ಮಾಜಿ ಸಚಿವರ ವರ್ತನೆ ಬೇಸತ್ತು ಸದಸ್ಯರು ಬಿಜೆಪಿಗೆ

Members of the BJP are fed up with the behavior of the former minister

ಮಾಜಿ ಸಚಿವರ ವರ್ತನೆ ಬೇಸತ್ತು ಸದಸ್ಯರು ಬಿಜೆಪಿಗೆ  

ಹೂವಿನಹಡಗಲಿ 01 : ಮಾಜಿ ಸಚಿವ ಪಿಟಿ.ಪರಮೇಶ್ವರ ನಾಯಕ್  ವರ್ತನೆಗೆ ಬೇಸತ್ತು ಪಕ್ಷ ತೊರೆದು ಬಿಜೆಪಿಗೆ ಸ್ವಯಂ ಪ್ರೇರಣೆಯಿಂದ ಬಂದಿದ್ದಾರೆ ಹೊರತು ಹಣ.ಆಮಿಷಕ್ಕೆ ಬಂದಿಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಪೂಜಾರ್ ಮಲ್ಲಿಕಾರ್ಜುನ ಹೇಳಿದ್ದಾರೆ.ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿಗೆ ದ್ರೋಹ ಬಗೆದವರನ್ನು ಪಕ್ಕದಲ್ಲಿ ಕೂರಿಸಿಕೊಂಡ ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಪುರಸಭೆಯ ಕಾಂಗ್ರೆಸ್ ಸದಸ್ಯರನ್ನು ಪಕ್ಷದ್ರೋಹಿಗಳೆಂದು ಕರೆದಿದ್ದು ಹಾಸ್ಯಾಸ್ಪದ’ ಎಂದು ಲೇವಡಿ ಮಾಡಿದರು. ’ತಮ್ಮ ಪಕ್ಷದ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲಾಗದೆ, ಬಿಜೆಪಿ ಮೇಲೆ ಆರೋಪ ಹೊರಿಸಿದ್ದಾರೆ. ಅವರ ಕಾರ್ಯವೈಖರಿಗೆ ಬೇಸತ್ತು ಸ್ವಯಂಪ್ರೇರಣೆಯಿಂದ ಕಾಂಗ್ರೆಸ್ ಸದಸ್ಯರು ನಮ್ಮ ಸಂಪರ್ಕಕ್ಕೆ ಬಂದಿದ್ದಾರೆ. ಸದ್ಯದಲ್ಲೇ ಪುರಸಭೆ ಅವಧಿ ಮುಗಿಯಲಿದ್ದು, ಸದಸ್ಯರಿಗೆಹಣ.ಆಮಿಷಕ್ಕೆ ಬಂದಿಲ್ಲ ಎಂದು ಸ್ಪಷ್ಟ ಪಡಿಸಿದರು.’ಈಚೆಗೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ವಿಜಯಕುಮಾರ್ ಅವರು ಅನಗತ್ಯವಾಗಿ ಪಂಚಮಸಾಲಿ ಸಮಾಜದ ಹೆಸರು ಪ್ರಸ್ತಾಪಿಸಿದ್ದಾರೆ. ಎಲ್ಲ ಸಮುದಾಯವನ್ನು ಶಾಸಕರು ಗೌರವದಿಂದ ಕಾಣುತ್ತಾರೆ. ಈ ಹಿಂದೆ ವಿಜಯಕುಮಾರ್ ಅಧ್ಯಕ್ಷರಿದ್ದಾಗಲೇ ಕಿತ್ತೂರು ಚನ್ನಮ್ಮ ಬ್ಯಾಂಕ್ ಆಡಳಿತ ಮಂಡಳಿ ವಿಸರ್ಜನೆಯಾಗಿತ್ತು. ಆಗ ಯಾರು ಶಾಸಕರಿದ್ದರು? ಯಾರು ಕಾರಣರಾಗಿದ್ದರು?’ ಎಂದರು.ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಪಿ.ಎಂ. ವಿಲ್ಸನ್ ಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ಪುನೀತ್ ದೊಡ್ಡಮನಿ, ಎಸ್‌.ಬಸವರಾಜ, ಷಣ್ಮುಖನಗೌಡ, ವೀರನಗೌಡ, ಲಂಕೇಶ್ವರ ಇದ್ದರು.