ಕಣ್ಗಾವಲು ತಂಡಗಳ ಮೇಲುಸ್ತುವಾರಿಗಾಗಿ ಮುನೀಷ್ಮೌದ್ಗಿಲ್ ನಿಯೋಜನೆ

ಕಣ್ಗಾವಲು ತಂಡಗಳ ಮೇಲುಸ್ತುವಾರಿಗಾಗಿ ಮುನೀಷ್ಮೌದ್ಗಿಲ್ ನಿಯೋಜನೆ

ಕಾರವಾರ27 : ಯಲ್ಲಾಪುರ ವಿಧಾನಸಭೆ ಉಪ ಚುನಾವಣೆ ಮಾದರಿ ನೀತಿ ಸಂಹಿತೆ ಕಟ್ಟು ನಿಟ್ಟಿನ ಜಾರಿ ಹಿನ್ನೆಲೆಯಲ್ಲಿ ಸವರ್ೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಮುನೀಷ್ ಮೌದ್ಗಿಲ್ ಅವರನ್ನು ವಿವಿಧ ಕಣ್ಗಾವಲು ತಂಡಗಳ ಮೇಲುಸ್ತುವಾರಿ ಹಾಗೂ ಚುನಾವಣಾ ವೆಚ್ಚಗಳ ಮೇಲುಸ್ತುವಾರಿಗಾಗಿ ವಿಶೇಷಾಧಿಕಾರಿಯಾಗಿ ನಿಯೋಜಿಸಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್  ಆದೇಶಿಸಿದ್ದಾರೆ.

ಮಾದರಿ ನೀತಿ ಸಂಹಿತೆ ಜಿಲ್ಲಾದ್ಯಂತ ಜಾರಿಯಲ್ಲಿದ್ದು ಈಗಾಗಲೇ ಸ್ಥಿರ, ಸಂಚಾರಿ ಕಣ್ಗಾವಲು ತಂಡಗಳು ಚೆಕ್ಪೋಸ್ಟ್ಗಳಲ್ಲಿ, ವಿವಿಧ ರಾಜಕೀಯ ಕಾರ್ಯಕ್ರಮಗಳನ್ನು ವಿಡಿಯೋ ಕಣ್ಗಾವಲು ತಂಡ ದಾಖಲಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿದೆ. ಅಲ್ಲದೆ ಅಬಕಾರಿ ಕಣ್ಗಾವಲು ತಂಡವೂ ಜಿಲ್ಲಾದ್ಯಂತ ದಾಳಿ ಹಾಗೂ ಮತ್ತಿತರ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ.

ಇದೀಗ ಹಿರಿಯ ಐಎಎಸ್ ಅಧಿಕಾರಿಗಳಾದ ಸವರ್ೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಮುನಿಷ್ ಮೌದ್ಗಿಲ್ ಅವರನ್ನು ವಿಶೇಷಾಧಿಕಾರಿ (ಜಾರಿ)ಯನ್ನಾ ಜಿಲ್ಲೆಗೆ ನಿಯೋಜನೆ ಮಾಡಲಾಗಿದ್ದು ಮಾದರಿ ನೀತಿ ಸಂಹಿತೆ ಮತ್ತಷ್ಟು ಕಠಿಣಗೊಳಿಸಲಾಗಿದೆ. ಚೆಕ್ಪೋಸ್ಟ್ಗಳಲ್ಲಿ ನಿಯೋಜನೆಗೊಂಡಿರುವ ಕಣ್ಗಾವಲು ತಂಡಗಳು, ಸಂಚಾರಿ ಕಣ್ಗಾವಲು ತಂಡಗಳು, ಅಬಕಾರಿ ಕಣ್ಗಾವಲು ತಂಡಗಳು, ಚುನಾವಣಾ ವೆಚ್ಚ ಸಮಿತಿ ಸೇರಿದಂತೆ ವಿವಿಧ ತಂಡಗಳನ್ನು ಮತ್ತಷ್ಟು ತೀವ್ರಗೊಳಿಸಲಿದ್ದು ಚುನಾವಣಾ ಅಕ್ರಮಗಳು ನಡೆಯದಂತೆ ಹಾಗೂ ಮುಕ್ತ ಚುನಾವಣೆಗೆ ಅನುಕೂಲವಾಗುವ ದಿಸೆಯಲ್ಲಿ ಅವರು ಕಾರ್ಯ ನಿರ್ವಹಿಸಲಿದ್ದಾರೆ.

ಚುನಾವಣೆ ಅಕ್ರಮಗಳ ಸಂಬಂಧ ದೂರುಗಳು ಇದ್ದಲ್ಲಿ ವಿಶೇಷಾಧಿಕಾರಿಗಳಾದ ಮುನೀಷ್ ಮೌದ್ಗಿಲ್ ಅವರ ಮೊಬೈಲ್ ಸಂಖ್ಯೆ 9900099111 ಈ ನಂಬರಿಗೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.