ಮೈಕ್ರೊ ಫೈನಾನ್ಸ್ ಕಿರುಕುಳ: ರೈತ ಆತ್ಮಹತ್ಯೆ
ದೇವರಹಿಪ್ಪರಗಿ 07: ಮೈಕ್ರೊ ಫೈನಾನ್ಸ್ ಕಂಪನಿಯವರ ಕಿರುಕುಳ ತಾಳಲಾರದೆ ರೈತ ತೊಗರಿ ಬೆಳೆಗೆ ಹೊಡೆಯುವ ಓಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಲೂಕಿನ ಸಲಾದಹಳ್ಳಿ ಗ್ರಾಮದ ಬಸನಗೌಡ ಹಣಮಂತ್ರಾಯಗೌಡ ಬಿರಾದಾರ(52) ತೊಗರಿ ಬೆಳೆಗೆ ಹೊಡೆಯುವ ಓಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ಸುಮಾರು 8 ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದ. ಸಾಲ ಪಾವತಿ ಮಾಡುವಂತೆ ಫೈನಾನ್ಸ್ ಸಿಬ್ಬಂದಿಯವರ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತರ ಪತ್ನಿ ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರೈತ ಬಸನಗೌಡ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ 3.5 ಲಕ್ಷ ರೂಪಾಯಿ ಸಾಲ ಪಡೆದು ಸುಮಾರು 4.2ಎಕರೆ ಜಮೀನಿನಲ್ಲಿ ಜಿ.ಆರಿ್ಜ ತೋಗರಿ ಬೆಳೆದಿದ್ದ. ಬೆಳೆ ಕೈ ಕೊಟ್ಟ ಕಾರಣ ಮನನೊಂದಿದ್ದು. ಉಪಜೀವನಕ್ಕೆ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಮಾಡಿ ಸಾಲ ತೀರಿಸಲು ಕೆಂಭಾವಿಯ ವಿವಿಧ ಕಂಪನಿಗಳಲ್ಲಿ ಅಂದರೆ, ಕೆಂಭಾವಿಯ ಮೈಕ್ರೋ ಫೈನಾನ್ಸ್ ನಲ್ಲಿ 1ಲಕ್ಷ, ಎಲ್.ಆಂಡ್.ಟಿ ನಲ್ಲಿ 1.10ಲಕ್ಷ, ನವಚೇತನ ನಲ್ಲಿ 1ಲಕ್ಷ,ಈ.ಎಸ್.ಎಫ್.ಎಸ್ ನಲ್ಲಿ 75ಸಾವಿರ, ಚೇತನ್ಯ ನಲ್ಲಿ 1ಲಕ್ಷ,ಸುಗ್ಮಯ್ಯಾ ನಲ್ಲಿ 50ಸಾವಿರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ನಲ್ಲಿ 1ಲಕ್ಷ, ಆರಿ್ಬ.ಎಲ್. ತಾಳಿಕೋಟಿನಲ್ಲಿ 1ಲಕ್ಷ ರೂಪಾಯಿ ಹೀಗೆ ಒಟ್ಟು-7.35ಲಕ್ಷ ರೂಪಾಯಿ ಸಾಲ ಮಾಡಿ ಸಾಲ ತೀರಿಸಲು ಪರದಾಡುತ್ತಿದ್ದ ಗುರುವಾರ ಸಾಯಂಕಾಲ ಹೊಲಕ್ಕೆ ಹೋದಾಗ ಮನೆಯಲ್ಲಿ ಯಾರು ಇಲ್ಲದ ಕಾರಣ ತೊಗರಿಗೆ ಹೊಡೆಯುವ ಓಷಧಿ ಸೇವಿಸಿ ಅತ್ಮಹತ್ಯೆ ಪ್ರಯತ್ನಿಸಿದ್ದಾನೆ. ಹೊಲದಿಂದ ಬಂದು ನೋಡುವುದರಲ್ಲಿ ಓಷಧಿ ಸೇವಿಸಿ ಒದ್ದಾಡುವುದನ್ನು ಗಮನಿಸಿ ವಿಚಾರಿಸಿದಾಗ ಫೈನಾನ್ಸ್ ಸಿಬ್ಬಂದಿಯವರ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಸಿದ್ದೇನೆ ಎಂದು ಹೇಳಿದ್ದರು.ನಂತರ ಉಪ್ಪು ನೀರು ಕುಡಿಸಿ ವಾಂತಿ ಮಾಡಿಸಲು ಪ್ರಯತ್ನಿಸಿದರು ಆಗದ ಕಾರಣ ಕಲಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಮೃತರ ಪತ್ನಿ ಮಹಾದೇವಿ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಕಲಕೇರಿ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಇದು ಕಲಕೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ. ರೈತ ಬಸನಗೌಡ ಸಾಲ ಮಾಡಿ ಜಿ.ಆರಿ್ಜ ತೊಗರಿ ತಂದು 4.2ಎಕರೆ ಜಮೀನಿನಲ್ಲಿ ಬೇಸಾಯ ಮಾಡಿದ್ದ. ಆಳೆತ್ತರದ ಬೆಳೆದ ತೊಗರಿಬೇಳೆ ಕೈ ಕೊಟ್ಟ ಕಾರಣ ದಿಕ್ಕು ತೋರಿಸದೆ ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಮಾಡಿ ಅವರ ಕಿರಿಕಿರಿಗೆ ಮನೆಯಲ್ಲಿದ್ದ ತೊಗರಿ ಬೆಳೆಗೆ ಹೊಡೆಯುವ ಓಷಧಿ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರೈತನ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಬೇಕು. ಈ ರೀತಿ ಫೈನಾನ್ಸುಗಳ ಕಿರಿಕಿರಿ ಗಡಿಭಾಗದಲ್ಲಿ ಯಥೇಚ್ಛವಾಗಿ ನಡೆಯುತ್ತಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ರೈತರ ಕುಟುಂಬಗಳನ್ನು ಉಳಿಸಬೇಕು.