ಲೋಕದರ್ಶನ ವರದಿ
ಯಲಬುರ್ಗ 04: ಪ್ರತಿಯೊಬ್ಬ ತಾಯಿಯ ಎದೆ ಹಾಲು ಮಕ್ಕಳಿಗೆ ಅತ್ಯಂತ ಶ್ರೇಷ್ಠವಾದದ್ದು ಆದ್ದರಿಂದ ತಾಯಂದಿರು ಮಕ್ಕಳಿಗೆ ತಪ್ಪದೆ ಎದೆಯ ಹಾಲನ್ನು ಉಣಿಸಬೇಕು ಎಂದು ಅಂಗನವಾಡಿಯ ಮೆಲ್ವೀಚಾರಕಿ ಲಲಿತಾ ನಾಯಕ ಹೇಳಿದರು.
ತಾಲೂಕಿನ ಬಸಾಪೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಾಯಂದಿರು ಹಾಗೂ ಮಕ್ಕಳಿಗೆ ಹಲವಾರು ಯೋಜನೆಗಳಿದ್ದು ಅವುಗಳನ್ನು ಎಲ್ಲಾ ತಾಯಂದಿರು ಪ್ರಯೋಜನ ಪಡೆದುಕೊಳ್ಳಬೇಕು ನಿಮ್ಮ ಆರೋಗ್ಯದ ಜೋತೆಗೆ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಹಾಗೂ ಹೆಚ್ಚು ಹೆಚ್ಚು ಹಸಿರು ತರಕಾರಿಯನ್ನು ಬಳಸಬೇಕು ಮತ್ತು ಮೊಳಕೆ ಹೊಡೆದ ನೆನೆಸಿದ ಕಾಳುಗಳನ್ನು ತಿನ್ನಬೇಕು ಇದರಿಂದ ರಕ್ತಹಿನತೆ ಮತ್ತು ಮಕ್ಕಳಲ್ಲಿರುವ ಅಪೌಷ್ಠಿಕತೆ ದೂರವಾಗುತ್ತದೆ ಎಂದರು,
ಡಾ, ಅಂಜುಮ್ತಾಜ್ ತಾಯಿಯ ಎದೆ ಹಾಲಿನ ಮಹತ್ವದ ಬಗ್ಗೆ ವಿವಿರವಾಗಿ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಶರಣಪ್ಪ, ಆರೋಗ್ಯ ಸಹಾಯಕಿ ಈರಮ್ಮ, ಅಂಗನವಾಡಿ ಕಾರ್ಯಕತರ್ೆ ವಿಜಯಲಕ್ಷ್ಮೀ ಸೇರಿದಂತೆ ಅನೇಕ ಮಕ್ಕಳು ಹಾಗೂ ತಾಯಂದಿರು ಹಾಜರಿದ್ದರು.