ಭತ್ತ ಬೆಳೆಗಾರರಿಂದ ಡಿಸೆಂಬರ್ 2 ರಂದು ಬೃಹತ್ ಪ್ರತಿಭಟನಾ ರ್ಯಾಲಿ

ಭತ್ತಕ್ಕೆ ಕ್ವಿಂಟಲ್ ಗೆ 3,500 ಬೆಂಬಲ ಬೆಲೆ

ಭತ್ತ ಬೆಳೆಗಾರರಿಂದ ಡಿಸೆಂಬರ್ 2 ರಂದು ಬೃಹತ್ ಪ್ರತಿಭಟನಾ ರ್ಯಾಲಿ  

ಬಳ್ಳಾರಿ 27: ಇಂದು ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ನಗರದ ಮುಂಡಲೂರು ರಾಮಪ್ಪ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಲಾಯಿತು. 

ಈ ಪತ್ರಿಕಾ ಗೋಷ್ಠಿಯನ್ನು  ಸಂಘದ ಜಿಲ್ಲಾ ಅಧ್ಯಕ್ಷರು ಮತ್ತು ರಾಜ್ಯ ಕಾರ್ಯದರ್ಶಿ ಮಂಡಳಿ  ಸದಸ್ಯರಾಗಿರುವಂತಹ ಗೋವಿಂದ್ ಅವರು ನಡೆಸಿಕೊಟ್ಟರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು  ಭತ್ತಕ್ಕೆ ಕ್ವಿಂಟಲ್ ಗೆ 3,500 ಬೆಂಬಲ ಬೆಲೆ ನಿಗದಿ, ಹಾಗೂ  ಡಿಸೆಂಬರ್ ಮೊದಲ ವಾರದಿಂದಲೇ ಖರೀದಿ ಕೇಂದ್ರದ ಮೂಲಕ ಭತ್ತ ಖರೀದಿ ಪ್ರಾರಂಭಿಸಲು ಆಗ್ರಹಿಸಿ ಈ ಪ್ರತಿಭಟನೆ ನಡೆಯುತ್ತಿದೆ. 

       ಏನೇ ಕಷ್ಟಗಳು ಬಂದರೂ , ಎಂತದ್ದೇ ಪರಿಸ್ಥಿತಿ ಎದುರಾದರೂ ಅವುಗಳನ್ನೆಲ್ಲ ನುಂಗಿ, ಈ ಸಮಾಜಕ್ಕೆ ಪ್ರತಿವರ್ಷ ಭತ್ತ ಬೆಳೆದು ಅನ್ನ ನೀಡುವುದು ನಮ್ಮ ರೈತ.  ಈ ರೈತನ ಪರಿಸ್ಥಿತಿ ಇಂದು ಚಿಂತಾಜನಿಕವಾಗುದೆ.   ಈಗಷ್ಟೇ ಮುಗಿದಿರುವ ನಮ್ಮ ರಾಜ್ಯದ ಉಪ ಚುನಾವಣೆ ಸೇರಿದಂತೆ ಇತರ ರಾಜ್ಯಗಳ ಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ಹೊಳೆ ಹರಿಸುವ ಮತ್ತು ಈ ದೇಶದ ಉದ್ಯಮಿಗಳ ಲಕ್ಷಾನು ಕೋಟಿ ರೂಪಾಯಿ ಮನ್ನಾ ಮಾಡುವ ಈ ಅಡಳಿತಗಾರರಿಗೆ ರೈತರ ಸಮಸ್ಯೆಗಳು ಕಣ್ಣಿಗೆ ಕಾಣುತ್ತಿಲ್ಲ. ಹಾಗಾದರೆ ರೈತರ ಈಗ ಏನು ಮಾಡಬೇಕು,,,? 

 ಸದ್ಯ ಭತ್ತ ಬೆಳೆಗಾರರ ಪರಿಸ್ಥಿತಿ ಹೀಗಿದೆ; ಯಿನೋಡಿ, ಈ ವರ್ಷ ಭತ್ತದ ಬೆಳೆಯು ಚೆನ್ನಾಗಿ ಬೆಳೆದು ಕೈ ಸೇರುವ ಸಂದರ್ಭದಲ್ಲಿ ಅಕಾಲಿಕ ಮಳೆಯಿಂದ ಸಾಕಷ್ಟು ನಷ್ಟ ಉಂಟಾಗಿತು. ಇನ್ನೊಂದು ಕಡೆ ಕೈ ಸೇರಿರುವ  ಭತ್ತಕ್ಕೆ ಬೆಲೆಯು ಸಂಪೂರ್ಣವಾಗಿ ಕುಸಿದಿದೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವರ್ಷ ಇದೆ ಬತ್ತವನ್ನು ಹೆಚ್ಚುಕಡಿಮೆ 3,300 ರೂ ಗಳಂತೆ ಮಾರಾಟ ಮಾಡಲಾಗಿತ್ತು,  ಈ ವರ್ಷ ದರ ಕಡಿಮೆ ಯಾಗಿರುವುದರಿಂದ ರೈತರಲ್ಲಿ ಆತಂಕ ಉಂಟಾಗಿದೆ. ಜೊತೆಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಬೆಳೆದ ಒಂದು ಎಕರೆ ಭತ್ತದಲ್ಲಿ ಸುಮಾರು ಏಳು ರಿಂದ ಎಂಟು ಕ್ವಿಂಟಲ್ ಬತ್ತ ನಷ್ಟವಾಗುವಂತಹ ಸನ್ನಿವೇಶ ಉಂಟಾಗಿದೆ. ಹಾಗಾಗಿ ಈ ರೀತಿ ನಷ್ಟಕ್ಕೀಡಾದ ರೈತರಿಗೆ ಮೇಲಿನ ಬೆಲೆಯಂತೆ ನಷ್ಟ ಪರಿಹಾರ ಕೊಡಬೇಕಾಗಿದೆ. ಆದರೆ ಈ ರೀತಿ ಮಳೆಯಿಂದ ಉಂಟಾದ  ನಷ್ಟದ ಪ್ರಮಾಣವನ್ನು ಸಮೀಕ್ಷೆ ಮಾಡಲು ಗ್ರಾಮಗಳಿಗೆ ಬರುವ ಅಧಿಕಾರಿಗಳು ನೆಲಕ್ಕಚ್ಚಿದ ಭತ್ತವು ಮೊಳಕೆ ಬಂದಿದ್ದರೆ ಮಾತ್ರ ಪರಿಹಾರ ಸಿಗುತ್ತೆ ಎಂಬಂತಹ ಮಾತುಗಳನ್ನಾಡುತ್ತಿರುವುದನ್ನು ನಾವೆಲ್ಲ ಖಂಡಿಸಬೇಕಾಗಿದೆ.  

ಈ ವರ್ಷ ಬೆಳೆ ಬೆಳೆಯಲು ಆಗಿರುವ ವೆಚ್ಚ ; ಇನ್ನೊಂದೆಡೆ, ಈ ವರ್ಷ  ಭತ್ತ ಬೆಳೆ ಬೆಳೆಯಲು  ಖರ್ಚಿನ ಪ್ರಮಾಣ ಸಾಕಷ್ಟು  ಹೆಚ್ಚಾಗಿದೆ.  ಪ್ರಾರಂಭದ ಬೀಜ ಮತ್ತು ಸಸಿಯಿಂದ ಹಿಡಿದು ಗೊಬ್ಬರ - ಕೀಟನಾಶಕ ಸೇರಿದಂತೆ ಇನ್ನಿತರ ಖರ್ಚುಗಳು ಕಳೆದ ವರ್ಷಕ್ಕಿಂತ ಈ ವರ್ಷ ಅಂದಾಜು 15,000 ರೂ, ಕ್ಕಿಂತ ಹೆಚ್ಚಾಗಿದೆ. ಇಷ್ಟೇ ಅಲ್ಲ ನೆಲಕ್ಕಚ್ಚಿ ನಷ್ಟವಾದ ಸುಮಾರು 7 ಕ್ವಿಂಟಲ್ ನ ಮೊತ್ತ  ಅಂದಾಜು 21,000 ರೂ ಮತ್ತು ನೆಲಕ್ಕಚ್ಚಿದ ಭತ್ತದ ಕಟಾವಿನ ವೆಚ್ಚವೂ ಸಹ ಹೆಚ್ಚಾಗುತ್ತದೆ.   ಇಂತಹ ಸಂದರ್ಭದಲ್ಲಿ ಭತ್ತಕ್ಕೆ 3,500 ಬೆಲೆ ನಿಗದಿ ಮಾಡುವುದು ಸೂಕ್ತವಾದದ್ದಾಗಿದೆ. 

ಖರೀದಿ ಕೇಂದ್ರದ ಅವಶ್ಯಕತೆ; ಜೊತೆಗೆ ಈ ಭಾಗದಲ್ಲಿ ನವೆಂಬರ್ ತಿಂಗಳ ಕೊನೆ ಭಾಗದಲ್ಲಿ ಬಹುತೇಕ ಭತ್ತ ಕಟಾವು ನಡೆಯುವುದು ಜಗತ್ತಿಗೆ ತಿಳಿದ ಸಂಗತಿ, ಇದು ಗಮನಕ್ಕಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನವರಿ ಒಂದರಿಂದ  ಖರಿಧಿ ಕೇಂದ್ರದ ಮೂಲಕ ಭತ್ತ ಖರೀದಿ ಪ್ರಾರಂಭ ಮಾಡುತ್ತೇವೆ ಎಂದು ಹೇಳುವುದು ದಲ್ಲಾಳಿಗಳು ಮತ್ತು ಈ ಆಡಳಿತಗಾರರ ಮದ್ಯೆ ಏನೋ ಒಂದು ರೀತಿಯ ಒಪ್ಪಂದವಾದಂತೆ ತೋರಿಸುತ್ತಿದೆ.  ಅಂದರೆ ಮೊದಲು ನೀವು ಕಡಿಮೆ ನೀವು ಕಡಿಮೆ ಬೆಲೆಗೆ ಖರೀದಿಸಿ, ನಂತರ ನಾವು ಕಾಟಾಚಾರಕ್ಕೆ ಖರೀದಿ ಕೇಂದ್ರ ತೆರೆಯುತ್ತೇವೆ ಎಂಬುದು ತೆರೆದ ಸತ್ಯವಾಗಿದೆ.  ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿರುವ ದಲ್ಲಾಳಿಗಳು ಅತೀ ಕಡಿಮೆ ಬೆಲೆಗೆ ಭತ್ತವನ್ನು ಖರೀದಿಸುತ್ತಿದ್ದಾರೆ,  ಅಲ್ಲಿ, ಇಲ್ಲಿ  ಕೈ ಸಾಲ ತಂದು, ಈಗ ಅದು ಬಡ್ಡಿ ಹೆಚ್ಚಾಗಿ, ಉತ್ಪಾದನಾ ವೆಚ್ಚ ಹೆಚ್ಚಾಗಿ, ಸರ್ಕಾರ ಸದ್ಯ ಅವರ ಬೆಲೆ ಖರೀದಿಸದಿರುವ ಸಂಧರ್ಭದಲ್ಲಿ ಅನಿವಾರ್ಯವಾಗಿ ರೈತರು ದಲ್ಲಾಳಿಗಳಿಗೆ ಅತೀ ಕಡಿಮೆ ಬೆಲೆಗೆ ತಮ್ಮ ಬೆಳೆಯನ್ನು ಮಾರುವಂತಾಗಿದೆ.  

ಭತ್ತ ಕಟಾವು ಯಂತ್ರದಿಂದ ಉಂಟಾಗಿರುವ ಸಮಸ್ಯೆ ;      ಇನ್ನೊಂದು ಗಂಭೀರವಾದ ಅಂಶವೆಂದರೆ,  ಭತ್ತ ಕಟಾವು ಮಾಡುವ ಯಂತ್ರಗಳ ಮಾಲೀಕರು ಈ ಭಾರಿ ಒಂದು ಎಕ್ಕರೆ ಕಟಾವಿಗೆ 2,500 ರಿಂದ 3,000 ರೂ ತೆಗೆದುಕೊಳ್ಳುತ್ತಿದ್ದಾರೆ, ಇವರಿಗೆ ಈಗ ಮೂಗುದಾರ ಹಾಕುವ ಸಂಧರ್ಭ ಬಂದಿದೆ. ಹಿಂದಿನ ವರ್ಷ ಈ ರೀತಿ ಹೆಚ್ಚಿನ ಹಣ ಸಂಗ್ರಹಿಸುತ್ತಿದ್ದಾಗ ಅಧಿಕಾರಿಗಳು ಅದನ್ನು ನಿಯಂತ್ರಿಸಿದ್ದರು, ಆದರೆ ಈಗ ಆ ಕಾರ್ಯ ಮಾಡದಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ. 

     ಒಟ್ಟಾರೆ  ಸದ್ಯ ನಮ್ಮ ಸಮಸ್ಯೆಗಳಿಗೆ ಯಾರೂ ಸಹ ಸ್ಪಂದಿಸದ ಕಾರಣ ಈ ಎಲ್ಲಾ ಸಮಸ್ಯೆಗಳ ವಿರುದ್ಧ ನಾವು ನಮ್ಮ ಹಕ್ಕಿಗಾಗಿ ಹೋರಾಡದೇ ಬೇರೆ ದಾರಿಯಿಲ್ಲದಾಗಿದೆ, ಆದ್ದರಿಂದ ಡಿಸೆಂಬರ್ 2 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಂಋಏಒಖ ರೈತ ಸಂಘಟನೆಯ ಬಳ್ಳಾರಿ ಜಿಲ್ಲಾ  ಸಮಿತಿಯು ಭತ್ತ ಬೆಳೆಗಾರರ ಬೃಹತ್ ಪ್ರತಿಭಟನೆಯನ್ನು   ಹಮ್ಮಿಕೊಂಡಿದ್ದು ಜಿಲ್ಲೆಯ ಎಲ್ಲಾ ಭತ್ತ ಬೆಳೆಗಾರರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ರೈತರಿಗೆ ಕರೆ ನೀಡಿದರು.