ತಾಯಿ ಮಗು ಕಾಣೆ; ಪತ್ತೆಗೆ ಮನವಿ

Mother and child are missing; Request for discovery

ತಾಯಿ ಮಗು ಕಾಣೆ; ಪತ್ತೆಗೆ ಮನವಿ 

ಬಳ್ಳಾರಿ 07:ತೋರಣಗಲ್ಲು ಗ್ರಾಮದ ನಿವಾಸಿ 26 ವರ್ಷದ ತಾಯಿ ಕೆ.ಪುಷ್ಪಾ ಹಾಗೂ ಮಗ 06 ವರ್ಷದ ವಿಶಾಲ್ ಅವರು ನ.21 ರಂದು ಕಾಣೆಯಾಗಿರುವ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಸಬ್‌-ಇನ್ಸ್‌ಪೆಕ್ಟರ್ ಆಫ್ ಪೊಲೀಸ್ ಅವರು ಮನವಿ ಮಾಡಿದ್ದಾರೆ. 

*ತಾಯಿಯ ಚಹರೆ:*ಎತ್ತರ 5.1 ಅಡಿ, ಕೋಲುಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ಸೀರೆ, ಕಪ್ಪು ಬಣ್ಣದ ಕುಬಸ ಕುಪ್ಪಸ ಧರಿಸಿರುತ್ತಾರೆ ಹಾಗೂ ಕನ್ನಡ, ತೆಲುಗು ಭಾಷೆ ಮಾತನಾಡುತ್ತಾಳೆ.*ಮಗುವಿನ ಚಹರೆ:* 

ಎತ್ತರ 3.1 ಅಡಿ, ಕೋಲು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಇದ್ದು, ಕಾಣೆಯಾದ ಸಂದರ್ಭದಲ್ಲಿ ಹರಿಶಿಣ ಬಣ್ಣದ ಗೆರೆಗಳುಳ್ಳ ಶರ್ಟ್‌ ಮತ್ತು ನೀಲಿ ಬಣ್ಣದ ನಿಕ್ಕರ್ ಧರಿಸಿರುತ್ತಾನೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ.ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ತಾಯಿ ಹಾಗೂ ಮಗುವಿನ ಬಗ್ಗೆ ಮಾಹಿತಿ ದೊರೆತಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯ ದೂ:08395-250100 ಅಥವಾ ಪಿಎಸ್‌ಐ ಮೊ:9480803062 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.