ಇಂದು ಸಚಿವ ಮಧು ಬಂಗಾರ​‍್ಪರಿಂದ ವಿವಿಧ ಕಾರ‌್ಯಕ್ರಮಗಳಿಗೆ ಚಾಲನೆ

ಇಂದು ಸಚಿವ ಮಧು ಬಂಗಾರ​‍್ಪರಿಂದ ವಿವಿಧ ಕಾರ‌್ಯಕ್ರಮಗಳಿಗೆ ಚಾಲನೆ  Minister Madhu Bangarpa launches various programs today


           ಸಿಂದಗಿ 06: ಇದೇ ದಿ. 07 ರಂದು ಬುಧವಾರ ಬೆಳಗ್ಗೆ: 11-00 ಗಂಟೆಗೆ ಪಟ್ಟಣದ ಬಸವ ನಗರದಲ್ಲಿರುವ ಸರ್ಕಾರಿ ಕನ್ಯಾ ಪ್ರೌಢ ಶಾಲಾ ಆವರಣದಲ್ಲಿ ಜರುಗಲಿರುವ ಶಿಕ್ಷಕರ ಭವನದ ಭೂಮಿಪೂಜೆ ಮತ್ತು  8 ಪ್ರೌಡಶಾಲೆಗಳ ಉದ್ಘಾಟನೆ ಹಾಗೂ ಎಮ್‌.ಪಿ. ಮನಗೂಳಿ ಪ್ರತಿಷ್ಠಾನದ ವತಿಯಿಂದ ಮತಕ್ಷೇತ್ರದ ಪ್ರಥಮ ಹಂತದ 52 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನಾ ಮತ್ತು ವಿತರಣಾ ಸಮಾರಂಭಕ್ಕೆ ಪ್ರಾಥಮಿಕ ಹಾಗೂ ಪ್ರೌಡಶಾಲೆ ವಿಭಾಗದ ಸಚಿವ ಮಧು ಬಂಗಾರೆಪ್ಪ ಚಾಲನೆ ನೀಡಲಿದ್ದಾರೆ.  ಕಾರಣ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಅಶೋಕ ಮನಗೂಳಿ ಕರೆ ನೀಡಿದರು.   

            ನಗರದ ಆನಂದ ಚಿತ್ರ ಮಂದಿರದ ಆವರಣದಲ್ಲಿರುವ ಶಾಸಕರ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಈ ಕ್ಷೇತ್ರದ ಶಿಕ್ಷಕ ಸಮೂಹದ ಬಹುದಿನಗಳ ಬೇಡಿಕೆಯಾದ ರೂ 50 ಲಕ್ಷ ವೆಚ್ಚದ ಶಿಕ್ಷಕರ ಭವನ,  ಕುಡಿಯುವ ನೀರಿಲ್ಲದ ಈ ಕ್ಷೆತ್ರದ 314 ಶಾಲೆಗಳನ್ನು ಗುರುತಿಸಿ ಪ್ರಥಮ ಹಂತದಲ್ಲಿ 52 ಶಾಲೆಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ತೆರೆಯಲಾಗುತ್ತಿದೆ. ಮುಂದಿನ ಹಂತದಲ್ಲಿ 56 ಶಾಲೆಗಳಲ್ಲಿ ತೆರೆಯಲಾಗುವುದು. ಅಲ್ಲದೆ ಶುದ್ಧ ಕುಡಿಯುವ ನೀರಿನ ಘಟಕದ ಎಜನ್ಸಿ ಮೂರು ವರ್ಷಗಳ ವರೆಗೆ ಇದರ ನಿರ್ವಹಣೆ ಮಾಡುತ್ತದೆ. ಎಂದು ತಿಳಿಸಿದ ಅವರು, ಎಂ.ಸಿ.ಮನಗೂಳಿ ಪ್ರತಿಷ್ಠಾನವು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತ ಬರುತ್ತಿದೆ ಮುಂದೆವು ಈ ಕ್ಷೇತ್ರದ ಸಾಮಾಜಿಕ ಕಾರ್ಯಗಳೀದ್ದರೆ ಪ್ರತಿಷ್ಠಾನಕ್ಕೆ ಗಮನಕ್ಕೆ ತಂದರೆ ಅಲ್ಪಸ್ವಲ್ಪ ಕಾರ್ಯ ಮಾಡುತ್ತದೆ ಕಾರಣ ಸಾರ್ವಜನಿಕರ ಪ್ರತಿಷ್ಠನದ ಸದುಪಯೋಗ ಪಡೆದುಕೊಳ್ಳಬೇಕು. ಮತ್ತು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವಿನಂತಿಸಿಕೊಂಡರು.  

           ಈ ಕರ್ಯಕ್ರಮದ ದಿವ್ಯಸಾನಿಧ್ಯವನ್ನು ಅಲಮೇಲ ಗುರು ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ಷ.ಬ್ರ ಚಂದ್ರಶೇಖರ ಶಿವಾಚಾರ್ಯರು, ಊರನ ಹಿರಿಯಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯರು ಅರಕೇರಿ ಮೂಲಪೀಠ ಮುಮ್ಮಟಗುಡ್ಡ ಪೂಜ್ಯ ಶ್ರೀ ಅವಧೂತಸಿದ್ಧ ಮಹಾರಾಜರು ವಹಿಸಲಿದ್ದಾರೆ ಅಧ್ಯಕ್ಷತೆಯನ್ನು ಸಿ.ಎಮ್‌.ಮನಗೂಳಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಅರವಿಂದ .ಎಮ್‌. ಮನಗೂಳಿ, ಮುಖ್ಯ ಅತಿಥಿಗಳಾಗಿ  ದಿ. ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕನ ಅಧ್ಯಕ್ಷ ಶರಣಪ್ಪ .ಎಸ್‌. ವಾರದ,  ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿ.ವಿ. ಸಾಲಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್‌.ಬಿ. ಯಡ್ರಾಮಿ ಆಗಮಿಸಲಿದ್ದಾರೆ ಎಂದರು. ಈ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ. ಶರಣಪ್ಪ ವಾರದ. ರಾಜಶೇಖರ ಕೂಚಬಾಳ. ಸಾದಿಕ್ ಸುಂಬಡ. ಸಂದೀಪ್ ಚೌರ. ಪ್ರವೀಣ ಕಾಂಠಿಗೊಂಡ. ಸಂತೋಷ ಹರನಾಳ. ನೂರಹಮ್ಮದ ಅತ್ತಾರ ಇದ್ದರು.