ಖಾನಾಪೂರ ಗ್ರಾಮದಲ್ಲಿ ಸಾಮೂಹಿಕ ವಿವಾಹ ಶರಣ ಬಸವೇಶ್ವರರ 50 ನೇ ವರ್ಷದ ಸುವರ್ಣ ಮಹೋತ್ಸವ

ಖಾನಾಪೂರ ಗ್ರಾಮದಲ್ಲಿ ಸಾಮೂಹಿಕ ವಿವಾಹ  ಶರಣ ಬಸವೇಶ್ವರರ 50 ನೇ ವರ್ಷದ ಸುವರ್ಣ ಮಹೋತ್ಸವ Mass marriage in Khanapur village marks 50th anniversary of Sharan Basaveshwara

ಶಿರಹಟ್ಟಿ 04 : ತಾಲೂಕಿನ ಸುಕ್ಷೇತ್ರ ಖಾನಾಪೂರ ಗ್ರಾಮದ  ಬಸವೇಶ್ವರ ಶಿವಾನುಭವ ಮಂಟಪದಲ್ಲಿ 50 ನೇ ವರ್ಷದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಮಹಾಮಹಿಮ ತ್ರಿವಿಧ ದಾಸೋಹ ಮೂರ್ತಿ ಕಲಬುರ್ಗಿ  ಶರಣ ಬಸವೇರ್ಶವರ ಪುರಾಣ ಪ್ರವಚನ ಈಗಾಗಲೇ ಪ್ರಾರಂಭವಾಗಿದ್ದು,ಇದೇ ದಿನಾಂಕ ಮಾರ್ಚ್‌ 8 ರಂದು ಮಹಾ ಮಂಗಲೋತ್ಸವ ಹಾಗೂ 10 ಜೋಡಿ ಸಾಮೂಹಿಕ ಮದುವೆ ಸಮಾರಂಭ ಜರುಗಲಿದೆ ಎಂದು ಬಸವರಾಜ ಹಲಸೂರ ಹೇಳಿದರು. ಅವರು ಪಟ್ಟಣ ಪ್ರವಾಸಿ ಮಂದಿರದಲ್ಲಿ ಏರಿ​‍್ಡಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, 1976 ನೇ ಇಸ್ವಿಯಲ್ಲಿ ಶರಣ ಬಸವೇಶ್ವರ ಪುರಾಣ ಪ್ರವಚನ ನಮ್ಮ ಹಿರಿಯರು ಪ್ರಾರಂಭಮಾಡಿದ್ದರು.

ಅವರ ಹಾದಿಯಲ್ಲಿಯೇ ಇದನ್ನು ಮುಂದುವರೆಸಿಕೊಂಡು ಎಲ್ಲರೂ ಬಂದಿದ್ದರಿಂದ ಇಂದು 50 ನೇ ವರ್ಷದ ಸುವರ್ಣ ಮಹೋತ್ಸವ ಆದ್ದೂರಿ ಕಾರ್ಯಕ್ರಮ ಮಾಡಲು ಎಲ್ಲ ರೀತಿಯ ಸಿದ್ಧತೆ ನೆಡೆದಿದೆ ಎಂದರು. ನಂತರ ಸುರೇಶ ಅಕ್ಕಿ ಮಾತನಾಡುತ್ತಾ, ಶ್ರೀ ಶರಣ ಬಸವೇಶ್ವರ ಪುರಾಣ ಪ್ರವಚನ ಮಂಗಲೋತ್ಸವ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು,ಗ್ರಾಮದಲ್ಲಿರುವ ಪ್ರತಿಯೊಂದು ಸಮಾಜದವರು ಇದಕ್ಕೆ ಸಹಕಾರ ನೀಡಿದ್ದಾರೆ. ವಿಶೇಷ ಏನೆಂದರೆ ಪುರಾಣ ಪ್ರವಚನ 5 ನೇ ದಿನದಲ್ಲಿ ಮುಸ್ಲಿಂ ಬಾಂಧವರು ಸುರಕುರಮಾ ಮಾಡಿ ಪ್ರಸಾದ ನೀಡಿದರು.

ಮದುವೆ ದಿನದಂದು ಬಂದಂತಹ ಭಕ್ತರಿಗೆ ಸುಮಾರು 8000 ಹೋಳಿಗೆ, ತುಪ್ಪ, ಹಾಲು, ಮೊಸರು, ಬಾಳೆಹಣ್ಣು, ಹಪ್ಪಳ, ತೆಂಡಗಿ, ಮಿರ್ಚಿ ಹಾಗೂ ಆನೇಕ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಎಲ್ಲ ಸದ್ಭಕ್ತರು ಈ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕು ಮಾಡಿಕೊಂಡರು. ಪಂಚಪ್ಪ ಹಲಸೂರ, ಆಶೋಕಪ್ಪ ಮಡಿವಾಳರ ರುದ್ರ​‍್ಪ ಕರಮುಡಿ, ರಾಜು ಛಬ್ಬಿ, ಜಗದಯ್ಯ ಹಿರೇಮಠ, ಫಕ್ಕೀರ​‍್ಪ ರಡ್ಡೆರ, ದ್ಯಾಮಣ್ಣ ಒಂಟೆ ಸರೋಜವ್ವ ಹಿರೇಮಠ ಪಾರು ಹಿರೇಮಠ, ಪಾರಮ್ಮ ಬೆಂತೂರ, ಈರಮ್ಮ ಹಿರೇಮಠ ಹಾಗೂ ಆನೇಕರು ಇದ್ದರು.