ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಮುಖ್ಯ: ಹಿರೇಮಠ

ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಮುಖ್ಯ: ಹಿರೇಮಠ  Members' cooperation is important for the development of the association: Hiremath

ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಮುಖ್ಯ: ಹಿರೇಮಠ  

ತಾಳಿಕೋಟಿ 24: ಪ್ರತಿಯೊಬ್ಬರೂ ಸಹಕಾರ ನೀಡಿದರೆ ಮಾತ್ರ ಸಹಕಾರಿ ಸಂಘಗಳು ಬೆಳವಣಿಗೆಯಾಗಲು ಸಾಧ್ಯವಿದೆ. ಸಂಘದ ಅಧ್ಯಕ್ಷ ರಾಮನಗೌಡರು ಅವಿರತ ಶ್ರಮವಹಿಸಿ ಸಂಘದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ನಾವೆಲ್ಲರೂ ಸೇರಿ ಸಹಕಾರ ನೀಡಬೇಕು ಎಂದು ಶ್ರೀನಾಥಯ್ಯ ಹಿರೇಮಠ ಹೇಳಿದರು.  

ತಾಲೂಕಿನ ಕೊಣ್ಣೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ, ಇದರ 2024-25 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ರೈತರು ಸಂಘದಿಂದ ಸಿಗುವ ಸೌಲಭ್ಯವನ್ನು ಪಡೆದುಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು. ಸಂಘ ನನ್ನದು ಎಂಬ ಭಾವನೆ ಎಲ್ಲರಲ್ಲೂ ಇರಲಿ ಸಂಘ ಬೆಳದರೆ ಗ್ರಾಮವೂ ಬೆಳೆಯುತ್ತದೆ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ, ಕಾರ್ಯದರ್ಶಿ ಹಂದ್ರಾಳ ಅವರು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ ಅವರ ಕಾಳಜಿ ನಿಜಕ್ಕೂ ಮೆಚ್ಚುವಂಥದ್ದು ಎಂದರು.  

ರೇಷ್ಮೆ ಇಲಾಖೆ ನಿವೃತ್ತ ಅಧಿಕಾರಿ ಚಂದ್ರಶೇಖರ ಪಾಟೀಲ ಅವರು ಮಾತನಾಡಿ ಸಹಕಾರಿ ಸಂಘಗಳು ಸೇವಾ ಸಂಸ್ಥೆಗಳಾಗಿವೆ ಇಲ್ಲಿ ಅಧಿಕಾರ ಎಂಬುದಿಲ್ಲ ಸೇವಾ ಮನೋಭಾವ ವುಳ್ಳವರು ಸಂಘಗಳಿಗೆ ಆಯ್ಕೆಯಾಗಿ ಬರಬೇಕು, ಪ್ರತಿಭಾವಂತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಗಳಲ್ಲಿ ಬರುವಂತಾಗಬೇಕು ಎಂದರು.  

ಸಂಘದ ಅಧ್ಯಕ್ಷ ರಾಮನಗೌಡ ನೀರಲಗಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮನಗೌಡ ಹಂದ್ರಾಳ ವಾರ್ಷಿಕ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಗಂಗಣ್ಣ ಪತ್ತಾರ, ಬಸನಗೌಡ ದ್ಯಾಪೂರ, ಸೋಮನಗೌಡ ಹಡಲಗೇರಿ, ಗೌಡಪ್ಪಗೌಡ ಅಸ್ಕಿ, ಅಶೋಕ ಯಾಳವಾರ, ಮಂಜುಳಾ ಇಂಗಳಗಿ, ಶಾಂತಮ್ಮ ಅಂಗಡಗೇರಿ, ಚಿದಾನಂದ ಕೇಸರಭಾವಿ,ಹಜರತ ಮೂಸಾ ಅವಟಿ, ಮರೆಪ್ಪ ಹರಿಜನ, ಗೋಪಾಲ ಕೂಡಗಿ, ಕ್ಷೇತ್ರಾಧಿಕಾರಿ ಬಿ.ಜಿ.ಪಡಸಲಗಿ ವೃತ್ತಿಪರ ನಿರ್ದೇಶಕರಾದ ಚಂದ್ರಶೇಖರ ಪೊಲೀಸ್ ಪಾಟೀಲ, ಭೀಮನಗೌಡ ದ್ಯಾಪೂರ, ಸಂಘದ ಸದಸ್ಯರು ಹಾಗೂ ಸಿಬ್ಬಂದಿಗಳು ಇದ್ದರು.