ಹಣ ಹಂಚಿ ಮತಪಡೆಯುವ ಟ್ರೆಂಡ್ ಪ್ರಾರಂಭಿಸಿದ್ದೇ ಅಸ್ನೋಟಿಕರ್: ಆರೋಪ

ಹಣ ಹಂಚಿ ಮತಪಡೆಯುವ ಟ್ರೆಂಡ್ ಪ್ರಾರಂಭಿಸಿದ್ದೇ ಅಸ್ನೋಟಿಕರ್: ಆರೋಪ

ಕಾರವಾರ 19:  ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಿಧಾನಸಭಾ ಕ್ಷೇತ್ರದ  ನೆರೆ ಕಾಮಗಾರಿ ತುತರ್ು ನಿರ್ವಹಣೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು 25 ಕೋಟಿ ರೂ,ಗಳನ್ನು ಶಾಸಕಿ ರೂಪಾಲಿ ನಾಯ್ಕ ಮನವಿ ಮೇರೆಗೆ ಬಿಡುಗಡೆ ಮಾಡಿದ್ದು, ಇದನ್ನು ಸಹಿಸದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೊಟ್ಟೆ ಕಿಚ್ಚಿನಿಂದ ಬಳಲುತ್ತಿದ್ದಾರೆ. 

ಅವರಿಗೇ ಬರೀ ಕಮಿಷನ್ ಹೊಡೆಯುವ ಕನಸು ಬೀಳುತ್ತವೆ ಎಂದು ಬಿಜೆಪಿ ವಕ್ತಾರರಾದ ರಾಜೇಶ್ ನಾಯ್ಕ ನೇರ ಆರೋಪ ಮಾಡಿದರು. ಅವರು ಸಚಿವರಾಗಿದ್ದಾಗ ಬರೀ ಕಮಿಷನ್ ದಂಧೆ ಮಾಡಿದ ಪರಿಣಾಮ ಈಗಲೂ ಕಮಿಷನ್ ಮತ್ತು ಕಾಮಗಾರಿಯಲ್ಲಿ ಪರ್ಸೆಂಟೇಜ್ ಕನಸು ಬೀಳುತ್ತಿವೆ. ಮುಖ್ಯಮಂತ್ರಿ ನೀಡಿದ ವಿಶೇಷ ಅನುದಾನಕ್ಕೆ ಅಧಿಕಾರಿಗಳು, ಇಲಾಖೆಗಳು ಯೋಜನೆ ರೂಪಿಸುತ್ತಿದ್ದಾರೆ. ಟೆಂಡರ್ ಹಂತದಲ್ಲಿ ಯೋಜನೆ ಇವೆ. ಹೀಗಿರುವಾಗ ಶಾಸಕರು ಶೇ.25 ಕಮಿಷನ್ ಹೊಡೆಯುತ್ತಿದ್ದಾರೆ ಎಂದು ಆಧಾರರಹಿತ ಆರೋಪಗಳನ್ನು ಮಾಡಿದರೆ ಬಿಜೆಪಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಸ್ನೋಟಿಕರ್ ಸಚಿವರಾಗಿದ್ದಾಗ ಹಣ ಮಾಡಿ ಅಷ್ಟೇ ಗೊತ್ತಿದೆ. ಜನರ ಸಮಸ್ಯೆಗೆ ಸ್ಪಂದಿಸಿದ್ದರೆ ಸೋಲುತ್ತಿರಲಿಲ್ಲ. ಗೂಂಡಾಗಿರಿ ರಾಜಕಾರಣ ಮಾಡಿದ್ದು, ಅಧಿಕಾರಕ್ಕಾಗಿ ಪಕ್ಷಕ್ಕೆ ಮತ್ತು ಮುಖ್ಯಮಂತ್ರಿಗೆ ತೊಂದರೆ ನೀಡಿದ್ದನ್ನು ಬಿಟ್ಟರೆ ಮತ್ತೇನನ್ನು ಮಾಡಲಿಲ್ಲ. ತಮ್ಮ ಕಾಲದಲ್ಲಿ ಮಾಡಿದ ಕೆಲಸಗಳ ಪಟ್ಟಿ ಕೊಡಲಿ ನೋಡೋಣ ಎಂದರು. 

ಕೈಗಾದಲ್ಲಿ ತಮ್ಮದೇ ಗುಂಪುಗಳನ್ನು ಕೆಲಸಕ್ಕೆ ಬಿಟ್ಟು ಅಲ್ಲಿ ಇವರಾಡುವ ಆಟ ಜನರಿಗೆ ಗೊತ್ತಿದೆ. ಕೈಗಾ ಯೋಜನೆ 1 ರಿಂದ 4 ಘಟಕಗಳಿಂದ ಮಾಡಿಕೊಂಡ ಲಾಭದ ಬಗ್ಗೆ ಬಹಿರಂಗ ಪಡಿಸಲಿ ನೋಡೋಣ ಎಂದು ಸವಾಲು ಹಾಕಿದರು. ಕೈಗಾ 5-6 ಘಟಕಕ್ಕೆ ಹೊಸದಾಗಿ ಭೂಮಿ ಪಡೆಯುತ್ತಿಲ್ಲ. ಇವು ಕಾಂಗ್ರೆಸ್ ಸಕರ್ಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಜಾರಿಗೆ ಬಂದ ಯೋಜನೆಗಳು. ವಾಸ್ತವದಲ್ಲಿ ಬಿಜೆಪಿ ಮೊದಲಿನಿಂದ ಕೈಗಾಕ್ಕೆ ವಿರೋಧ ಇತ್ತು. ಈಗ ಹೊಸದಾಗಿ ವಿರೋಧ ಮಾಡುವುದೇನು ಬಂತು. ವಿರೋಧ ಮಾಡಿ ಯೋಜನೆಗಳ ಲಾಭ ಪಡೆದವರು ಮಾಜಿ ಶಾಸಕರು. ಜಿಲ್ಲಾಧಿಕಾರಿ ನಕುಲ್ ಅವಿರಿದ್ದಾಗ ಸಾರ್ವಜನಿಕ ಅಹವಾಲು ಸಭೆ ನಡೆಸಿದ್ದರು. ಅಲ್ಲಿ ಹೋಗಿ ತಮ್ಮ ಅಭಿಪ್ರಾಯ ಮಂಡಿಸುವ ಬದಲು ರಸ್ತೆಯಲ್ಲಿ ಮಾಜಿ ಶಾಸಕರು ಹೊರಳಾಡಿದರು. ಹಾಲಿ ಶಾಸಕಿ ರೂಪಾಲಿ ನಾಯ್ಕರನ್ನು ಅಹವಾಲು ಸಭೆಗೆ ಹೋಗದಂತೆ ವಾತಾವರಣ ಏರ್ಪಡಿಸಿದರು. ರಸ್ತೆ ತಡೆ ಮಾಡಿದರು. ಇದು ಢೋಂಗಿ ರಾಜಕಾರಣ. ಇವರದ್ದೇ ಆದ ಕಾಮರ್ಿಕರ ಗುಂಪುಗಳು ಕೈಗಾದಲ್ಲಿ ಕೆಲಸ ಮಾಡುತ್ತಿವೆ. ಅದನ್ನು ನಿರಾಕರಿಸಲಿ ನೋಡೋಣ ಎಂದು ಸವಾಲು ಹಾಕಿದರು. ಹೋರಾಟಗಳಿಗೆ ಪ್ರಾಮಾಣಿಕತೆ ಇರಬೇಕು.  ಇಲ್ಲದೇ ಹೋದರೆ ಯಾವ ಯೋಜನೆಯೂ ನಿಲ್ಲುವುದಿಲ್ಲ. ಸ್ವಂತ ಲಾಭಕ್ಕೆ ಹೋರಾಡುವವರು ಯಾರೆಂದು ಜನರಿಗೆ ಗೊತ್ತಿದೆ. ಕೈಗಾ ಬಗ್ಗೆ ಕೇಂದ್ರ ಸಕರ್ಾರ ಸೂಕ್ತ ನಿಧರ್ಾರಕ್ಕೆ ಬರಲಿದೆ. ಆಗ ನಾವು ನಮ್ಮ ನಿಲುವು ಹೇಳುತ್ತೇವೆ ಎಂದರು. 

ಹಣ ಹಂಚುವ ಟ್ರೆಂಡ್ ಪ್ರಾರಂಭಿಸಿದರು: 

ಹಣ ಹಂಚಿ ಮತ ಪಡೆಯುವ ಟ್ರೆಂಡ್ ಪ್ರಾರಂಭಿಸಿದ್ದೇ ಆನಂದ ಅಸ್ನೋಟಿಕರ್ ಎಂದು ಬಿಜೆಪಿ ಮುಖಂಡ, ಜಿ.ಪಂ.ಸದಸ್ಯ ಜಗದೀಶ್ ನಾಯಕ ಆರೋಪಿಸಿದರು. ಬಿಜೆಪಿ ಸಕರ್ಾರದಲ್ಲಿ ಆನಂದ ಅಸ್ನೋಟಿಕರ್ ಮಂತ್ರಿಯಾಗಿದ್ದರು. ಅವರನ್ನು ನಾವು ಹತ್ತಿರದಿಂದ ಬಲ್ಲೆವು. ಜನಪರ ಕೆಲಸ ಮಾಡಿ ಎಂದು ಎಷ್ಟು ತಿಳಿಹೇಳಿದರೂ ಅವರು ಬದಲಾಗಲಿಲ್ಲ. ಈಗ ಅವರು ತಿರಸ್ಕೃತ ರಾಜಕಾರಣಿ. ಅವರ ಆರೋಪಗಳಿಗೆ ಬೆಲೆ ಇಲ್ಲ ಎಂದರು. 

ಬಿಜೆಪಿಯ ಹಿರಿಯ ರಾಜಕಾರಣಿ ಅರುಣ್ ನಾಡಕಣರ್ಿ ಮಾತನಾಡಿ ಅಸ್ನೋಟಿಕರ್ ಇನ್ನು ಸಹ ಸಚಿವ, ಶಾಸಕ, ಸಂಸದ ಎಂಬ ಗುಂಗಿನಲ್ಲಿ ಇದ್ದಾರೆ. ಅವರು ಸೋಲಿನ ಆತ್ಮಾವಾಲೋಕನ ಮಾಡಿಕೊಳ್ಳಲೇ ಇಲ್ಲ. ಸಮ್ಮಿಶ್ರ ಸಕರ್ಾರ ಇದ್ದಾಗ ಸಚಿವ ರೇವಣ್ಣ ಬಳಿ ಕುಳಿತು ಯಾರಿಗೆ ಯಾವ ಕಾಮಗಾರಿ ಎಂದು ಪತ್ರ ನೀಡಿ ನಿರ್ಧರಿಸುತ್ತಿದ್ದರು. ಕಮಿಷನತ್ ಪಡೆದೇ ಕಾಮಗಾರಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದ ಮನುಷ್ಯ. ಈಗ ವಿನಾಕಾರಣ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಕ್ಷೇತ್ರದಲ್ಲಿದ್ದೇನೆ ಎಂದು ತೋರಿಸಲು ಪತ್ರಿಕಾಗೋಷ್ಠಿ ಮಾಡುತ್ತಾರೆ. ಅಸ್ನೋಟಿಕರ್ ಸಂಸದ ಅನಂತ ಕುಮಾರ್ ಹೆಗಡೆಯನ್ನೇ ಬೈದದ್ದೇ ನಮಗೆ ವರದಾನವಾಯಿತು. ಜನ ಹೆಚ್ಚು ಮತದಿಂದ ಅನಂತ ಹೆಗಡೆಯನ್ನು ಗೆಲ್ಲಿಸಿದರು. ಅಸ್ನೋಟಿಕರ್ ಹತಾಶ ರಾಜಕಾರಣಿ ಎಂದು ನಾಡಕಣರ್ಿ ಬಣ್ಣಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರ ಘಟಕದ ಅಧ್ಯಕ್ಷ ಕಡರ್ುಕರ್, ಸುಭಾಷ್ ಗುನಗಿ, ಸಂಜಯ್ ನಾಯ್ಕ, ರಾಜೇಂದ್ರ ನಾಯ್ಕ, ನಿತಿನ್ ಪಿಕಳೆ ಇದ್ದರ