ತಾಯಿಯೇ ಮಕ್ಕಳಿಗೆ ಒಂದು ನೈತಿಕ ಶಕ್ತಿ: ರೂಪಾ ಜೋಶಿ
Mother is a moral force for children: Roopa Joshi
ಧಾರವಾಡ 19: ತಾಯಿಯೇ ಮಕ್ಕಳಿಗೆ ಒಂದು ನೈತಿಕ ಶಕ್ತಿ. ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿಯ ಪಾತ್ರ ಅನನ್ಯವಾದದು. ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂದು ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕದ ಲೇಖಕಿಯರ ಸಂಘದ ಅಧ್ಯಕ್ಷೆ ರೂಪಾ ಜೋಶಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಕುಸುಮ ವಿಠ್ಠಲರಾವ್ ದೇಶಪಾಂಡೆ ಸ್ಮರಣಾರ್ಥ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಶ್ರೇಷ್ಠ ತಾಯಿ ಸನ್ಮಾನ ಕಾರ್ಯಕ್ರಮದಲ್ಲಿ ‘ಆಧುನಿಕ ಜಗತ್ತಿನಲ್ಲಿ ತಾಯಿಯ ಪಾತ್ರ' ಕುರಿತು ಮಾತನಾಡುತ್ತಿದ್ದರು.
ನಮ್ಮನ್ನು ಹೆತ್ತವಳು ಮಾತ್ರ ತಾಯಿಯಲ್ಲ. ಹೃದಯದ ಅಂತರಾಳದಲ್ಲಿ ಮಾತೃತ್ವದ ಪ್ರೀತಿ, ಮಮತೆ, ತ್ಯಾಗ, ವಾತ್ಸಲ್ಯ ಉಕ್ಕಿದಾಗ ಮಾತ್ರ ತಾಯಿ ಎಂಬ ಶಬ್ದಕ್ಕೆ ಅರ್ಥ ಬರುತ್ತದೆ. ಮಾತೃತ್ವವು ಒಂದು ಭಾವನೆ. ಮಕ್ಕಳನ್ನು ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ಬೆಳೆಸುವುದು ತಾಯಿಯ ಮೊದಲ ಕರ್ತವ್ಯವಾಗಿದೆ. ಮಕ್ಕಳನ್ನು ಬೆಳೆಸುವಾಗ ಅತಿಯಾದ ಶಿಸ್ತು ಹಾಗೂ ಪ್ರೀತಿ ಬೇಡ. ಮಕ್ಕಳಲ್ಲಿ ಗುಣಾತ್ಮಕವಾದ ಬದಲಾವಣೆ ತರಲು ಅವರ ಜೊತೆ ಭಾವನಾತ್ಮಕವಾಗಿ ಬೆರೆಯಬೇಕು. ಸಮತೋಲನ ವ್ಯಕ್ತಿತ್ವ ನಿರ್ಮಾಣಕ್ಕೆ ಆಪ್ತತೆ, ಪ್ರೀತಿ ತೋರುವುದು ಬಹಳ ಮುಖ್ಯ.
ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಮಕ್ಕಳು ಜಾಲತಾಣಗಳಿಂದ ಆಕರ್ಷಿತರಾಗದಂತೆ ತಾಯಿ ಎಚ್ಚರಿಕೆ ವಹಿಸಬೇಕು. ಮಕ್ಕಳನ್ನು ತಾಯಂದಿರು ಪಠ್ಯ ಪುಸ್ತಕ ಹಾಗೂ ಅಂಕ ಗಳಿಕೆಗೆ ಮಾತ್ರ ಸೀಮಿತಗೊಳಿಸದೇ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಆತ್ಮವಿಶ್ವಾಸ ತುಂಬಬೇಕು. ಪಠ್ಯಪುಸ್ತಕ ಮೀರಿದ ಜೀವನವಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ತಾಯಿಯಾದವಳಿಗೆ ಮಾತೃತ್ವದ ಜೊತೆ ತಾಳ್ಮೆ ಸಂಯಮ ಬುದ್ಧಿವಂತಿಕೆಯೂ ಮುಖ್ಯ ಎಂದು ಹೇಳಿದರು.
ಶ್ರೇಷ್ಠ ತಾಯಿ ಗೌರವ ಸನ್ಮಾನ ಸ್ವೀಕರಿಸಿ, ಕಲ್ಪನಾ ಪ್ರಕಾಶ ನಾಯಕ ಮಾತನಾಡಿ, ಡಾ. ರಾಜನ್ ದೇಶಪಾಂಡೆ ಕುಟುಂಬದೊಂದಿಗೆ ನನಗೆ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ. ತಾಯಿ ಕುಸುಮ ಅವರು ನೀಡಿದ ಸಂಸ್ಕಾರದಿಂದ ಡಾ. ರಾಜನ್ ದೇಶಪಾಂಡೆ ಅವರು ಖ್ಯಾತ ವೈದ್ಯರಾಗಲು ಸಾಧ್ಯವಾಯಿತು. ಕುಸುಮ ವಿಠ್ಠಲರಾವ್ ದೇಶಪಾಂಡೆ ಕೇವಲ ಶ್ರೇಷ್ಠ ಗ್ರಹಿಣಿ ಮಾತ್ರವಲ್ಲ, ಬಹುಮುಖ ಪ್ರತಿಭಾವಂತರಾಗಿದ್ದರು. ಈ ಪ್ರಶಸ್ತಿ ನನ್ನ ಗೌರವ ಹೆಚ್ಚಿಸಿದೆ ಎಂದು ಹೇಳಿದರು.
ದತ್ತಿದಾನಿ ಡಾ. ರಾಜನ್ ದೇಶಪಾಂಡೆ ದತ್ತಿ ಆಶಯ ಕುರಿತು ಮಾತನಾಡಿದರು. ಕ.ವಿ.ವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಶ್ರೀನಿವಾಸ ವಾಡಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ವಿಶ್ವೇಶ್ವರಿ ಬ. ಹೀರೆಮಠ ವಂದಿಸಿದರು.
ಶಂಕರ ಕುಂಬಿ, ಸಿ.ಯು. ಬೆಳ್ಳಕ್ಕಿ, ಸತ್ಯನಾರಾಯಣ ಮಿಶ್ರಾ, ಕವಿತಾ ದೇಶಪಾಂಡೆ, ದಿವ್ಯಾ ದೇಶಪಾಂಡೆ, ನಾಗೇಶ ಶಾನಭಾಗ, ಗೌರವ ನಾಯಕ, ಮದುಸೂಧನ ಬಾಳಗಿ, ವಿ.ಎಸ್. ಕೋರಿಕಂತಿಮಠ, ಮಲ್ಲಿಕಾ ಘಂಟಿ ಸೇರಿದಂತೆ ದೇಶಪಾಂಡೆ ಅವರ ಪರಿವಾರದವರು ಕಾರ್ಯಕ್ರಮದಲ್ಲಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 