ಮನುಕುಲದ ಮಹಾದಾನಿಗೆ ಸಚಿವರಿಂದಲೇ ಸನ್ಮಾನ: ಸೇವೆ ಮತ್ತು ತ್ಯಾಗದ ಸಂಗಮ
Minister honours the great benefactor of mankind: A confluence of service and sacrifice
ಗದಗ 27 : ಗದಗ-ಬೆಟಗೇರಿ ನೆಲದಲ್ಲಿ ನಡೆದ ನಾರಾಯಣ ವನ್ನಾಲ ಅವರ ಅಂಗಾಂಗ ದಾನದ ಘಟನೆಯು ಕೇವಲ ವೈದ್ಯಕೀಯ ಕ್ಷೇತ್ರದ ಯಶಸ್ಸು ಮಾತ್ರವಲ್ಲ, ಅದು ಮಾನವೀಯ ಮೌಲ್ಯಗಳ ಮರು ಸ್ಥಾಪನೆಯಾಗಿ ಗದಗ ಜಿಲ್ಲೆಯಲ್ಲಿ ದಾಖಲೆಯಾಗಿ ಉಳಿದಿದೆ. ದುಃಖಭರಿತ ಕುಟುಂಬವೇ, ತಮ್ಮ ದುಖವನ್ನೆಲ್ಲಾ ಮರೆತು, ನಾಲ್ಕು ಜೀವಗಳಿಗೆ ಹೊಸ ಆಶಾಕಿರಣ ನೀಡಿದ ತ್ಯಾಗವು, ಸಮಾಜ ಮತ್ತು ಸರ್ಕಾರ ಹೇಗೆ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ಒಂದು ಆದರ್ಶಪ್ರಾಯ ಘಟನೆಯಾಗಿ ಹೊರಹೊಮ್ಮಿದೆ ಬಾಕ್ಸ್ನೋವಿನ ಮನೆಯನ್ನು ಸಂತೈಸಿದ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಈ ಘಟನೆಯ ಮಹತ್ವವನ್ನು ತಕ್ಷಣ ಅರಿತು ಅಂಗಾಗ ದಾನ ಮಾಡಿದವರ ಮನೆಗೆ ತೆರಳಿ ವಿಶೇಷ ರೀತಿಯ ಸಮಾಧಾನ ಹೇಳಿದ್ದಾರೆ.
ಸಾಮಾನ್ಯವಾಗಿ ಇಂತಹ ಸನ್ಮಾನಗಳು ಸಾರ್ವಜನಿಕ ವೇದಿಕೆಗಳಲ್ಲಿ ನಡೆಯುತ್ತವೆ. ಆದರೆ, ನೋವಿನಲ್ಲಿ ಮುಳುಗಿರುವ ವನ್ನಾಲ ಕುಟುಂಬದವರು ವೇದಿಕೆಗೆ ಬರುವುದು ಅವರಿಗೆ ಇನ್ನಷ್ಟು ಕಷ್ಟ ನೀಡಬಹುದು ಎಂದು ಮನಗಂಡ ಸಚಿವರು, ತಾವೇ ಖುದ್ದಾಗಿ ವನ್ನಾಲ ಅವರ ಮನೆಗೆ ತೆರಳುವ ಅಪರೂಪದ ಮತ್ತು ಅತ್ಯಂತ ಸಂವೇದನಾಶೀಲ ನಿರ್ಧಾರ ಕೈಗೊಂಡರು.ನಾಲ್ಕು ಜೀವಗಳಿಗೆ ಹೊಸ ಜೀವನ ನೀಡಿದ ಕುಟುಂಬದ ಮುಂದೆ ನಮ್ಮ ಗೌರವ ಅತಿ ಸಣ್ಣದು. ಆದರೆ, ಅವರ ತ್ಯಾಗಕ್ಕೆ ಪ್ರತಿಯಾಗಿ ಇಡೀ ಸಮಾಜ ಅವರಿಗೆ ಋಣಿಯಾಗಿದೆ ಎಂಬ ಭಾವನೆಯೊಂದಿಗೆ ಸಚಿವರು, ವನ್ನಾಲ ಅವರ ಪತ್ನಿ, ತಂದೆ ಮತ್ತು ತಾಯಿ ಅವರಿಗೆ ಗೌರವ ಸಲ್ಲಿಸಿ, ಸಾಂತ್ವನ ಹೇಳಿದರು. ರಾಜಕೀಯ ನಾಯಕರೊಬ್ಬರು ಅಧಿಕಾರದ ಚೌಕಟ್ಟನ್ನು ಮೀರಿ, ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕುಟುಂಬದ ಮನೆಬಾಗಿಲಿಗೆ ಹೋಗಿ ಕೃತಜ್ಞತೆ ಸಲ್ಲಿಸಿದ್ದು, ಸಚಿವ ಎಚ್.ಕೆ. ಪಾಟೀಲರ ಸಂವೇದನಾಶೀಲ ಆಡಳಿತ ಮತ್ತು ಜನಪರ ಕಾಳಜಿಯ ಪ್ರತೀಕವಾಗಿ ನಿಂತಿದೆ.
ಅವರ ಈ ನಡೆ, ಕುಟುಂಬದ ದುಃಖಕ್ಕೆ ಸ್ವಲ್ಪ ಮಟ್ಟಿಗಿನ ನೆಮ್ಮದಿಯನ್ನು ನೀಡಿದೆ.ಬಾಕ್ಸ್ಬ್ರಹ್ಮಾಂಡದ ಸಂಕಲ್ಪಕ್ಕೆ ವೈದ್ಯಕೀಯ ತಂಡದ ಶ್ರಮಈ ಮಹತ್ತರ ಕಾರ್ಯ ಯಶಸ್ವಿಯಾಗಲು ಕೆ.ಎಚ್. ಪಾಟೀಲ ಆಸ್ಪತ್ರೆಯ ವೈದ್ಯರ ತಂಡ ಮತ್ತು ಸಚಿವರ ಸೇವಾ ತಂಡದ ಸಮನ್ವಯ ಶ್ರಮ ಅಗಾಧ. ಡಾ. ಅವಿನಾಶ ಓದುಗೌಡರ ನೇತೃತ್ವದ ವೈದ್ಯಕೀಯ ತಂಡವು, ಸಕಾಲದಲ್ಲಿ ಅಂಗಾಂಗಗಳನ್ನು ಪಡೆದು, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿತು. ಕಿಡ್ನಿ ಟ್ರಾನ್ಸ್ಪ್ಲಾಂಟ್ ವಿಭಾಗದ ಡಾ. ಭುವನೇಶ ಆರಾಧ್ಯ, ಡಾ. ಪವನ ಕೋಳಿವಾಡ, ಡಾ. ದೀಪಕ ಕುರಹಟ್ಟಿ, ಡಾ. ನಿಯಾಜ್, ಡಾ. ವಿನಾಯಕ ಪಂಚಗಾರ ಸೇರಿದಂತೆ ಸಂಪೂರ್ಣ ತಂಡವು ಗಡಿಯಾರದ ಮುಳ್ಳಿನೊಂದಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸಿದ್ದು, ಅವರ ವೃತ್ತಿಪರ ಬದ್ಧತೆಯನ್ನು ಸಚಿವ ಪಾಟೀಲರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಂಗಾಂಗಗಳನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಶೀಘ್ರವಾಗಿ ತಲುಪಿಸಲು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಎಸ್ಪಿ ರೋಹನ ಜಗದೀಶ ಅವರು ಗ್ರೀನ್ ಕಾರಿಡಾರ್ (ಸಂಚಾರ ಮುಕ್ತ ದಾರಿ) ಏರ್ಾಡು ಮಾಡಿದ್ದು, ಸರ್ಕಾರಿ ಇಲಾಖೆಗಳು ಮಾನವೀಯ ಉದ್ದೇಶಕ್ಕಾಗಿ ಹೇಗೆ ಒಗ್ಗೂಡಬಹುದು ಎಂಬುದನ್ನು ಕೂಡಾ ಸಚಿವ ಎಚ್.ಕೆ.ಪಾಟೀಲರು ಈ ಪ್ರಕರಣದಲ್ಲಿ ತೋರಿಸಿಕೊಟ್ಟಿದ್ದಾರೆ.
ಬಾಕ್ಸ್ಸರ್ಕಾರವೇ ಅಂಗಾಗದಾನ ಮಾಡಿದವರ ಮನೆಗೆ ಹೋಗಿ ಸನ್ಮಾನ ಮಾಡಿದ ಈ ಅಪರೂಪದ ಸಂದರ್ಭದಲ್ಲಿ ಎಂ.ಆರ್.ಪಾಟೀಲ, ಡಾ.ಎಸ್.ಆರ್.ನಾಗನೂರ, ಡಾ.ಪ್ಯಾರಾಅಲಿ ನೂರಾನಿ, ಡಾ.ಪ್ರಭು ಮಡಿವಾಳರ, ಡಾ.ವಿಶಾಲ ಕಪ್ಪನವರ, ಎಚ್.ಕೆ.ಪಾಟೀಲ ಸೇವಾ ತಂಡದ ಅಧ್ಯಕ್ಷ ಪ್ರಭು ಬುರಬುರೆ, ರಂಗಣ್ಣ ಓದುಗೌಡ್ರ, ಡಾ.ವೇಮನ ಸಾಹುಕಾರ, ಅಶೋಕ ಮಂದಾಲಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ವನ್ನಾಲ ಕುಟುಂಬದ ಸಾಮಾಜಿಕ ಪ್ರೀತಿಯನ್ನು, ಅದಕ್ಕಾಗಿ ಆ ಕುಟಂಬ ಮಾಡಿದ ತ್ಯಾಗವನ್ನು ಸ್ಮರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 