ಈಶಾನ್ಯ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದು ಮೋದಿ ಸರ್ಕಾರ : ಅಮಿತ್ ಷಾ


ಇಟಾನಗರ, ಏ 5 ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಶುಕ್ರವಾರ ಹೇಳಿದ್ದಾರೆ. 


ಐದು ವರ್ಷಗಳ ಹಿಂದೆ ಈಶಾನ್ಯ ರಾಜ್ಯಗಳಲ್ಲಿ ಯಾವ ಸ್ಥಿತಿ ಇತ್ತು ?. ಎಲ್ಲಾ ಕಡೆ ಅಶಾಂತಿ ತಾಂಡವವಾಡುತ್ತಿತ್ತು ಮತ್ತು ಅಭಿವೃದ್ಧಿ ಶೂನ್ಯವಾಗಿತ್ತು. ಆದರೆ ಈಗ ಪ್ರಧಾನಿ ಮೋದಿ ನೇತೃತ್ವದ ಸಕರ್ಾರ ಇಲ್ಲಿ ಸ್ಥಿರತೆ ಮತ್ತು ಶಾಂತಿ ನೆಲೆಸುವಂತೆ ಮಾಡಿದೆ. ಈಶಾನ್ಯ ಭಾಗ ಅಭಿವೃದ್ಧಿಯ ಪಥದಲ್ಲಿದೆ ಎಂದು ಅಮಿತ್ ಶಾ ಹೇಳಿದರು. 

ಅರುಣಾಚಲ ಪ್ರದೇಶದ ಚಾಂಗ್ಲಂಡ್ ಜಿಲ್ಲೆಯ ಬೋದರ್ಮ್ಸು ಎಂಬಲ್ಲಿ ಏರ್ಪಡಿಸಿದ್ದ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಈಶಾನ್ಯದ ಎಲ್ಲಾ ರಾಜ್ಯಗಳು ಈಗ ರೈಲು, ರಸ್ತೆ ಮತ್ತು ವಿಮಾನ ಸಂಪರ್ಕಗಳನ್ನು ಹೊಂದಿವೆ. ಇಟಾನಗರದಲ್ಲಿ ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ಷಾ ಹೇಳಿದರು. 

ಈಶಾನ್ಯ ರಾಜ್ಯಗಳ ಎನ್ಇಸಿ ಸಭೆ ಕಳೆದ 40 ವರ್ಷಗಳಿಂದ ನಡೆದಿರಲಿಲ್ಲ. ಮೊರಾರ್ಜಿ  ದೇಸಾಯಿ ಪ್ರಧಾನಿಯಾಗಿದ್ದಾಗ ಕೊನೆಯ ಸಭೆ ನಡೆದಿತ್ತು. ಬಳಿಕ ಮೋದಿ ಅವರು ಪ್ರಧಾನಿಯಾದ ಬಳಿಕ ಮತ್ತೆ ಸಭೆ ನಡೆಯಿತು ಎಂದು ಅಮಿತ್ ಷಾ ಹೇಳಿದರು. 

ದೇಶದ ಜನ ಮುಂದಿನ ಸರ್ಕಾರವನ್ನು ನಿರ್ಧರಿಸಲಿದ್ದಾರೆ. ದೇಶದಲ್ಲಿ ಅನೇಕ ಬದಲಾವಣೆಗಳನ್ನು ತರಲು ನರೇಂದ್ರ ಮೋದಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು. 

ಅರುಣಾಚಲ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಮೋದಿ ಸರ್ಕಾರ  50000 ಕೋಟಿ ರೂ. ಅನುದಾನ ನೀಡಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಅರುಣಾಚಲ ಪ್ರದೇಶಕ್ಕೆ ಏಮ್ಸ್ ಸಂಸ್ಥೆ ದೊರೆಯಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಭರವಸೆ ನೀಡಿದರು.