ಪರಿಸರ ಮಾಲಿನ್ಯಕ್ಕಿಂತ ಮನಸ್ಸಿನ ಮಾಲಿನ್ಯ ಅಪಾಯಕಾರಿ : ಡಾ. ಜಿ . ಟಿ. ನಾಯಕ್
Mental pollution is more dangerous than environmental pollution: Dr. G. T. Nayak
ಗದಗ 4: ನೋಡಬಾರದ, ಕೇಳಬಾರದ, ಮಾಡಬಾರದ ಸಂಗತಿಗಳು ಹೊಕ್ಕು ಎಲ್ಲರ ಮನಸ್ಸು ಕಲುಷಿತವಾಗುತ್ತಿದೆ. ಅಂತಹ ಮಲಿನತೆ ತೆಗೆಯಲು ಪುಸ್ತಕ ಓದು ಬದುಕಿಗೆ ಅತ್ಯವಶ್ಯಕ ಎಂದು ಗ್ರಂಥಪಾಲಕ ಡಾ. ಜಿ . ಟಿ. ನಾಯಕ್ ತಿಳಿಸಿದರು.
ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯ ವಿಭಾಗವು ಗದಗ ತಾಲೂಕಿನ ಕಣಗಿನಹಾಳ ಗ್ರಾಮದಲ್ಲಿ ಇತ್ತೀಚಿಗೆ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಓದಿನ ಕುರಿತು ಜಾಗೃತಿ ಕಾರ್ಯಕ್ರಮ’ದಲ್ಲಿ ನೆರದಿದ್ದ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಹಾಗೂ ಗ್ರಾಮದ ಯುವಕರು ಹಾಗೂ ಹಿರಿಯರಿರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಉತ್ತಮ ಪುಸ್ತಕಗಳು ಒಂದು ಉತ್ತಮ ನಾಗರಿಕತೆಯ ವಾರಸುದಾರರಾಗಿ ಮುಂದೆ ಸುಂದರ ಸಮಾಜ ಕಟ್ಟಲಿಕ್ಕೆ ವಿವಿಧ ರೀತಿಯಲ್ಲಿ ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ವಿವಿಧ ಸಾಧಕರ ಸಾಧನೆ ಬಗ್ಗೆ ಉದಾಹರಣೆಗಳೊಂದಿಗೆ ವಿವರಿಸಿದ ಅವರು ಪ್ರಸ್ತುತ ಸಮಾಜದ ಮಕ್ಕಳಲ್ಲಿ ದಿನೇದಿನೆ ಪುಸ್ತಕ ಪ್ರೆ?ಮ ಕಡಿಮೆಯಾಗುತ್ತಿದೆ. ಮೊಬೆ?ಲ್‌ನಲ್ಲಿಯೇ ನಾನಾ ಪುಸ್ತಕಗಳನ್ನು ಓದಿದರೂ ಪುಸ್ತಕದಲ್ಲಿ ಓದಿದ ಖುಷಿ ಎಲ್ಲಿಯೂ ಸಿಗಲಾರದು ಎಂದರು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಪುಸ್ತಕ ಓದಿನ ಬಗ್ಗೆ ವಿವಿಧ ರೀತಿಯ ಅರಿವಿನ ಫಲಕಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ಡಾ. ವೀಣಾ ಈ. ಪ್ರೊ. ರಾಜು ಯಲಬುರ್ಗಿ, ಪ್ರೊ. ವಿಶಾಲ ತೆಳಗಡೆ, ಪ್ರೊ. ಚಂದಾಲಿಂಗಪ್ಪ ಹಳ್ಳಿಕೇರಿ, ಡಾ. ನೇತ್ರಾವತಿ ಅಂಗಡಿ ಒಳಗೊಂಡಂತೆ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು. ಹೊಸ ಪುಸ್ತಕ ಮನೆಗೆ ತಂದರೆ, ಹೊಸ ಹಿತೈಷಿ ಮನೆಗೆ ಬಂದಂತೆ. ಓದಿನ ಸುಖಕ್ಕೆ ಯಾರ ಹಂಗು ಇಲ್ಲ’ ಎಂದು ಲೇಖಕ ಹಾ.ಮಾ.ನಾಯಕ ಹೇಳುತ್ತಿದ್ದರು.
ಆಪತ್ತಿನಲ್ಲಿ ಸಖಿಯನ್ನಾರನೂ ಕಾಣೆ’ ಎಂದು ಅಲ್ಲಮಪ್ರಭು ಹೇಳುತ್ತಾರೆ. ಆದರೆ, ಆಪತ್ತಿನಲ್ಲಿ ನಮ್ಮ ಓದು ಸಖಿಯಾಗಬಲ್ಲದು. ಡಾ. ಜಿ . ಟಿ. ನಾಯಕ್ ರೈತ ಸುಗ್ಗಿ ಹಾಗೂ ಮಳೆಗಾಲದಲ್ಲಿ ತನ್ನ ಕೃಷಿ ಚಟುವಟಿಕೆ ಬಿಟ್ಟು ಬೇರೆ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಹಾಗೆಯೇ ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಪಾಲಿಸಬೇಕು. ಓದುವುದು ಅವರ ಧರ್ಮ. ಆದರೆ ಇಂದು ನೀವು ಓದಿ ಎಂದು ಒತ್ತಾಯಿಸುವ ಕಾಲ ಬಂದಿದೆ ಎಂದು ಪ್ರೊ. ರಾಜು ಯಲಬುರ್ಗಿ ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 