ಕ್ಷೇತ್ರದ ಸರ್ವಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ: ಹಿಟ್ನಾಳ

ಲೋಕದರ್ಶನ ವರದಿ

ಕೊಪ್ಪಳ 10: ಗೊಂಡಬಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಹಾಲವತರ್ಿ, ಕುಣಿಕೇರಿ ತಾಂಡಾ, ಕುಣಿಕೇರಿ,ಚಿಕ್ಕಬಗನಾಳ, ಲಾಚನಕೇರಿ, ಕರ್ಕೆಹಳ್ಳಿ, ಹಾಗೂ ಅಲ್ಲಾನಗರ ಗ್ರಾಮಗಳಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಅಂದಾಜು ಮೊತ್ತ ರೂ.6.50 ಲಕ್ಷದ ರಸ್ತೆ, ಅಂಗನವಾಡಿ ಕಟ್ಟಡ, ಶಾಲಾ ಕೊಠಡಿ, ಕಾಮಗಾರಿಯ ಭೂಮಿಪೂಜೆ ಹಾಗೂ ಜನಸ್ಪಂದನಾ ಕರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಶಾಶ್ವತ ಯೋಜನೆಗಳನ್ನು ಕ್ಷೇತ್ರಕ್ಕೆ ನೀಡಿದ್ದು, ಇದರಲ್ಲಿ ಬಹುಮುಖ್ಯವಾಗಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಿರೇಹಳ್ಳಕ್ಕೆ ರೂ.33 ಕೋಟಿ ವೆಚ್ಚದಲ್ಲಿ ಬ್ರೀಜ್ ಕಂ ಬ್ಯಾರೇಜ್ ನಿರ್ಮಾಣ  ಕಾಮಗಾರಿಯು ಶೀಘ್ರವೇ ಕೈಗೊಡು ಇದರಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ. ಹಾಲವತರ್ಿ ಗ್ರಾಮದ ಕೆರೆ ಅಭಿವೃದ್ಧಿಗೆ ರೂ.1 ಕೋಟಿ ಅನುದಾನ ಇದೇ ಗ್ರಾಮದಲ್ಲಿ ಕೌಶಲ್ಯ ತರಬೇತಿ ಅಭಿವೃದ್ಧಿ ಭವನಕ್ಕೆ ರೂ.1 ಕೋಟಿ 90 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಪ್ರತಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವುದರಿಂದ ಗ್ರಾಮಸ್ವರಾಜ್ಯದ ಕನಸು ಸಹಕಾರವಾಗುತ್ತದೆ ಎಂದು ಹೇಳಿ ಸಕರ್ಾರದ ಅನುದಾನದವು ಸದ್ಬಳಕೆಯಾದಾಗ ಮಾತ್ರ ಮಾಡಿದ ಕೆಲಸಕ್ಕೆ ಮಹತ್ವ ಬರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಗುಳಪ್ಪ ಹಲಗೇರಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭುಮರೆಡ್ಡಿ, ಎ.ಪಿ.ಎಮ್.ಸಿ.ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಮುಖಂಡರುಗಳಾದ ವೀರುಪಣ್ಣ ಕುಣಿಕೇರಿ, ಕಾಳಪ್ಪ ರಾಠೋಡ, ಆನಂದ ಕಿನ್ನಾಳ, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಹೇಮಣ್ಣ ದೇವರಮನಿ, ಸೋಮಣ್ಣ ಬಾರಕರ, ಜಗದೀಶ ಕಕರ್ಿಹಳ್ಳಿ, ನಿಂಗಪ್ಪ ಲಾಚನಕೇರಿ, ಮಹೇಶ, ಅಭಿಯಂತರರಾದ ಅರವಿಂದ ಅಣ್ಣಿಗೇರಿ, ಗುತ್ತಿಗೆದಾರರಾದ ರಾಜಶೇಖರ, ಧ್ಯಾಮಣ್ಣ ಕರಿಗಾರ ಇನ್ನೂ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.