ಮಾರುತಿ ನಗರದ ಸರ್ಕಾರಿ ಪ್ರೌಢಶಾಲೆ: ಸ್ಕೌಟ್ ಅಂಡ್ ಗೈಡ್ಸ್ ತಂಡ ಅಸ್ತಿತ್ವಕ್ಕೆ - ವೆಂಕಟೇಶ್ ಈಡಿಗರ
Maruti Nagar Government High School: Scout and Guides team comes into existence - Venkatesh Eedigar
ರಾಣೆಬೆನ್ನೂರು :2 ಮಕ್ಕಳ ವ್ಯಕ್ತಿ ವಿಕಾಸತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ತುಂಬಾ ಸಹಕಾರಿಯಾಗಿದೆ ಎಂದು ಮಾರುತಿ ನಗರದ ಸರ್ಕಾರಿ ಪ್ರೌಢಶಾಲೆಯ ಪ್ರಧಾನ ಗುರು ರಮೇಶ ಕಾಳೇರ ಹೇಳಿದರು. ಅವರು ಇಲ್ಲಿನ ಸರಕಾರಿ ಪ್ರೌಢ ಶಾಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಉದ್ಘಾಟನೆ ನೆರವೇರಿಸಿ, ಮಾತನಾಡಿದರು. ತಮ್ಮ ಪ್ರೌಢಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಾರಿಗೆ ತರಬೇಕೆನ್ನುವ ತಮ್ಮ ಬಹು ವರ್ಷಗಳ ಕನಸು ಮತ್ತು ಆಸೆ ಇಂದು ಈಡೇರಿದಂತಾಗಿದೆ.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು, ತಾವು ಕಂಡಂತೆ ಮಾನವೀಯ ಗುಣಗಳ ಜೊತೆಗೆ, ಸಾಮಾಜಿಕ ಸೇವಾ ಕಳಕಳಿ ಬೆಳೆಸುವುದು ಮತ್ತು ಉತ್ತಮ ಗುಣ ಧರ್ಮಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲು ತುಂಬಾ ಸಹಕಾರಿಯಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ, ರಂಗ ಶಿಕ್ಷಕ, ಸ್ಕೌಟ್ಸ್ ಮಾಸ್ಟರ್ ವೆಂಕಟೇಶ್ ಈಡಿಗರ ಅವರು, ಇಂದು ಈ ಪ್ರೌಢಶಾಲೆಯಲ್ಲಿ 20 ಗೈಡ್ಸ್ 18 ಸ್ಕೌಟ್ಸ್ ವಿದ್ಯಾರ್ಥಿಗಳ ತಂಡವನ್ನು ರಚಿಸಲಾಗಿದೆ. ರಾಣಿ ಅಬ್ಬಕ್ಕ ಗೈಡ್ಸ್ ಮತ್ತು ರವೀಂದ್ರನಾಥ ಟ್ಯಾಗೂರು ಸ್ಕೌಟ್ಸ್ ತಂಡವನ್ನು ಪ್ರಾರಂಭಿಸಿ ದ್ದು, ಇದರಿಂದಾಗಿ ಮಕ್ಕಳಲ್ಲಿ ಮಾನಸಿಕ, ದೈಹಿಕ, ಮತ್ತು ಬೌದ್ಧಿಕ ಬೆಳವಣಿಗೆಯ ಜೊತೆಗೆ ತಮ್ಮ ಜೀವನದಲ್ಲಿ ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ತುಂಬಾ ಸಹಕಾರಿಯಾಗಲಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕವು ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ತನ್ನ ಕಾರ್ಯವನ್ನು ನಿರ್ವಹಿಸುತ್ತಲ್ಲಿದೆ ಅಲ್ಲದೆ ಇದರಿಂದ ಮಕ್ಕಳಲ್ಲಿ ಪರಿಪೂರ್ಣ ಮಾನವೀಯ ಗುಣ ಧರ್ಮಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕ ಸಿ.ಎನ್. ಪಾಟೀಲ, ಶ್ರೀಮತಿ ಮಣ್ಣಮ್ಮನವರ, ಮಹೇಶ ತಿಳುವಳ್ಳಿ, ದೈಹಿಕ ಶಿಕ್ಷಕಿಯರಾದ ಪಲ್ಲವಿ ನಾಯಕ, ಸೌಭಾಗ್ಯ, ಸವಿತಾ ಪಾಟೀಲ, ಸೇರಿದಂತೆ ಮತ್ತಿತರ ಗಣ್ಯರು, ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು. ಸುಪ್ರೀತಾ ಮತ್ತು ರಮ್ಯ ತಂಡದವರು ಧ್ವಜ ಗೀತೆ ಹಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 