ಮಾಂಸದ ವಾಸನೆಯಲ್ಲಿ ಕಲಿಯುತ್ತಿರುವ ಕಂದಮ್ಮಗಳು

ಮುಂಡಗೋಡ 2: ಎಳೆಯ ಮಕ್ಕಳು ಆಟವಾಡುತ್ತ ಪಾಠ ಕೇಳಬೇಕು. ಆದರೆ ಇಲ್ಲಿ ಆಟವಾಡಲು ಮೈದಾನವಿಲ್ಲ. ಪಾಠ ಕೇಳಲು ವಿಶಾಲವಾದ ಕೊಠಡಿಯಿಲ್ಲ. ಹೊರಗೆ ಹೋಗೋಣವೆಂದರೆ ಜಾನುವಾರು ಮಾಂಸದ ವಾಸನೆ ಮೂಗಿಗೆ ರಾಚುತ್ತದೆ. ಒಂದಿಷ್ಟು ಸಮಯ ಆಟದ ಜೊತೆ ಪೌಷ್ಟಿಕ ಆಹಾರ ಸವಿದು ಸಕ್ಕರೆ ನಿದ್ರೆ ಮಾಡಬೇಕಿರುವ ಪುಟಾಣಿಗಳು ಇಂತಹ ನ್ಯಾಯಸಮ್ಮತವಲ್ಲದ ವಾತಾವರಣದಲ್ಲಿ ದಿನ ಕಳೆಯುತ್ತಿದ್ದಾರೆ.

  ಹೌದು.. ಪಟ್ಟಣದ ಬನ್ನಿಕಟ್ಟೆ ಹತ್ತಿರವಿರುವ ಮಹಿಳಾ ಮತ್ತು ಶಿಶು ಅಭಿವೃದ್ದಿ ಇಲಾಖೆಯ ಅಂಗನವಾಡಿ ಕೇಂದ್ರವೊಂದು ಎಲ್ಲ ಸೌಲಭ್ಯಗಳಿಂದ ವಂಚಿತವಾಗಿ, ಇಕ್ಕಟ್ಟಾದ ಸ್ಥಳ ಹಾಗೂ ಕಾನೂನು ಬಾಹಿರ ಚಟುವಟಿಕೆ ನಡೆಯುವ ಸ್ಥಳದ ಆಸುಪಾಸಿನಲ್ಲಿ ನಡೆಯುತ್ತಿದೆ. ಎಳೆಯ ಮಕ್ಕಳ ಕನಸುಗಳಿಗೆ ಜೀವ ತುಂಬಬೇಕಿರುವ ಅಧಿಕಾರಿಗಳು ಕಣ್ಣಿಗೆ ಕಾಣುವಂತಿದ್ದರೂ ಕಾಣದಂತೆ ವತರ್ಿಸುತ್ತಿದ್ದಾರೆ. ಅಂಗನವಾಡಿ ಮಕ್ಕಳ ಸಬಲೀಕರಣಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವ ಸಕರ್ಾರ ಇಂತಹ ಸನ್ನಿವೇಶವನ್ನು ಬದಲಾಯಿಸದಿರುವುದು ದುರಂತ ಎನ್ನಬಹುದು.

  ಅಂಗನವಾಡಿ ಹಿಂದುಗಡೆ ದೊಡ್ಡದಾದ ಹೊಂಡವಿದೆ. ಎದುರಿಗೆ ಜಾನುವಾರು ಮಂಸದ ಅಂಗಡಿಯಿದೆ. ಎಡಭಾಗಕ್ಕೆ ದೇವಸ್ಥಾನವಿದೆ. ಮಧ್ಯಭಾಗದಲ್ಲಿ ರಸ್ತೆಯಿದೆ. ಒಂತರಾ ಮಕ್ಕಳು ಅಂಗನವಾಡಿಗೆ ಬರುವುದಕ್ಕಿಂತ ಮನೆಯಲ್ಲಿಯೇ ಇದ್ದು ದಿನ ಕಳೆದರೆ ಉತ್ತಮ ಆರೋಗ್ಯವನ್ನಾದರೂ ಉಳಿಸಿಕೊಳ್ಳಬಹುದು. ಇಲ್ಲವಾದರೆ ವಯಸ್ಸಿಗೆ ತಕ್ಕದಲ್ಲದ ಮಾಂಸದ ವಾಸನೆಯನ್ನು ಸೇವಿಸುತ್ತ ಇನ್ನಿಲ್ಲದ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಮಕ್ಕಳ ಪಾಲಕರು ದೂರುತ್ತಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಸುಮಾರು 7 ವರ್ಷಗಳಿಂದ ಈ ಅಂಗನವಾಡಿ ಕೇಂದ್ರವು ಅಂತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು ಸಮಾಜ ಮಂದಿರದ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಸುಮಾರು 28 ಕ್ಕೂ ಹೆಚ್ಚು ಮಕ್ಕಳ ಹಾಜರಾತಿಯಿದೆ. ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳ ಸಂಗ್ರಹಣೆ, ವಿಶ್ರಾಂತಿ ಹಾಗೂ ಅಡುಗೆ ಮಾಡುವದು ಒಂದೆ  ಕೊಠಡಿಯಲ್ಲಿದೆ.

  ಅಂಗನವಾಡಿ ಹತ್ತಿರವಿರುವ ಮಾಂಸದ ಅಂಗಡಿ ವಾಸನೆಗೆ ಮಕ್ಕಳು ಕುಳಿತು ಪಾಠ ಕಲಿಯುವಂತಾ ಸ್ಥಿತಿ ನಿಮರ್ಾಣವಾಗಿದೆ. ಅಗತ್ಯ  ಶೌಚಾಲಯವಿಲ್ಲಾ. ಆಟವಾಡಲು ಹೊರಗೆ ಮಕ್ಕಳು ಬಂದರೆ ಮಾಂಸದ ಅಂಗಡಿಯಲ್ಲಿ ತುಗಾಡುತ್ತಿರುವ ಮಾಂಸವನ್ನು ನೋಡುತ್ತಿರಬೇಕಾದ  ಪರಿಸ್ಥಿತಿಯಿದೆ.  ಅಂಗನವಾಡಿ ಬಲಗಡೆ  ನೀರು ತುಂಬಿದ ಗಟಾರ ಮತ್ತು ವಾಹನಗಳು ಓಡಾಡುವ ರಸ್ತೆ ಹಿಂದುಗಡೆ ಹೋದರೆ ಹೊಂಡದಂತಿರುವ ಗುಂಡಿಯಿದೆ. ಮಕ್ಕಳಿಗೆ ಆಹಾರವನ್ನು ಒದಗಿಸಿರುವುದು ಬಿಟ್ಟರೆ ಈ ಅಂಗನವಾಡಿ ಮಕ್ಕಳಿಗೆ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ.

  ಈ ಪಟ್ಟಣದಲ್ಲಿನ ಹೃದಯ ಭಾಗದಲ್ಲಿರುವ ಅಂಗನವಾಡಿಗೆ ಕಟ್ಟಡ ಕಟ್ಟಲು ಜಾಗೆ ಕೊಡದೆ ಇರುವುದರಿಂದ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದಂತಾಗೆದೆ ಎಂಬುದು ಒಂದು ಕಡೆ ಆದರೆ ಮತ್ತೊಂದು ಕಡೆ ಕಟ್ಟಡದ ಕೊರತೆಯಿಂದ ಕಂದಮ್ಮಗಳು ಮೂಲ ಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದಾರೆ ಇನ್ನಾದರು ಅಂಗನವಾಡಿ ಕೇಂದ್ರದ ಮಕ್ಕಳ ಸಮಸ್ಯೆಯನ್ನು ತಿಳಿದು ಸಿಡಿಪಿಒ ಹಾಗೂ ಜನಪ್ರತಿನೀಧಿಗಳು ಜಾಗೆ ಹುಡುಕಿ ಕಟ್ಟಡ ನಿಮರ್ಿಸಲು ಮುಂದಾಗುವರೆ ಮಕ್ಕಳ ಭವಿಷ್ಯಕ್ಕೆ ದಕ್ಕೆತರುತ್ತಿರುವ ಮಾಂಸದ ಅಂಗಡಿಯನ್ನು ತೆಗೆದು ಹಾಕುವರೆ  ಎಂದು ಕಾದು ನೋಡಬೇಕಾಗಿದೆ. 

  ಇಲ್ಲಿರುವ ಮಾಂಸದ ಅಂಗಡಿಗೆ ಪರವಾನಿಗೆ ಕೊಟ್ಟವರು ಯಾರು ಮಾಂಸದ ಅಂಗಡಿಯ ಬಲಗಡೆ ಹಿಂದು ಮುಸ್ಲಿಂ ಭಾವೈಕತೆ ಸಾರುವ ಖಾದರಲಿಂಗ ದೇವಸ್ಥಾನ ಮತ್ತೊಂದು ಕಡೆ ಅಂಗನವಾಡಿ ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ ಮಾಂಸದ ಅಂಗಡಿಗೆ ಪಟ್ಟಣ ಪಂಚಾಯತದವರು ಪರವಾನಿಗೆ ಹೇಗೆ ನೀಡಿದೆ ಎಂಬುದು ಸಾರ್ವಜನಿಕರ ಪ್ರಶ್ನೆ ಆದರೆ ಮತ್ತೊಂದು ಕಡೆ ಖಾಯಿಲೆ ಇರುವ ದನಗಳ ಹಸಿ ಮಾಂಸದ ವಾಸನೆಯ ಸೇವನೆಯಿಂದ ಮಕ್ಕಳಿಗೆ ಮಾರಣಾಂತಿಕ  ಕಾಯಿಲೆಗಳು ಬರುವಂತಾ ಸಾಧ್ಯತೆ ಇದ್ದು ಕಾಯಿಲೆಗಳಿಗೆ ಮಕ್ಕಳು ತುತ್ತಾದರೆ ಹೊಣೆ ಯಾರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.