ದೇಶದ ರಕ್ಷಣೆ, ಅಭಿವೃದ್ಧಿಯಲ್ಲಿ ಮೋದಿಜಿ ಪಾತ್ರ ಅತ್ಯಂತ ಪ್ರಮುಖ'

ಲೋಕದರ್ಶನವರದಿ

ರಾಣೇಬೆನ್ನೂರು24: ದೇಶದ ರಕ್ಷಣೆಯಲ್ಲಿ ಮತ್ತು ಅಭಿವೃದ್ಧಿ ಪಥದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ವಿಶ್ವದ ಎಲ್ಲ ರಾಷ್ಟ್ರಗಳು ಒಪ್ಪಿಕೊಂಡು, ಅಪ್ಪಿಕೊಂಡು ಅವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ|| ಬಸವರಾಜ ಕೇಲಗಾರ ಹೇಳಿದರು. 

 ನಗರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಘಟಬಂಧನ್ ಹಾಗೂ ರಚಿಸಿಕೊಂಡು ಬಿಜೆಪಿ ಧೂಳಿಪಟ ಮಾಡಬೇಕೆನ್ನುವ ಉದ್ದೇಶ ಹೊಂದಿದ್ದರೆ ಇತ್ತ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೇಸ್ ಮೈತ್ರಿ ಮಾಡಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಬಹುಸ್ಥಾನ ಪಡೆದ ಬಿಜೆಪಿಗೆ ಆಡಳಿತ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇಂದು ನಡೆದ ಚುನಾವಣೆ ಅವರಿಗೆ ತಕ್ಕಪಾಠ ಕಲಿಸಿದಂತಾಗಿದೆ ಎಂದರು. 

ರಾಜ್ಯದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ನುಡಿಯುತ್ತ ಬಂದಂತೆ ರಾಜ್ಯದಲ್ಲಿ 25 ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಇದರ ಪರಿಣಾಮ ಕೆಲವೇ ದಿವಸಗಳಲ್ಲಿ ಕಾಂಗ್ರೇಸ್ ಜೆಡಿಎಸ್ ಮೈತ್ರಿ ಸಕರ್ಾರ ಪತನವಾಗುವುದರಲ್ಲಿ ಇದರಲ್ಲಿ ಸಂಶಯವಿಲ್ಲ. ಪ್ರಸ್ತುತ ರಾಜ್ಯದಲ್ಲಿರುವ ಮೈತ್ರಿ ಸಕರ್ಾರದ ಆಡಳಿತದ ಸಾಧಕ-ಬಾಧಕ ಕುರಿತು ಜನರೇ ಸದ್ಯದಲ್ಲಿ ತೀಮರ್ಾನಿಸಲಿದ್ದಾರೆ ಎಂದು ವಿಶ್ಲೇಷಿಸಿ ಮಾತನಾಡಿದರು. 

ಕಳೆದ 5 ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಯಾವುದೇ ಭ್ರಷ್ಟಚಾರವಿಲ್ಲದೆ ಸುಸೂತ್ರವಾಗಿ ಆಡಳಿತ ನಡೆಸುವುದರ ಮೂಲಕ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ಅಳವಡಿಸಿಕೊಂಡು ಮೋದಿಜಿ ಅಭಿವೃದ್ಧಿ ಕಾರ್ಯದಲ್ಲಿ ಮುಂದಾಗಿದ್ದಾರೆ. ಇದನ್ನು ಸಹಿಸದ ಕಾಂಗ್ರೇಸ್ನ ಮುಖಂಡರು ಅನಾವಶ್ಯಕವಾಗಿ ಅವರ ಬಗ್ಗೆ ಅಪಪ್ರಚಾರ ಮಾಡಿ ಅವಹೇಳನಗೊಂಡು ಇದೀಗ ಕಾಂಗ್ರೇಸ್ ಹೇಳಹೆಸರಿಲ್ಲದಂತೆ ದೂಳಿಪಟವಾಗಿದೆ ಎಂದರು. 

ರಾಜ್ಯದಲ್ಲಿ ಆಡಳಿತ ನಡೆಸಿದ ಅಪವಿತ್ರ ಮೈತ್ರಿ ಸಕರ್ಾರ ಕೇವಲ ತಮ್ಮ ಖುಚರ್ಿಗಳನ್ನು ಉಳಿಸಿಕೊಳ್ಳುವುದಕ್ಕಾಗಿ ವ್ಯರ್ಥ ಕಾಲಾಹರಣ ಮಾಡುವುದರ ಮೂಲಕ ಈ ರಾಜ್ಯದ ಜನರನ್ನು ವಂಚಿಸಿದ್ದಾರೆ. 

        ನುಡಿದಂತೆ ನಡೆಯದೆ ಅನ್ನದಾತನ ಹೊಟ್ಟೆಯ ಮೇಲೆ ಹೊಡೆದು ಅವರ ಶಾಪಕ್ಕೆ ಗುರಿಯಾಗಿದ್ದಾರೆ. ಕುಮಾರಸ್ವಾಮಿ ಮಾಡಿದ ಸಾಲಮನ್ನಾ ಕೇವಲ ಸುಳ್ಳು ಭರವಸೆ ಅಷ್ಟೆ ಅದು ಯಾವುದು ಪ್ರಯೋಜವಾಗಿಲ್ಲ ಎಂದು ಸಕರ್ಾರದ ಆಡಳಿತದ ಬಗ್ಗೆ ಕಿಡಿಕಾರಿದರು. 

      ಆಡಳಿತಾರೂಢ ಮೈತ್ರಿ ಸಕರ್ಾರದ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಜನರಿಗೆ ಭ್ರಮನಿರಸನಗೊಂಡಿದ್ದಾರೆ. ಶೀಘ್ರವೇ ಮೈತ್ರಿಯಲ್ಲಿ ಕಚ್ಚಾಟ ಆರಂಭಗೊಂಡು ಸಕರ್ಾರ ಪತನಗೊಳ್ಳಲಿದೆ.

    ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.  

ರಾಣೇಬೆನ್ನೂರು ದೊಡ್ಡಕೆರೆ ಅಭಿವೃದ್ಧಿಯಾಗುತ್ತಿರುವುದು ತಮಗೆ ಮತ್ತು ತಮ್ಮ ಪಕ್ಷದ ಎಲ್ಲರಿಗೂ ಸಂತೋಷ ತಂದಿದೆ. 

ಆದರೆ ಕೆರೆ ಒತ್ತುವರಿಯಾಗಿರುವ ಕುರಿತು ಪರಿಶೀಲನೆ ನಡೆಸುವಂತೆ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. 

 ಅದರ ಬಗ್ಗೆ ಯಾರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಸರಿಯಾಗಿರುವುದಾಗಿ ವರದಿ ಒಪ್ಪಿಸಿದ್ದಾರೆ. ಒತ್ತುವರಿಯಾಗಿರುವುದನ್ನು ಸರಿಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.