ಫೆ.26 ರಂದು ಬೃಹತ್ ಆರೋಗ್ಯ ಮೇಳ: ಡಿಸಿ

ಹಾವೇರಿ31:  ಸಾಮಾನ್ಯ ಕಾಯಿಲೆಯಿಂದ ಅತ್ಯಂತ ಗಂಭೀರವಾದ ಕ್ಯಾನ್ಸರ್, ಹೃದ್ರೋಗ ರೋಗ ಸೇರಿದಂತೆ 25ಕ್ಕೂ ಅಧಿಕ ಕಾಯಿಲೆಗಳ ಕುರಿತಂತೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡುವ ಜಿಲ್ಲಾ ಮಟ್ಟದ ಬೃಹತ್ ಆರೋಗ್ಯ ಮೇಳ ಕಾರ್ಯಕ್ರಮವನ್ನು ಇದೇ ಫೆಬ್ರುವರಿ 26 ರಿಂದ 28ರವರೆಗೆ ಮೂರು ದಿನಗಳ ಕಾಲ ಹಾವೇರಿ ನಗರದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಮೇಘಾ ಆರೋಗ್ಯ ಮೇಳ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ ಜರುಗಿತು.

ಆರೋಗ್ಯ ಮೇಳ, ಸಂಘಟನೆ ಕುರಿತಂತೆ ಮಾತನಾಡಿದ ಜಿಲ್ಲಾಧಿಕಾರಿಗಳು, ಅತ್ಯಂತ ಅಚ್ಚುಕಟ್ಟಾಗಿ ಹೆಚ್ಚು ಜನರಿಗೆ ಅನುಕೂಲವಾಗುವಂತೆ ಕಾರ್ಯಕ್ರಮವನ್ನು ಆಯೋಜಿಸಬೇಕು. ವ್ಯಾಪಕವಾದ ಪ್ರಚಾರದ ಮೂಲಕ ಕನಿಷ್ಠ 75ಸಾವಿರಕ್ಕೂ ಅಧಿಕ ಜನರು ಬೃಹತ್ ಆರೋಗ್ಯ ಮೇಳದ ಲಾಭ ಪಡೆಯುವಂತಾಗಬೇಕು. ಕನಿಷ್ಠ ಐದು ಸಾವಿರ ರೋಗಿಗಳಿಗಾದರೂ ಚಿಕಿತ್ಸೆ ನೆರವು ಪಡೆಯಬೇಕು. ಕನಿಷ್ಠ 25 ತಪಾಸಣಾ ಕೊಠಡಿಗಳನ್ನು ತೆರೆದು ತಜ್ಞ ವೈದ್ಯರು ಸೇವೆಯಲ್ಲಿ ನಿರತರಾಗಿಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.

ಆರೋಗ್ಯ ಮೇಳ ಫೆಬ್ರುವರಿ 26,27 ಮತ್ತು 28 ರಂದು ಮೂರು ದಿವಸ ನಡೆಸಬೇಕು. ಹುಕ್ಕೇರಿಮಠ ಶಾಲೆಯಲ್ಲಿ ಕಾರ್ಯಕ್ರಮ ಸಂಘಟಿಸಬೇಕು. 25ಕ್ಕೂ ಹೆಚ್ಚು ಬಗೆಯ ತಜ್ಞವೈದ್ಯರುಗಳನ್ನು ಆಹ್ವಾನಿಸಬೇಕು. ಖ್ಯಾತ ವೈದ್ಯರುಗಳನ್ನು ಸಂಪಕರ್ಿಸಿ ಬೃಹತ್ ಆರೋಗ್ಯ ಶಿಬಿರದಲ್ಲಿ ಭಾಗವಹಿಸಲು ಕ್ರಮವಹಿಸಬೇಕು. ಕಿಮ್ಸ್, ಎಸ್.ಡಿ.ಎಂ., ನಾರಾಯಣ ಹೃದಾಲಯ, ಎಸ್.ಸಿ., ಎಸ್.ಎಸ್. ಆಸ್ಪತ್ರೆ, ದಂತ ವೈದ್ಯರು ಸೇರಿದಂತೆ ಪ್ರಖ್ಯಾತ ತಜ್ಞವೈದ್ಯರ ಅನುಭವಿ ಸಲಹೆ ಮತ್ತು ವೈದ್ಯಕೀಯ ಸೇವೆ ಜಿಲ್ಲೆಯ ಜನತೆಗೆ ದೊರಕಬೇಕು ಎಂದು ಸಲಹೆ ನೀಡಿದರು.

ಔಷಧಿ ಪೂರೈಕೆ, ಪ್ರಯೋಗಾಲಯ ವ್ಯವಸ್ಥೆ, ಇಸಿಜಿ, ಇಕೋ, ಅಲ್ಟ್ರಾಸೌಂಡ್ ಸೇರಿದಂತೆ ವಿವಿಧ ತಪಾಸಣೆ ವಿಭಾಗಗಳು ಪ್ರತ್ಯೇಕ ತಜ್ಞ ವೈದ್ಯಕೀಯ ವಿಭಾಗ ಕೊಠಡಿಗಳನ್ನು ತೆರೆಯಬೇಕು. ಮೂರು ದಿನ ಹುಕ್ಕೇರಿಮಠದ ಶಾಲಾ ಆವರಣ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮಾದರಿಯಲ್ಲಿ ವಿನ್ಯಾಸಗೊಳಿಸಬೇಕು. ಆಯುಷ್ ವಿಭಾಗವನ್ನು ತೆರೆಯಬೇಕು. ವಿವಿಧ ಮಳಿಗೆಗಳನ್ನು ತೆರೆಯಬೇಕು.  ತಜ್ಞವೈದ್ಯರಿಂದ ಉಪನ್ಯಾಸ ಕಾರ್ಯಕ್ರಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಅತ್ಯಂತ ಅರ್ಥಪೂರ್ಣ ಹಾಗೂ ಚಿತೋಹಾರಿಯಾಗಿ ಕಾರ್ಯಕ್ರಮವನ್ನು ಸಂಘಟಿಸುವಂತೆ ಸೂಚನೆ ನೀಡಿದರು.

ಊಟ, ಉಪಚಾರ, ಸಾರಿಗೆ ವ್ಯವಸ್ಥೆ, ಅರೇ ವೈದ್ಯಕೀಯ ಸಿಬ್ಬಂದಿಗಳ ನೇಮಕ, ಪ್ರಚಾರ, ಅಂಬ್ಯುಲೆನ್ಸ್ ಸೇವೆ, ಕುಡಿಯುವ ನೀರು ಸ್ವಚ್ಛತೆ, ಪ್ರಯೋಗಾಲಯ ಸಾಮಗ್ರಿ, ಇತರ ವ್ಯವಸ್ಥೆ ಕುರಿತಂತೆ ಚಚರ್ಿಸಿ ಸಮಿತಿಗಳನ್ನು ರಚಿಸಲಾಯಿತು. 

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರ, ಜಿಲ್ಲಾ ಶಸ್ತ್ರ ಚಿಕಿತ್ಸ ನಾಗರಾಜ ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿದರ್ೆಶಕ ಪಿ.ವೈ.ಶೆಟ್ಟೆಪ್ಪನವರ, ಜಿಲ್ಲಾ ವಾತರ್ಾಧಿಕಾರಿ ಡಾ.ಬಿ.ಆರ್.ರಂಗನಾಥ್, ತಾಲೂಕಾ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು