ಮಾ. 7 ರಿಂದ ಮಾಸ್ತಮರ್ಡಿ ಪ್ರಭುದೇವರ ಜಾತ್ರಾ ಮಹೋತ್ಸವ
Mastamardi Prabhu Devara Jatra Mahotsav from Mar. 7
ನೇಸರಗಿ 05 : ಇಲ್ಲಿಗೆ ಸಮೀಪದ ಮಾಸ್ತಮರ್ಡಿ ಗ್ರಾಮದ ಸುಮಾರ ಎರಡು ನೂರು ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಜಿಲ್ಲೆಯ ಅನೇಕ ಭಕ್ತರ ನಂಬಿಕೆಯ ಮಠ, ಎರಡು ಉದ್ಭವ ಲಿಂಗ ಹೊಂದಿರುವ ಸುಪ್ರಸಿದ್ಧ ಮಠವಾದ ಸುಪ್ರಸಿದ್ದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳ ಆಶೀರ್ವಾದದ ಮಠ ಶ್ರೀಮದ್ ಜಗದ್ಗುರು ಪ್ರಭುದೇವರ ಸಂಸ್ಥಾನ ಗದ್ದುಗೆ ಮಠ, ತಪ್ಪೋಕ್ಷೇತ್ರ ಮಾಸ್ತಮರ್ಡಿ ಇದರ ನೂತನ ರಥೋತ್ಸವದ ಉದ್ಘಾಟನೆ ಸಮಾರಂಭ ಮತ್ತು ಜಾತ್ರಾ ಮಹೋತ್ಸವವು ಶನಿವಾರ 07-03-2026 ರಂದು ಗ್ರಾಮದಿಂದ ಪ್ರಭುದೇವರ ಮಠದಿಂದ ವರೆಗೆ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮದ್ಯಾಹ್ನ 11 ಘಂಟೆಗೆ ನೂತನ ದ್ವಾರಬಾಗಿಲು ಹಾಗೂ ದಾಸೋಹ ಮಹಾ ಮನೆಯ ಉದ್ಘಾಟನೆ ಸಂಜೆ 5 ಘಂಟೆಗೆ ಕಳಸಾರೋಹಣ ನೆರವೇರುವದು,
ದಿ. 8 -3-2026 ರಂದು ಬೆಳಿಗ್ಗೆ 7-00 ಘಂಟೆಗೆ ಧ್ವಜಾರೋಹಣ, 8-00 ಕ್ಕೆ ರುಧ್ರಹೋಮ, ಮಹಾರುದ್ರಾಭಿಷೇಕ, ನೈವೇದ್ಯ, ಮದ್ಯಾಹ್ನ 12 ಕ್ಕೆ ಗ್ರಾಮದ ಮುತ್ತೈದೆಯರಿಂದ ಉಡಿ ತುಂಬುವದು,ರಾತ್ರಿ 8 ಕ್ಕೆ ಭಜನೆ ಮತ್ತು ಸಂಗೀತ ಕಾರ್ಯಕ್ರಮ ನೆರವೇರಲಿವೆ. ಮತ್ತು ದಿ. 09-03-2026 ರಂದು ಬೆಳಿಗ್ಗೆ 9 ಘಂಟೆಗೆ ಕುಂಭಮೇಳ, ಪಲ್ಲಕ್ಕಿ ಉತ್ಸವಗಳಿಂದ ಗ್ರಾಮದಿಂದ ನಾಡಿನ ಶ್ರೀಗಳ ಮೆರವಣಿಗೆ, ಮದ್ಯಾಹ್ನ 1 ಘಂಟೆಗೆ ಸಾಮೂಹಿಕ ವಿವಾಹ, ಮದ್ಯಾಹ್ನ 2 ಘಂಟೆಗೆ ಧರ್ಮಸಭೆ, ಸಂಜೆ 4-20 ಘಂಟೆಗೆ ನೂತನ ಮಹಾರಥೋತ್ಸವ ಜರುಗಲಿದೆ ಎಂದು ಷ. ಭ್ರ. ಡಾ. ವೀರ್ರಭು ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಅವರು ಶ್ರೀಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಒಂದು ಜಾತ್ರಾ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಪೂಜ್ಯ ಮಹಾಸ್ವಾಮಿಗಳು, ಶರಣರು ಪಾಲ್ಗೊಳ್ಳಲಿದ್ದು,
ಕಾರ್ಯಕ್ರಮದಲ್ಲಿ ಶಾಸಕರಾದ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಯುವ ಮುಖಂಡ ಸಚಿನ ಪಾಟೀಲ ಸೇರಿದಂತೆ ನೇಸರಗಿ ಜಿ ಪಂ ವ್ಯಾಪ್ತಿಯ ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಜಿಲ್ಲೆಯ ಮಠದ ಶ್ರೀ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಮಹಾತ್ಮರ ಆಶೀರ್ವಾದ ಪಡೆಯಿರಿ ಎಂದು ಶ್ರೀಗಳು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯರಾದ ಮಲ್ಲಪ್ಪ ಮುತ್ತೇನ್ನವರ, ಶಂಕರೆಪ್ಪ ಈರಯ್ಯಣ್ಣವರ, ಯಲ್ಲಪ್ಪ ನಾಯಕ, ಉಡಪ್ಪ ಕೋಮಾರ, ಸಿದ್ರಾಮ ತಳವಾರ, ಬಸಪ್ಪ ಕಡಬಿ, ಸಿದ್ದಪ್ಪ ಮಿಂಡ್ರೋಳ್ಳಿ, ಮಲ್ಲೇಶ ಚಿಕ್ಕೋಡಿ,ಪತ್ರಕರ್ತರಾದ ಮಹಾಂತೇಶ ಹಿರೇಮಠ,ಭೀಮಸಿ ಕಮ್ಮಾರ,ಯಲ್ಲಪ್ಪ ಮುತ್ತೇನ್ನವರ, ಯಲ್ಲಪ್ಪ ಆಡಿನ, ಭೀಮಸಿ ಈರಯ್ಯನವರ ಸೇರಿದಂತೆ ಮಠದ ಸದ್ಭಕ್ತರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 