ಮಠ, ಮಂದಿರಗಳು ಸಮಾಜ ಪರಿವರ್ತನೆ ಕೇಂದ್ರ: ಜಾಲಹಳ್ಳಿಶ್ರೀ
Maths, temples are centers for social transformation: Jalahallishree
ಮಠ, ಮಂದಿರಗಳು ಸಮಾಜ ಪರಿವರ್ತನೆ ಕೇಂದ್ರ: ಜಾಲಹಳ್ಳಿಶ್ರೀ
ದೇವರ ಹಿಪ್ಪರಗಿ 04: ಸಮಾಜದ ಪರಿವರ್ತನಾ ಕೇಂದ್ರಗಳಾಗಿದ್ದು, ಮಾನವೀಯ ಮೌಲ್ಯಗಳು ವೃದ್ಧಿಸುವ ಜೊತೆ ಸಮಸ್ತ ಜನಾಂಗದ ಭಕ್ತರಿಗೆ ಒಳ್ಳೆಯ ಮಾರ್ಗದರ್ಶನ ಸಿಗುವಂತೆ ಮಾಡಿ ಸಮಾಜದ ಸಂಜೀವಿನಿಯಾಗಿ ಕೆಲಸ ಮಾಡುತ್ತೀವಿ ಎಂದು ಜಾಲಹಳ್ಳಿಯ ಜಯಶಾಂತಲಿಂಗೇಶ್ವರ ಸಂಸ್ಥಾನ ಮಠದ ಜಯಶಾಂತಲಿಂಗ ಶಿವಾಚಾರ್ಯರು ಅಭಿಪ್ರಾಯಪಟ್ಟರು. ತಾಲೂಕಿನ ಯಾಳವಾರ ಗ್ರಾಮದ ಗುರು ಮಹಾಂತೇಶ್ವರ ಜಾತ್ರಾ ಮಹೋತ್ಸವದಲ್ಲಿ "ಅನುದಿನ ಅನುಸರಿಸು" ಸಂಸ್ಥೆಯಿಂದ ಶಿಕ್ಷಕರ ಮಹೋತ್ಸವ ನಮ್ಮೂರ ಉತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಹೇಡಗಾಪೂರ ಶಿವಲಿಂಗೇಶ್ವರ ಸಂಸ್ಥಾನ ಮಠದ ಶಿವಲಿಂಗ ಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಕಿರಿಯ ಸ್ವಾಮೀಜಿಗಳಾದ ದಾರುಕಾಲಿಂಗ ಶಿವಾಚಾರ್ಯರ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದ ಸಮ್ಮುಖ ಮತ್ತು ದಿನಚರಿ ಪುಸ್ತಕ ಬಿಡುಗಡೆ ಗೊಳಿಸಿದ ದೇವರಹಿಪ್ಪರಗಿ ಪರದೇಶಿ ಮಠದ ಶಿವಯೋಗಿ ಮಹಾಸ್ವಾಮಿಗಳು ಮಾತನಾಡಿ, ಅನುದಿನ ಅನುಸರಿಸು ಟ್ರಸ್ಟ್ ವತಿಯಿಂದ ಮೊದಲನೆಯ ವರ್ಷ ಸೈನಿಕರಿಗಾಗಿ, ದ್ವಿತೀಯ ವರ್ಷ ರೈತರಿಗಾಗಿ, ತೃತೀಯ ವರ್ಷ ಶಿಕ್ಷಕರಿಗಾಗಿ ಮಹೋತ್ಸವ ಇದಾಗಿದ್ದು ಶಿಕ್ಷಕರು ಈ ಸಮಾಜದ ಸುಧಾರಕರು, ಯುವಕರನ್ನು ವ್ಯಸನ ಮುಕ್ತರನ್ನಾಗಿ ಮಾಡಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದರು. ವಿಶೇಷ ಉಪನ್ಯಾಸಕರು 2025ರ ಅನುದಿನ ಅನುಸರಿಸು ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕರು ಸಾಹಿತಿಗಳಾದ ಅಶೋಕ ಹಂಚಲಿ ಅವರು ಮಾತನಾಡಿ, ಭಾರತೀಯ ಸಂಸ್ಕೃತಿ, ಭಾರತದ ನೆಲ, ಜಲ, ಆಧ್ಯಾತ್ಮ ಕೇಂದ್ರ ಕಾರ್ಯಗಳ ಬಗ್ಗೆ ಮಾತನಾಡಿದರು. ಪ್ರಾಸ್ತಾವಿಕವಾಗಿ ಅನುದಿನ ಅನುಸರಿಸು ಸಂಸ್ಥೆಯ ಸಂಸ್ಥಾಪಕರು, ಯಾಳವಾರ ಹಾಗೂ ಹೆಗಡಾಪೂರ ಶ್ರೀಗಳಾದ ದಾರುಕಾಲಿಂಗ ಶಿವಾಚಾರ್ಯರು ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ ರಾಚೋಟೇಶ್ವರ ದೇವರು ಮಾತನಾಡಿ, ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಜೊತೆಗೆ ಯೋಗ ಮಾಡಿ ರೋಗ ಮುಕ್ತರಾಗಿ ಜೀವನ ಸಾಗಿಸಬೇಕು ಹಾಗೂ ಸಂಸ್ಥೆ ನಡೆದು ಬಂದ ದಾರಿ ಹಾಗೂ ಉದ್ದೇಶಗಳ ಕುರಿತು ಮಾತನಾಡಿ ಎಲ್ಲರ ಸಹಕಾರ ಬೇಕು ಎಂದು ಹೇಳಿದರು. ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಸಂತ ರಾಠೋಡ ಅವರು ಉದ್ಘಾಟಿಸಿ ಮಾತನಾಡಿದರು. ವಿವಿಧ ಶಾಲಾ ಮಕ್ಕಳಿಂದ ಹಾಗೂ ಸರಿಗಮಪ ಖ್ಯಾತಿಯ ಶಿವಾನಿ ಶಿವದಾಸ ಅವರಿಂದ ಗೀತ ಗಾಯನ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಹಾಗೂ ಶಿಕ್ಷಕರ ಸನ್ಮಾನ, ಶಿಕ್ಷಕರ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆಕರ್ಷಣೆಯಾಗಿತ್ತು. ಸೋಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ರಾಜು ಗೌಡ ನಾಡಗೌಡ್ರು, ಮುಖಂಡರುಗಳಾದ ಸಾಹೇಬ ಗೌಡ ದೊಡಮನಿ, ರಾಮನಗೌಡ ಪಾಟೀಲ, ಅರವಿಂದ ನಾಗರಾಳ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಪ್ರೌಢಶಾಲಾ ಶಿಕ್ಷಕ ಬಾಪುಗೌಡ ಬಂಟನೂರ ಸ್ವಾಗತಿಸಿದರು, ಸಂಸ್ಥೆಯ ಅಧ್ಯಕ್ಷ ಬೊಮ್ಮಲಿಂಗ ದೇವರು ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 