಾರ, ಕರಿದುಳಿದ ಎಣ್ಣೆಯ ಮರುಬಳಕೆ, ಹಳಸಿದ ಊಟ ನೀಡುತ್ತಾರೆ.

ಪರಿಶೀಲಿಸಿದ ತಾಲೂಕಿನ ಶಾಸಕ ರಾಮಣ್ಣ ಲಮಾಣಿ ಇವರ ಬಗ್ಗೆ ಸೂಕ್ತ ಕ್ರಮ ಜರುಗಿಸಿ, ಸಂಜೆಯೊಳಗೆ ಮೇಲಾಧಿಕಾರಿಗಳು ಬಂದು ಪರಿಶೀಲಿಸಿ ಪ್ರಾಂಶುಪಾಲರನ್ನು ಮತ್ತು ಕಾವಲುಗಾರರಾದ ಅಕ್ಕಮ್ಮ ಮತ್ತು ಸುರೇಶ ಇವರ ಬಗ್ಗೆ ಸೂಕ್ತ ಕ್ರಮ ಜರಗಿಸಬೆಕೆಂದು ಎಂದು ಶಾಸಕರು ಮೇಲಾಧಿಕಾರಿಯಾದ ಮುಧೋಳ ಅವರಿಗೆ ಕರೆ ಮಾಡಿ ತಿಳಿಸಿದರು.

ಗ್ರಾ.ಪಂ ಸದಸ್ಯ ತಿಮ್ಮರೆಡ್ಡಿ ಮರಡ್ಡಿ ಮಾತನಾಡಿ ಯಾವುದೇ ಸಮಸ್ಯೆಯಾದರೆ ತಮ್ಮ ಮೋಬೈಲ್ಗೆ ಕರೆ ಮಾಡಿ ತಾವು ತ್ವರಿತವಾಗಿ ಸ್ಪಂಧಿಸುವುದಾಗಿ ಹೇಳಿದರು .ಸಂದಂರ್ಭದಲ್ಲಿ ಗ್ರಾ.ಪಂ ಸದಸ್ಯ ಮೋಹನ ಗುತ್ತಮ್ಮನ್ನವರ್, ಮಹಾವೀರ ಜೈನ್, ಲಕ್ಷ್ಮಣ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.