ಮುಳವಾಡ ಗೌರಿ ಜಾತ್ರೆಯ ಸಾಂಸ್ಕೃತಿಕ ವೈಭವ
Mulwad Gauri Fair
ವಿಜಯಪುರ 16: ಉತ್ತರ ಕರ್ನಾಟಕದ ಜಾತ್ರೆಗಳು ಎಂದರೆ ಒಂದು ವಿಶೇಷ “ಜಾತ್ರಿ” ಎಂಬ ಪದವು ಹಿಂದಿಯ “ಜಾ” ಎಂದು, ಅಂದರೆ ಹೋಗು/ಕಳೆದು ಕೊಳ್ಳು “ತ್ರೀ” ಎಂದರೆ “ಮೂರು” ಇಲ್ಲಿ ಪ್ರಮುಖ ವಾಗಿ ಮೂರು ಹೋಗುತ್ತವೆ. ಒಂದು ಶ್ರಮ, ಇನ್ನೊಂದು ಹಣ, ಮತ್ತೊಂದು ನಿದ್ದೆ, ಇವು ಮೂರು ಖರ್ಚು ಆದಾಗಲೇ, ಅದು ಜಾತ್ರೆಯಾ ಗುವುದು ಎನ್ನುತ್ತಾರೆ ಹಿರಿ ಯರು.ವಿಜಯಪುರ ಜಿಲ್ಲೆಯ ಈಗಿನ ಕೋಲ್ಹಾರ ತಾಲ್ಲೂ ಕಿನ “ಮುಳವಾಡ” ಒಂದು ಸುಂದರ ಗ್ರಾಮ. ಫಲವತ್ತಾದ ಕಪ್ಪು ಮಣ್ಣಿನ ವಿಶಾಲ ಪ್ರದೇಶವನ್ನು ಹೊಂದಿರುವ ಈ ಊರಿನ ಜನರ ಪ್ರಮುಖ ಉದ್ಯೋಗ ಒಕ್ಕಲುತನ. ಇಲ್ಲಿಯ ಕ್ಷೇತ್ರಾದಿ ದೇವರು ಶಿವರಾಯ, ಮಹಾ ದೇವ, ಗೌರಿಶಂಕರ, ಎಂಬ ವಿವಿಧ ನಾಮಗಳಿಂದ ಕರೆಯ ಲ್ಪಡುವ ಭವ್ಯ ಮಂದಿರ ವನ್ನು ಅವರು ಶಿಲ್ಪಿ ಜಕಣಾ ಚಾರಿಯಿಂದ ಕೆತ್ತಲ್ಪಟ್ಟಿತು ಎಂದು ಹೇಳಲಾಗುವ ಪುರಾ ತನ ಗುಡಿ ಮತ್ತು ಗರ್ಭ ಗುಡಿಯನ್ನು, ಊರಿನ ಗ್ರಾಮ ಸ್ಥರೆಲ್ಲ ಸೇರಿ ಅಭಿವೃದ್ಧಿಪಡಿಸಿ ದ್ದಾರೆ. ಅಂದರೆ, ತನು, ಮನ ಧನವನ್ನುಅರ್ಪಿಸಿದ್ದಾರೆ. ದೇವಾಲಯಕ್ಕೆ ಸುಂದರ ಮುಖಮಂಟಪ, ಪ್ರದಕ್ಷಿಣಾ ಪಥ, ಸುಖನಾಸಿ, ವಿಶಾಲ ಪೌಳಿ, ಗಗನಚುಂಬಿ ಗೋಪುರ ನಿರ್ಮಿಸಲಾಗಿದೆ. ಗೋಪುರ (ಶಿಖರ)ದಲ್ಲಿ ರಾಮಾಯಣ ಹಾಗೂ ಮಹಾಭಾರತದ ಸನ್ನಿ ವೇಶಗಳನ್ನು ಬಿಂಬಿಸುವ 12ನೇ ಶತಮಾನದ ವಚನಕಾರರ ಮತ್ತು ನವನಾಥರ ಶಿಲ್ಪಗಳನ್ನು ರೂಪಿಸಲಾಗಿದೆ. ಸುಂದರ ಮೂರ್ತಿಗಳನ್ನು ಮಾಡಲಾಗಿದೆ. ಮೂರ್ತಿಗಳ ವಿನ್ಯಾಸ ಮತ್ತು ಬಣ್ಣ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿದೆ. ಗರ್ಭ ಗುಡಿಯಲ್ಲಿ ಶಿವ, ಗಂಗೆ, ಗೌರಿ, ಗಣೇಶ, ಷಣ್ಮುಖ, ಮತ್ತು ಇವರುಗಳ ವಾಹನಗಳು ್ಘ ಇಬ್ಬರು ಮದ್ದಳೆಯರ ವಿಗ್ರಹಗಳಿವೆ.
“ಸಾಂಸ್ಕೃತಿಕ ಹಬ್ಬ”-
ಇಲ್ಲಿ ಸಾಂಸ್ಕೃತಿಕ ಹಬ್ಬ ಎಂಬ ಪದವನ್ನೇಕೆ ಬಳಸಿದ್ದೇ ನೆಂದರೋ ಪ್ರತಿ ವರ್ಷವು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು, ಅಂದರೆ ಗೌರಿಹುಣ್ಣಿಮೆಯಾದ ಎಂಟನೇ ದಿನಕ್ಕೆ ಆರಂಭ ವಾಗುವ (ಜಾತ್ರೆ) ಹಬ್ಬ. ಮುಂದಿನ ಐದು ದಿನಗಳ ವರೆಗೆ ಅಂದರೆ ತ್ರಯೋದಶಿಯವರೆಗೆ ವಿಜೃಂಭ ಣೆಯಿಂದ ಜರುಗುತ್ತದೆ. ಊರಿನ ಎಲ್ಲಾ ಜಾತಿ, ಮತ, ಪಂಥ, ಧರ್ಮಿಯರು ಕೂಡಿ ಮಾಡುವ ಈ ಜಾತೆ,್ರ ಜಿಲ್ಲೆಯ ವಿಶಿಷ್ಟ ಜಾತ್ರೆಗಳಲ್ಲಿ ಒಂದು. ಸರಕಾರದ ಯಾವುದೇ ಧನ, ಸಹಾಯಗಳಿಲ್ಲದೆ ಮತ್ತು ಅದನ್ನು ಅಪೇಕ್ಷಿಸದೆ ಇಡೀ ಗ್ರಾಮಸ್ಥರೆ ಒಂದಾಗಿ ಮಾ ಡುವ ಜಾತ್ರೆಯಾಗಿದೆ. ಯಾವ ಮೈಸೂರು ದಸರಾ, ಹಂಪಿ ಉತ್ಸವ, ರನ್ನ ಉತ್ಸವ, ನವರಸ ಪುರ ಉತ್ಸವಗಳಿಗಿಂತ ಏನೂ ಕಡಿಮೆ ಇಲ್ಲ ಎಂಬಂತೆ ವಿಜೃಂಭಣೆಯಿಂದ ಆಚರಿಸಲಾ ಗುತ್ತದೆ. ನಮ್ಮ ಜಿಲ್ಲೆಗೆ ಮಳೆಯ ಬರವಿದ್ದರು ಇಂತಹ ಸಂಸ್ಕೃತಿ, ಸಂಪ್ರದಾಯ, ಹಬ್ಬ, ಜಾತ್ರೆಗಳಿಗೆ ಎಂದೂ ಬರವಿಲ್ಲ.
ಈ ಜಾತ್ರೆಯ ವಿಶೇಷತೆ : ಜಾತ್ರೆಯ ವಿಶೇಷವೇನೆಂದರೆ, ಕಾರ್ತಿಕ ಮಾಸದ “ಕೃಷ್ಣ ಪಕ್ಷದ ಅಷ್ಟಮಿಯಂದುಮಣ್ಣಿನ ಒಂದು ಜೋಡು ಶಿವನ ಬೊಂಬೆಗಳು ಮತ್ತು ಎರಡು ಜೋಡು ಗೌರಿ ಮತ್ತು ಗಂಗೆಯರ ಬೊಂಬೆ ಗಳನ್ನು ಊರಿನ ಗೌರಿ ಗುಡಿ/ ಶಿವರಾಯನ ಗುಡಿಯಲ್ಲಿ ಪ್ರತಿಷ್ಠಾಪಿಸಿ ಮುಂದಿನ ಐದು ದಿನಗಳ ಕಾಲ ಅಂದರೆ ದ್ವಾದಶಿ ಯವರೆಗೂ ಪೂಜಿಸಿ ಹೊಳೆಗೆ ಕಳಿಸುವುದು ಜಾತ್ರೆಯ ವಿಶೇಷ ಗಳಲ್ಲೊಂದು.
* ಜಾತ್ರೆಯ ಇನ್ನೊಂದು ವಿಶೇಷ ವೆಂದರೆ, ದೇವರು ಪ್ರತಿಷ್ಠಾಪನೆ ಯಾದ ಅಷ್ಠಮಿ ದಿನದಿಂದ ಹಿಡಿದು ದ್ವಾದ ಶಿಯವರೆಗೆ ಊರಿನ ಹಿರಿ ಯರು, ಕಿರಿಯರು ಮೇಲು-ಕೀಳು ಎಂಬ ಬೇಧವಿಲ್ಲದೆ ಒನಕೆಯನ್ನು (ಒಣಕೆ) ತೊಳೆದು ಅದನ್ನು ವಿಭೂತಿಯಿಂದ ಸಿಂಗ ರಿಸಿ ಭಕ್ತಿಯಿಂದ ಹೆಗಲಿ ಗೇರಿಸಿ ತಪ್ಪದೇ ಜಾತ್ರೆಯಲ್ಲಿ 5 ದಿನ ಎಲ್ಲಾ ಪುರುಷರು ದೇವರ ದರ್ಶನಕ್ಕೆ ಹೋಗುವುದು ಒಂದು ವಿಶೇಷ. ಪ್ರತಿಯೊಂದು ಮನೆಯಿಂದ ಹೆಣ್ಣುಮಕ್ಕಳು ಆರತಿ ತೆಗೆದುಕೊಂಡು ಹೋಗು ವುದು ಮತ್ತೊಂದು ವಿಶೇಷ.
ಅಷ್ಟೇ ಅಲ್ಲ,ಕಿರಿಯರು, ಮಕ್ಕಳು, ಬೆಲ್ಲುಣಿಗೆ/ಲತ್ತುಡಿ ಯನ್ನು ತೆಗೆದುಕೊಂದು ಹೋಗುವರು. ಅಷ್ಟೇ ಅಲ್ಲ ದಾರಿಯಲ್ಲಿ “ಅಲಕ್ ಭಾವ ಗೋರಖನಾಥ” ಎಂದು ಹೇಳುತ್ತಾ ಸಾಗುವುದು ಇನ್ನೂ ವಿಶೇಷ. ಇದರ ಸ್ಪಷ್ಟ ರೂಪ “ಅಲಕ್ ನಿರಂಜನ್ ಗೋರಖ ನಾಥ” ಇದನ್ನು ಕೆಲವರು ‘ಹರ್ ಏಕ್ ಬಾವ್, ಎಂದು ಅರ್ಥೈಯಸುತ್ತಾರೆ. ಇದಕ್ಕೂ ಪೌರಾಣಿಕ ಹಿನ್ನಲೆಯು ಇದೆ.
* ಜಾತ್ರೆಯಲ್ಲಿ ಐದು ದಿವಸ ಗಳವರೆಗೆ ಗ್ರಾಮದ “ಕಳಸ ಗೊಂಡ’ ಮನೆತನದ ಗಂಡಸರು ಸೀರೆಯುಟ್ಟು ಕಳಸದಾರತಿ ಯನ್ನು ಹಿಡಿಯುತ್ತಾರೆ ಇದು ಜಾತ್ರೆಯ ವಿಶಿಷ್ಟಗಳಲ್ಲೊಂದು.
ಊರಿನ ಮುಸ್ಲಿಂ ಬಾಂಧ ವರು ಕೂಡ ಜಾತ್ರೆಗೆ ಮನೆ, ಹಾಸಿಗೆಗಳನ್ನು ಮಡಿಮಾಡಿ ದೇವರಿಗೆ ನೈವೇದ್ಯ ಸಲ್ಲಿಸು ವುದು. ಗ್ರಾಮದ ಭಾವೈಕ್ಯತೆಗೆ ಹಿಡಿದ ಕನ್ನಡಿಯಾಗಿದೆ.
ನಾಟಕೋತ್ಸವ : ಜಾತ್ರೆಯಲ್ಲಿ ಊರಿನ ಯುವಕರೇ ನಿರ್ಮಿ ಸಿರುವ ಶ್ರೀ ಸತ್ಯ ಸಾಯಿಬಾಬಾ ರಂಗಮಂದಿರದಲ್ಲಿ ಜಾತ್ರೆಯ ಐದು ದಿನವೂ ಊರಿನ ವಿವಿಧ ನಾಟ್ಯ ಸಂಘಗಳಿಂದ ನಾಟಕ ಗಳು ಪ್ರದರ್ಶನಗೊ ಳ್ಳುತ್ತವೆ. ನಾಟಕಗಳ ನಾಟ್ಯ ಸಂಘ ಗಳಿಂದ ನಾಟಕಗಳು ಪ್ರದರ್ಶನ ಗೊಳ್ಳು ತ್ತವೆ. ನಾಟಕಗಳ ಪ್ರದರ್ಶನ ರಾತ್ರಿ ಹತ್ತು ಗಂಟೆಯಿಂದ ಬೆಳಗಿನ ಆರು ಗಂಟೆಯವರೆಗೆ, ಹಗಲಿ ನಲ್ಲಿ ವಿವಿಧ ರೀತಿಯ ಸಾಂಸ್ಕೃ ತಿಕ ಕಾರ್ಯಕ್ರಮಗಳು ಹಲವು ವೇದಿಕೆಗಳಲ್ಲಿ ನಡೆಯು ತ್ತವೆ. ಅಂದರೆ ಗೀಗಿ ಪದಗಳು, ಶ್ರೀ ಕೃಷ್ಣ ಪಾರಿಜಾತ, ಡೊಳ್ಳು ಕುಣಿತ, ಶಹನಾಯಿ ವಾದ್ಯ, ಸಂಬಾಳ ವಾದ್ಯ, ಹೀಗೆ ಕಲಾ ರಸಿಕರ ಮನ ತಣಿಸುವಂತಹ ವಿವಿಧ ಸಾಂಸ್ಕೃತಿಕ ಹಬ್ಬದೂಟ ವನ್ನು ಉಣಬಡಿಸುತ್ತವೆ.
ಕ್ರೀಡಾ ಪ್ರಿಯರಿಗೆ : ಊರಿನ ಯುವಕರು ಜಾತ್ರೆಯಲ್ಲಿ ವಿವಿಧ ಕ್ರೀಡೆಗಳನ್ನು ಕೂಡ ಆಯೋ ಜಿಸಿರುತ್ತಾರೆ. ಮುಳವಾಡ ಪ್ರಿಮಿ ಯರ್ ಲೀಗ್ ಕ್ರಿಕೆಟ್, ವಾಲಿ ಬಾಲ್,ಪ್ರೋ ಕಬ್ಬಡ್ಡಿ,ಮಲ್ಲಗಂಬ, ಕುಸ್ತಿ, ಹಗ್ಗ ಜಗ್ಗಾಟ, ಟಗರಿನ ಕಾಳಗ, ಸ್ಲೋ ಆಂಡ್ ಫಾಸ್ಟ್ , ಸೈಕಲ್ ರೇಸ್, ವಾಹನ ಚಾಲನೆ, ಟ್ರ್ಯಾಕ್ಟರ್ ಹಿಮ್ಮುಖ ಚಾಲನೆ (ಟ್ರೈಲರ್ ಸಮೇತ) ಭಾರ ಎತ್ತುವ ಸ್ಪರ್ಧೆ ಮದ್ದು ಸುಡುವ ಕಾರ್ಯಕ್ರಮ ಹೀಗೆ ಪ್ರತಿ ವರ್ಷವೂ ಒಂದೊಂದು ವಿಶೇಷ ಕ್ರೀಡೆಯನ್ನು ಸೇರಿ ಸುತ್ತಾ, ಜಾತ್ರೆ ಯಲ್ಲಿ ಊರಿನ ಮಲ್ಲಿಕಾರ್ಜುನ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಓಲಂಪಿಕ್ ನಡೆದಿದೆ ಏನೋ ಎಂಬಂತೆ ಭಾಸವಾಗುತ್ತದೆ.
ಜಾತ್ರೆಯ ಕೊನೆಯ ದಿನ ಶೌರ್ಯ ಪ್ರಿಯರಾದ ಉತ್ತರ ಕರ್ನಾಟಕದ ಕನ್ನಡಿಗರ ನೆಚ್ಚಿನ ಜಂಗೀ ನಿಕಾಲಿ ಕುಸ್ತಿಗಳು ಮೈಮನ ಪುಳಕಗೊಳಿಸುತ್ತವೆ. ನೆರೆಯ ಮಹಾರಾಷ್ಟ್ರದ ಸೊಲ್ಲಾ ಪುರ, ಜತ್ತ ಸಾಂಗ್ಲಿ ಹಾಗೂ ನಮ್ಮ ಬೆಳಗಾವಿ ಜಿಲ್ಲೆಗಳಿಂದ ಕುಸ್ತಿ ಪಟುಗಳು ಆಗಮಿ ಸುವರು.
ಮಕ್ಕಳ ಮನೋರಂಜನೆಯ ದೊಡ್ಡ ಚಿರಕಿಗಾಣಗಳು,ಮತ್ತು ಸಣ್ಣ ಚಿರಕಿಗಾಣಗಳು, ವಿವಿಧ ಬಗೆಯ ಬಲೂನ, ಗೊಂಬೆ ಗಳು, ಗೃಹೋಪಕರಣಗಳು, ಭಕ್ತಿ ಪ್ರಿಯರಿಗೆ ರುದ್ರಾಕ್ಷಿ, ವಿಭೂತಿ, ಪೂಜಾ ಸಾಮಗ್ರಿ ಮಾರುವ ಅಂಗಡಿಗಳು ಬಂದಿ ರುತ್ತವೆ. ಅಷ್ಟೆ ಅಲ್ಲ ಹೆಣ್ಣು ಮಕ್ಕಳ ಹಾಗೂ ಮುತ್ತೈದೆ ಯರ ನೆಚ್ಚಿನ ಬಳೇ ಅಂಗಡಿ ಗಳು ಒಂದೇ ಎರಡೇ ಅಲ್ಲದೆ ಬಂದ ಭಕ್ತರಿಗೆ ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನ ದಲ್ಲಿ ಉಚಿತ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿರುತ್ತದೆ.
ಈ ಬಾರಿಯ ಗೌರಿ ಜಾತ್ರೆಯು ಇದೆ ನವೆಂಬರ, ದಿ. 15, 16, 17-2025ರಂದು ವಿಜೃಂಭಣೆಯಿಂದ ಜರು ಗುವದು. ಮತ್ತೊಮ್ಮೆ ತನ್ನ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಸಾರುವದು ಇದೇ 17ನೇ-ನವೆಂಬರ್-2025ರಂದು ಕುಸ್ತಿ ಹಾಗೂ ಹೆಣ್ಣು ಮಕ್ಕಳಿಗೆ ಬಳೆ ಇಡಿ ಸುವ ಕಾರ್ಯಕ್ರಮಗ ಳೊಂದಿಗೆ ಕೊನೆಗೊಳ್ಳುವುದು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 