ಫೆ.1ರಂದು ಬೃಹತ್ ಆರೋಗ್ಯ ತಪಾಸಣೆ ಶಿಬಿರ
Massive health check-up camp on Feb. 1
ಹೂವಿನಹಡಗಲಿ 29: ಇಲ್ಲಿನ ಗವಿಸಿದ್ದೇಶ್ವರ ಜಾತ್ರೆ ಯ ನಿಮಿತ್ತ ವ್ಯೆದ್ಯಕೀಯ ಸಂಘ ಮತ್ತು ಎಸ್.ಎಂ.ಎನ್. ಫೌಂಡೇಶನ್ ವತಿಯಿಂದ ಪೆ.1ರಂದು ಪಟ್ಟಣದ ಗವಿಮಠದ ಶಿವಶಾಂತವೀರ ಸಮುದಾಯದ ಭವನದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಡಾ.ಉಮೇಶ್ ಹೇಳಿದರು. ಪಟ್ಟಣದ ಗವಿಸಿದ್ದೇಶ್ವರ ಮಠದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಶಿಬಿರದಲ್ಲಿ ಹೃದಯ ಪರೀಕ್ಷೆ , ನೇತ್ರಾ ಪರೀಕ್ಷೆ, ದಂತ ಪರೀಕ್ಷೆ ಸೇರಿದಂತೆ ಸಾಮಾನ್ಯ ವೈದ್ಯಕೀಯ ಪರೀಕ್ಷೆ ಜತೆಗೆ ಉಚಿತ ಓಷಧಿಗಳನ್ನು ವಿತರಿಸುತ್ತೇವೆ ಎಂದರು. ಎಸ್.ಎಂ.ಎನ್. ಫೌಂಡೇಶನ್ ಅಶೋಕ, ಶಿವರಾಜ್ ಮತ್ತು ರವೀಂದ್ರ ಶೆಟ್ಟಿ ಮಾತನಾಡಿ ಗ್ರಾಮೀಣ ಭಾಗದ ಬಡ ಜನತೆಗೆ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ತಜ್ಞ ವೈದ್ಯರಿಂದ ಹೃದಯ ಕಾಯಿಲೆ ಸೇರಿದಂತೆ ಉಚಿತವಾಗಿ ಚಿಕಿತ್ಸಾ ಮತ್ತು ಓಷಧಿ ಗಳನ್ನು ವಿತರಿಸಲಾಗುವುದು ಎಂದರು. ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಪವನ್, ಪ್ರಕಾಶ ಇದ್ದರು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 