ನ.21ರಿಂದ ಜಾನುವಾರಗಳ ಬೃಹತ್ ಜಾತ್ರೆ: ಭರ್ಜರಿ ಸಿದ್ಧತೆ

ನ.21ರಿಂದ ಜಾನುವಾರಗಳ ಬೃಹತ್ ಜಾತ್ರೆ: ಭರ್ಜರಿ ಸಿದ್ಧತೆ Massive cattle fair from Nov. 21: Preparations underway

                 ದೇವರಹಿಪ್ಪರಗಿ 18: ಪಟ್ಟಣದ ಐತಿಹಾಸಿಕ ರಾವುತರಾಯ ಜಾತ್ರಾ ಮಹೋತ್ಸವದ ಅಂಗವಾಗಿ ನ.21 ರಿಂದ ನ.27ರವರೆಗೆ ಜರುಗಲಿರುವ ಬೃಹತ್ ಜಾನುವಾರ ಜಾತ್ರೆಗೆ ಭರ್ಜರಿ ಸಿದ್ಧತೆ ನಡೆದಿದ್ದು, ಈ ಬಾರಿಯ ಜಾನುವಾರಗಳ ಬೃಹತ್ ಜಾತ್ರಾ ಮಹೋತ್ಸವ ಯಶಸ್ಸಿಗೆ ಸಹಕರಿಸಲು ಸಿಂದಗಿ ಎಪಿಎಂಸಿ ಮಲ್ಲಯ್ಯ ರಾವುತರಾಯ ಜಾತ್ರಾ ಮಹೋತ್ಸವ ಕಮಿಟಿ ಕೋರಿದ್ದಾರೆ.  

              ಪಟ್ಟಣದಲ್ಲಿ ಮಂಗಳವಾರದಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಂದಗಿ ಎಪಿಎಂಸಿ ಹಾಗೂ ಶ್ರೀ ಮಲ್ಲಯ್ಯ ರಾವುತರಾಯ ಜಾತ್ರಾ ಮಹೋತ್ಸವದ ಸಮಿತಿ ಅವರ ಸಯುಕ್ತ ಆಶ್ರಯದಲ್ಲಿ ಐತಿಹಾಸಿಕ ರಾವುತರಾಯ ಜಾತ್ರಾ ಮಹೋತ್ಸವ ಛಟ್ಟಿ ಅಮಾವಾಸ್ಯೆಯಂದ ಪ್ರಾರಂಭವಾಗುವುದು. ಪ್ರತಿ ವರ್ಷದಂತೆ ಈ ವರ್ಷವೂ ಅತೀ ವಿಜೃಂಭಣೆಯಿಂದ ನಡೆಯುತ್ತದೆ. 

              ವಿಜಯಪುರ ಕಲಬುರ್ಗಿ ರಸ್ತೆಯಲ್ಲಿರುವ ರಿಯಾಜ ಯಲಗಾರ ಅವರ ಪ್ಲಾಟ್ನಲ್ಲಿ  ನ.21 ರಿಂದ ನ.27ರ ವರೆಗೆ ಜರುಗಲಿರುವ ಬೃಹತ್ ಜಾನುವಾರ ಜಾತ್ರೆ ಸುಮಾರು ಏಳು ದಿನಗಳ ಕಾಲ ಜಾನುವಾರಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು. ಜಾತ್ರಾ ಮಹೋತ್ಸವದಲ್ಲಿ ಯಾವುದೇ ಸಮಸ್ಯೆ ಆಗದ ರೀತಿ ನೀರು, ವಿದ್ಯುತ್ತು ಹಾಗೂ ಪಶು ಆಸ್ಪತ್ರೆ ವ್ಯವಸ್ಥೆ ಮಾಡಲಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಾನುವಾರು ಜಾತ್ರೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಮಿಟಿ ಮುಖಂಡರು ಹಗಲಿರುಳು ಶ್ರಮಿಸುತ್ತಿದ್ದಾರೆ.  

            ಜಾನುವಾರು ಮಾರಾಟ ಹಾಗೂ ಪ್ರದರ್ಶನಕ್ಕೆ ಬರದ ಸಿದ್ಧತೆಗಳನ್ನು  ಸಿಂದಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಬಿ.ಎಲ್‌.ಜುಮನಾಳ, ಸಿಂದಗಿ ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ನಾಯ್ಕೋಡಿ (ಬಿಸನಾಳ) ಹಾಗೂ ಉಪಾಧ್ಯಕ್ಷ ಬಸವರಾಜ ಮಾರಲಭಾವಿ ಅವರುಗಳ ನೇತೃತ್ವದಲ್ಲಿ ನಡೆಯುತ್ತಿದೆ. ಜಾತ್ರಾ ಮಹೋತ್ಸವದಲ್ಲಿ ಮದ್ದು ಸುಡುವ, ನಾಟಕ ಪ್ರದರ್ಶನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಪಟ್ಟಣ ಸೇರಿದಂತೆ ತಾಲೂಕಿನ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.