ಮುಧೋಳ ವಿಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷ,ಉಪಾಧ್ಯಕ್ಷರ ಅವಿರೋಧ ಆಯ್ಕೆ

Mudhola VSSN Bank Chairman, Vice Chairman elected unopposed

ಮುಧೋಳ ವಿಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷ,ಉಪಾಧ್ಯಕ್ಷರ ಅವಿರೋಧ ಆಯ್ಕೆ 

ಯಲಬುರ್ಗಾ 08: ತಾಲೂಕಿನ ಮುಧೋಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನೀಲವ್ವ ಶ್ರೀಶೈಲಪ್ಪ ತಮ್ಮಿನಾಳ ಅಧ್ಯಕ್ಷರಾಗಿ,ಉಪಾಧ್ಯಕ್ಷರಾಗಿ ಶಂಕರಗೌಡ ಲಿಂಬನಗೌಡ ಉಳ್ಳಾಗಡ್ಡಿ  ಅವಿರೋಧವಾಗಿ ಆಯ್ಕೆಗೊಂಡರು. 

  ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ  ನೀಲವ್ವ ಶ್ರೀಶೈಲಪ್ಪ ತಮ್ಮಿನಾಳ,ಚೆನ್ನಸಂಗಪ್ಪ ಸಂಗಪ್ಪ ಹವಳದ,ಉಪಾಧ್ಯಕ್ಷ ಸ್ಥಾನಕ್ಕೆ ಶಂಕರಗೌಡ ಲಿಂಬನಗೌಡ ಉಳ್ಳಾಗಡ್ಡಿ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿ ಸುರೇಶ ವೇದಪಾಠಕ ಅವರಿಗೆ ಸಲ್ಲಿಸಿದರು.ನಂತರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಚೆನ್ನಸಂಗಪ್ಪ ಸಂಗಪ್ಪ ಹವಳದ ತಮ್ಮ ನಾಮಪತ್ರವನ್ನು ವಾಪಸ್ಸು ತೆಗೆದುಕೊಂಡಿದ್ದರಿಂದ ಅಧ್ಯಕ್ಷರಾಗಿ ನೀಲವ್ವ ಶ್ರೀಶೈಲಪ್ಪ ತಮ್ಮಿನಾಳ,ಉಪಾಧ್ಯಕ್ಷರಾಗಿ ಶಂಕರಗೌಡ ಲಿಂಬನಗೌಡ ಉಳ್ಳಾಗಡ್ಡಿ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ಸುರೇಶ ವೇದಪಾಠಕ ಪ್ರಕಟಿಸಿದರು. 

ಈ ಸಂದರ್ಭದಲ್ಲಿ,ವಿಎಸ್‌ಎಸ್‌ಎನ್ ಬ್ಯಾಂಕ್ ಕಾರ್ಯದರ್ಶಿ ಅಮರೇಶ ಶಿವಶಿಂಪರ,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಬಿಜೆಪಿ ಮುಖಂಡ ರತನ ದೇಸಾಯಿ, ಅಪ್ಪಣ್ಣ ಪಲ್ಲೇದ.ಸದಾಶಿವಯ್ಯ ಮಠದ,ಉಮೇಶಪ್ಪ ವಿವೇಕಿ,ನಾಗಪ್ಪ ಹೊಲಿ,ಮುತ್ತಣ್ಣ ಬೆಲ್ಲದ,ಇಮಾಮಸಾಬ ಹಿರೇಮನಿ,ಹಂಚ್ಯಾಳಪ್ಪ ತಳವಾರ,ಗುರ​‍್ಪ ಅಂಗಡಿ,ಶ್ಯಾಮಿದಸಾಬ ಮುಲ್ಲಾ,ಡಾ,ಕಾಶಿನಾಥ ಕೂಕನೂರು,ಮುತ್ತಣ್ಣ ಗೊಂಗಡಿಶೆಟ್ಟಿ,ವೀರಣ್ಣ ರಾಂಪೂರು,ಪರಸಪ್ಪ ಲಮಾಣಿ,ಭೀಮಣ್ಣ ಬಂಡಿ,ಅಶೋಕ ಬೆಟಗೇರಿ,ಬಸವರಾಜ ರಾಮಶೆಶೆಟ್ಟಿ,ಸಂಗಪ್ಪ ಹುನಗುಂದ,ಕಳಕಪ್ಪ ಹಿರೇಮನಿ,ಭೀಮಪ್ಪ ವಡ್ಡರ,ಕಳಕಪ್ಪ ಹಿರೇಹಾಳ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು