ಗರ್ಭವತಿ ಮಹಿಳೆಯರಿಗಾಗಿ ಮಾನಸಿಕ ಆರೋಗ್ಯ ಶಿಬಿರ

Mental health camp for pregnant women

ಗರ್ಭವತಿ ಮಹಿಳೆಯರಿಗಾಗಿ ಮಾನಸಿಕ ಆರೋಗ್ಯ ಶಿಬಿರ 

ಬೆಳಗಾವಿ 09: ಕೆ.ಎಲ್‌.ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಂಡ್ ರಿಸರ್ಚ (ಕಾಹೇರ್), ಬೆಳಗಾವಿಯ ಕೌನ್ಸೆಲಿಂಗ ಸೆಲ್ ಮತ್ತು ಮನೋವಿಜ್ಝಾನ ವಿಭಾಗದ ವತಿಯಿಂದ ದಿ. 9 ಬುಧವಾರದಂದು ಗರ್ಭವತಿ ಮಹಿಳೆಯರಿಗಾಗಿ ಮಾನಸಿಕ ಆರೋಗ್ಯ ಶಿಬಿರವನ್ನು ಯುನೈಟೆಡ್ ಸಮಾಜ ಕಲ್ಯಾಣ ಸ0ಸ್ಧೆ, ಬೆಳಗಾವಿ ಇವರ ನಿರ್ವಹಣೆಯಲ್ಲಿರುವ ಖಾನಾಪುರ ತಾಲೂಕಿನ ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಕಾಹೇರನ್ ಆಪ್ತಸಮಾಲೋಚಕರು ಹಾಗೂ ಮನೋವಿಜ್ಝಾನ ವಿಭಾಗದ ಮುಖ್ಯಸ್ಥೆ  ಡಾ. ಯಾಸ್ಮೀನ್, ಗರ್ಭಿಣಿಯರಲ್ಲಿ ಮಾನಸಿಕ ಆರೋಗ್ಯದ ಮಹತ್ವ, ಆತ0ಕ, ಒತ್ತಡ, ಖಿನ್ನತೆ ಮತ್ತು ಅದರ ನಿರ್ವಹಣೆ ಬಗ್ಗೆ ತಿಳಿಸಿಕೊಟ್ಟರು. ಗರ್ಭಿಣಿಯರಲ್ಲಿ ಮಾನಸಿಕ ಸಮಸ್ಯೆಗಳನ್ನು ಕಂಡು ಹಿಡಿಯಲು ಸ್ಕ್ರಿನಿಂಗ ಅನ್ನು ಮಾಡಲಾಯಿತು. ಅಲ್ಲದೆ ಸ್ಥಳದಲ್ಲೇ ಆಪ್ತಸಮಾಲೋಚನೆ ಸೇವೆಯನ್ನು ಕೂಡ ಒದಗಿಸಲಾಯಿತು. ಈ ಸೇವೆಗಳಿಗೆ ನಿರ0ತರ ಫೋಲೊ ಅಪ್ ಕೂಡ ಒದಗಿಸಲಾಗುವುದು. ಯೋಗತಜ್ಙೆ ಆರತಿ ಸ0ಕೇಶ್ವರಿ ಮಹಿಳೆಯರಿಗೆ ಮಾನಸಿಕ ಆರೋಗ್ಯಕ್ಕಾಗಿ ಯೋಗ ಧ್ಯಾನಗಳನ್ನು ಕಲಿಸಿಕೂಟ್ಟರು. ಮನೋಶಾಸ್ತ್ರ ವಿಭಾಗದ ಅಧ್ಯಾಪಕಿ ಭೈರವಿ ಪಾರಿಶ್ವಾಡ, ಸಾನಿಯಾ ಗೋರಿ ಹಾಗೂ ಸ್ನಾತಕೋತ್ತರ ವಿಧ್ಯಾರ್ಥಿಗಳು ಸೇವೆಗಳನ್ನು ಸಲ್ಲಿಸಿದರು. ಡಾ. ಗೀತಾ ಕಾ0ಬಳೆ, ಜಿಲ್ಲಾ ಕುಷ್ಟರೋಗ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ಬೆಳಗಾವಿ, ಡಾ. ಎಮ. ವಿ. ಕಿವಡಸನ್ನವರ, ತಾಲೂಕು ಆರೋಗ್ಯಾಧಿಕಾರಿಗಳು, ಖಾನಾಪುರ, ಡಾ. ಆರ್‌. ಎಸ್‌. ಪಟೇಲ್ ವೈಧ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಕಣಕುಂಬಿ ಡಾ. ಬಿ.ಟಿ.ಚೇತನ್ ಮತ್ತು ಅವರ ತಂಡ ಉಪಸ್ಧಿತರಿದ್ದರು. ಇಂತಹ ಶಿಬಿರಗಳು ಸಾರ್ವಜನಿಕರಿಗೆ, ಗರ್ಭಿಣಿಯರಿಗೆ ಬಹಳ ಉಪಯುಕ್ತವಾಗಿದ್ದು, ಹೆಚ್ಚಾನು ಹೆಚ್ಚಾಗಿ ಹಮ್ಮಿಕೊಳ್ಳಬೆಕು ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟರು. ಎರಡುನೂರಕ್ಕಿಂತಲೂ ಹೆಚ್ಚಾಗಿ ಗರ್ಭಿಣಿ ಮಹಿಳೆಯರು, ಆರೋಗ್ಯ ಸೇವಾ ಸಿಬ್ಬಂದಿ, ಸಾರ್ವಜನಿಕರು ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು.