ಪವಾಡ ಪುರುಷ ಗುದ್ನೇಶ್ವರ ಸ್ವಾಮಿ: ಕುಕನೂರ ಕ್ಷೇತ್ರ ಪಾವನ- ಯಲಬುರ್ಗಾ

ಪವಾಡ ಪುರುಷ ಗುದ್ನೇಶ್ವರ ಸ್ವಾಮಿ: ಕುಕನೂರ ಕ್ಷೇತ್ರ ಪಾವನ- ಯಲಬುರ್ಗಾ Miracle Man Gudneshwara Swami: Kukanur Kshetra Pavana- Yalaburga

ಪವಾಡ ಪುರುಷ ಗುದ್ನೇಶ್ವರ ಸ್ವಾಮಿ: ಕುಕನೂರ ಕ್ಷೇತ್ರ ಪಾವನ- ಯಲಬುರ್ಗಾ 

ಕುಕನೂರ 31: ಗುದ್ನೇಶ್ವರ ಸ್ವಾಮಿ ಹಲವಾರು ಪವಾಡಗಳ ಮೂಲಕ ಈ ಕ್ಷೇತ್ರದ ಭಕ್ತರನ್ನ ಪಾವನ ಮಾಡಿದ್ದಾನೆ ಎಂದು ಯಲಬುರ್ಗಾದ ಬಸವಲಿಂಗೇಶ್ವರ ಮಹಾಸ್ವಾಮೀಜಿ ಹೇಳಿದರು.  ಅವರುಕುಕನೂರ ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀಮಠದ ಜಾತ್ರ ನಿಮಿತ್ಯ ಹಮ್ಮಿಕೊಂಡಗುದ್ನೇಶ್ವರ ಸ್ವಾಮಿಯ ಪುರಾಣಉದ್ಘಾಟನೆ ಮಾಡಿ ಮಾತನಾಡುತ್ತಾ ಈ ಭಾಗದಲ್ಲಿ ಶರಣಕ್ರಾಂತಿಯ ನಂತರ ಈ ಕ್ಷೇತ್ರಕ್ಕೆ ಬಂದು ನೆಲೆನಿಂತಗುದ್ನೆಶ್ವರ ಸ್ವಾಮಿಗೆ ಭವ್ಯವಾದಇತಿಹಾಸವಿದೆ. ಗುದ್ನೇಶ್ವರ ಭಕ್ತರ ಆರಾಧ್ಯ ದೈವವಾಗಿ, ನೊಂದು ಬಂದವರಿಗೆ ಕಾಮದೇನುವಾಗಿದ್ದಾನೆ. ಆತನ ಸ್ಮರಣೆ ಮಾಡುವುದರಿಂದ ಭವರೋಗಗಳು ದೂರವಾಗುತ್ತವೆ ಎಂದರು.  

ನಂತರ ಪುರಾಣ ಪ್ರವಚನಕಾರರಾದ ಸೋರಟೂರಿನ ಶಿವಯೋಗೀಶ್ವರ ಸ್ವಾಮೀಜಿ  ಮಾತನಾಡಿ ಗುದ್ನೆಶ್ವರ ಬಿತ್ತಿದ ಹುಣಸೆ ಬೀಜಗಳು ಇಂದು ಹೆಮ್ಮರವಾಗಿ ಬೇಳೆದು ನಿಂತಿವೆ, ಹನ್ನೇರಡನೆ ಶತಮಾನದಲ್ಲಿ ಶರಣರಜೊತೆಗಿದ್ದು, ರಂಭಾಪುರಿ ಪೀಠದ ಪರಂಪರೆಯಲ್ಲಿ ಬಂದಗುದ್ನೆಶ್ವರ ಮಹಾಸ್ವಾಮಿಒಬ್ಬ ಲೀಲಾಮೂರ್ತಿಯಾಗಿಜನ ಮಾನಸದಲ್ಲಿ ಉಳಿದಿದ್ದಾನೆ ಇಂತಹ ಸ್ವಾಮಿಯ ಪುರಾಣದ್ಯಾಂಪುರದ ಕವಿಗಳು ಬರೆದದ್ದುಅದ್ಬುತವಾಗಿ ಮೂಡಿಬಂದಿದೆಎಂದರು.  

ಜಾತ್ರ ಸಮಿತಿ ಕಾರ್ಯದರ್ಶಿ ಈರಣ್ಣ ಶಿರೂರ ಮಾತನಾಡಿ ನಮ್ಮಗ್ರಾಮದಲ್ಲೆ ನೆಲೆ ನಿಂತ ಶಿವಯೋಗಿಯ ಬಗ್ಗೆ ನಮ್ಮಲ್ಲಿಅಭಿಮಾನ ಮೂಡಬೇಕು, ನಾವುಗಳು ಸ್ವಾಭಿಮಾನಿಗಳಾದಗ ಮಾತ್ರ ನಮ್ಮಕ್ಷೇತ್ರ ಬೆಳೆಯಲು ಸಾದ್ಯ, ನಮ್ಮವರನ್ನೆ ನಾವು ಅಪ್ಪಿಕೊಳ್ಳದಿದ್ದರೆ ಅದು ಮಾನವೀಯತೆಯಲ್ಲ, ಜೊತೆಗೆ ನಮ್ಮ ಶ್ರೀಮಠವು ಸರ್ವಜನಾಂಗದ ಶಾಂತಿಯತೋಟವಾಗಿದೆ ಹಾಗು ನಮ್ಮ ಮಠದ ಭಕ್ತರು  ಹೃದವಂತರುಎಂದರು.  ಈ ಸಂದರ್ಭದಲ್ಲಿಗುದ್ನೇಶ್ವರ ಮಠದಿಂದ ಶ್ರೀಮಠದವರೆಗೆ ಭಜನೆ ಡೊಳ್ಳುನೊಂದಿಗೆ ಸದ್ಬಾವನ ಪಾದಯಾತ್ರೆಅದ್ದೂರಿಯಾಗಿಜರುಗಿತು.  ಪೂಜ್ಯ ಮಹಾದೇವ ಸ್ವಾಮೀಜಿ, ಗುರುಶಾಂತವೀರ ಸ್ವಾಮೀಜಿ,  ವೀರಯ್ಯತೋಂಟದಾರ್ಯಮಠ, ಗದಿಗೆಪ್ಪ ಪವಾಡಶೆಟ್ಟಿ, ವೀರಯ್ಯ ಉಳಾಗಡ್ಡಿಮಠ, ಸಂಗಮೇಶ ಕಲ್ಮಠ, ಜಾತ್ರ ಸಮಿತಿಅಧ್ಯಕ್ಷರವಿ ಗದಗ, ಶಿವುಕುಮಾರ ಯತ್ನಟ್ಟಿ, ಶರಣಪ್ಪಗುತ್ತಿ, ದೇವಪ್ಪ ಸೋಬಾನದ, ಬಸಣ್ಣ ದಿವಟರ, ಶಿವು ಬಂಗಿ, ಸಂಗಿತಗಾರರಾದ ವೀರಭದ್ರ​‍್ಪ ಸುಂಕದ, ಬಸವರಾಜ ಹುಯಿಲಗೋಳ ಸೇರಿದಂತೆ ಹಲವರು ಭಕ್ತರುಇದ್ದರು.