ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ

ಲೋಕದರ್ಶನ ವರದಿ

ಬೈಲಹೊಂಗಲ 31:  ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಇದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಬದಲು ಸಾಮೂಹಿಕ ವಿವಾಹದಿಂದ ಆಥರ್ಿಕ ಹೊರೆ ತಗ್ಗಿಸಿ, ಸದೃಢತೆಗೆ ಪೂರಕವಾಗಲಿದೆ ಎಂದು ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮಿಜಿ ಹೇಳಿದರು. 

        ಸುಕ್ಷೇತ್ರ ಇಂಚಲ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರ 80 ನೇ ಜಯಂತ್ಯುತ್ಸವ (ಸಹಸ್ರ ಚಂದ್ರ ದರ್ಶನ ಮಹೋತ್ಸವ), 50 ನೇ ವರ್ಷದ ಪೀಠಾರೋಹಣ, 50 ನೇ ಅಖಿಲ ಭಾರತ ವೇದಾಂತ ಪರಿಷತ್ತಿನ ಸುವರ್ಣ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಸಾಮೂಹಿಕ ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಅಭಿವೃದ್ದಿಗೂ ಸಹಕಾರಿಯಾಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಎಂದರು.

   ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ಪವಿತ್ರವಾದ ಧಾಮರ್ಿಕ ಕ್ಷೇತ್ರಗಳ ನೂರಾರು ಮಠಾಧೀಶರು, ಸಹಸ್ರಾರು ಭಕ್ತರ ಆಶೀವರ್ಾದದೊಂದಿಗೆ ನವ ಜೀವನ ಬಂಧನಕ್ಕೊಳಗಾಗುವ ಭಾಗ್ಯ ಜೀವನದ ಸಾರ್ಥಕತೆ ಕ್ಷಣವಾಗಿದೆ. ವಧು-ವರರು ಪರಸ್ಪರ ಒಬ್ಬರೊನ್ನುಬ್ಬರು ಅರಿತು ಸಹಭಾಳ್ವೆ ನಡೆಸಿದಾಗಲೇ ದಾಂಪತ್ಯ ಜೀವನಕ್ಕೆ ಉತ್ತಮ ಅರ್ಥ ಸಿಗುತ್ತದೆ ಎಂದರು.

      ಪ್ರೇಮ ಭಕ್ತಿ ಶ್ರದ್ದೆ ಇದ್ದರೆ ಜೀವನದ ಸಾರ್ಥಕತೆ ಸಾಧ್ಯ. ಶ್ರೀಮಠದ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ತನು ಮನ ಧನದಿಂದ ಸೇವೆ ಸಲ್ಲಿಸಿ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಿ ನೂರಾರು ಮಹಾತ್ಮರ ಅಮೃತವಾಣಿಗಳನ್ನು ಆಲಿಸಿ ಮನಸ್ಸು ಹಗುರ ಮಾಡಿಕೊಂಡಿದ್ದಾರೆ. ಭಗವಂತನು ಅವರೆಲ್ಲರನ್ನೂ ರಕ್ಷಿಸಲಿ. ಮಹಾತ್ಮರು ಇಂಚಲ ಮಠದ ಮೇಲಿನ ಪ್ರೀತಿಯಿಂದ ಆಗಮಿಸಿ ಭಕ್ತರಿಗೆ ದರ್ಶನ ಭಾಗ್ಯ ನೀಡಿದ್ದಾರೆ ಎಂದರು.

ಸಾನಿಧ್ಯವನ್ನು ಕಾಶಿಯ ರಾಜರಾಜೇಶ್ವರಿಮಠದ ದಿವ್ಯಚೈತನ್ಯಜೀ ಮಹಾರಾಜ, ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮಿಜಿ, ವಿಜಯಪುರದ ಅಭಿನವ ಶಿವಪುತ್ರ ಸ್ವಾಮಿಜಿ, ಹುಕ್ಕೇರಿ ಹಿರೇಮಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ,  ಹುಬ್ಬಳ್ಳಿಯ ಚಿದ್ರೂಪಾನಂದ ಸ್ವಾಮಿಜಿ, ರಾಮಾನಂಧ ಭಾರತಿ ಸ್ವಾಮಿಜಿ, ಹರಳಕಟ್ಟಿ ನಿಜಗುಣ ಸ್ವಾಮಿಜಿ, ಬೀದರ ಗಣಪತಿ ಮಹಾರಾಜರು,  ಖುರ್ದಕಂಚನಹಳ್ಳಿ ಸುಬ್ರಹ್ಮಣ್ಯ ಸ್ವಾಮಿಜಿ, ಆಂದ್ರಪ್ರದೇಶದ ಪರಿಪೂಣರ್ಾನಂದ ಸ್ವಾಮಿಜಿ, ಪ್ರಣವಾನಂದ ಸ್ವಾಮಿಜಿ,  ಮಲ್ಲಾಪುರದ ಗಾಳೇಶ್ವರಮಠದ ಚಿದಾನಂದ ಸ್ವಾಮಿಜಿ, ಪಿ.ಜಿ.ಹುಣಶ್ಯಾಳ ನಿಜಗುಣ ದೇವರು, ಹಡಗಿನಾಳದ ಮಲ್ಲೇಶ್ವರ ಶರಣರು  ಹಾಗೂ ವಿವಿಧ ಮಠಾಧೀಶರು ವಹಿಸಿದ್ದರು. ವೇದಿಕೆ ಮೇಲೆ ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡ್ರ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಇದ್ದರು. 

     ಸಂಸ್ಥೆಯ ಅಧ್ಯಕ್ಷ ಡಿ.ಬಿ.ಮಲ್ಲೂರ, ಮಾಜಿ ಅಧ್ಯಕ್ಷ ಎಸ್.ಎಂ.ರಾಹುತನವರ,  ಉಪಾಧ್ಯಕ್ಷ ಎಸ್.ಜಿ.ಜಕಾತಿ, ಗೌರವ ಕಾರ್ಯದಶರ್ಿ ಎಸ್.ಎನ್.ಕೊಳ್ಳಿ, ಎಪಿಎಂಸಿ ಉಪಾಧ್ಯಕ್ಷ ಬಸಪ್ಪ ಮಲ್ಲೂರ, ಗ್ರಾಪಂ.ಅಧ್ಯಕ್ಷ ಸುರೇಶ ವಾರಿ, ಶಿವಾನಂದ ಪೂಜೇರಿ,  ಶಿವಗೊಂಡ ಧರ್ಮಟ್ಟಿ, ಅಪ್ಪಾಸಾಹೇಬ ಕುಲಕಣರ್ಿ, ವಿಠ್ಠಲ ಬಂತ್ತಿ, ಬಾಹುಬಲಿ ಪರಮಗೌಡರ, ಬಾಬು ಹಳ್ಳೂರ, ಹೊನ್ನಪ್ಪ ಗುರವ, ವಿಜಯ ಬಂತ್ತಿ, ರಾಜು ಕಲರ್ೋಳ್ಳಿ, ಗೋಪಾಲ ಧರ್ಮಟ್ಟಿ, ಪದ್ಮರಾಜ ಕರ್ನವಾಡಿ, ಅಪ್ಪಾಸಾಹೇಬ ಪಾಟೀಲ, ವಿಜಯ ಬಂತ್ತಿ, ಸುರೇಶ ಧರ್ಮಟ್ಟಿ, ರವಿ ಪರಡ್ಡಿ, ಎಸ್.ಡಿ.ಕರಾಡೆ, ಬಸವರಾಜ ಸಾವಳಗಿ ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಶ್ರೀಗಳ ಪಲ್ಲಕ್ಕಿ ಉತ್ಸವ: ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರ ಜಯಂತ್ಯೋತ್ಸವ ನಿಮಿತ್ಯ ಇಂಚಲ ಗ್ರಾಮದಲ್ಲಿ ಶ್ರೀಗಳ ಪಲ್ಲಕ್ಕಿ ಉತ್ಸವ ಸಂಚರಿಸುವಾಗ ಭಕ್ತರು ಮನೆಯ ಮುಂಭಾಗದಲ್ಲಿ ರಂಗೋಲಿ, ನೀರು ಹಾಕಿ, ಪುಷ್ಪಾರ್ಚನೆಗೈದು ಭಕ್ತಿಭಾವ ಮೆರೆದರು. ಸಕಲ ವಾದ್ಯ ಮೇಳಗಳೊಂದಿಗೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ತೊಟ್ಟಿಲೋತ್ಸವ, ಕನಕ ಸಿಂಹಾಸನಾರೋಹಣ: ಜ.30 ರಂದು ರಾತ್ರಿ 10ಕ್ಕೆ ಡಾ.ಶಿವಾನಂದ ಭಾರತಿ ಶ್ರೀಗಳನ್ನು ತೂಗಿರೆ ಶಿವನನ್ನ, ತೂಗಿರೆ ಶಿವಾನಂದ ಭಾರತೀ ಶಿಶುವನ್ನು, ಸಿದ್ದಾರೂಢನ ಜಾತ್ರೆ ಬಲು ಜೋರು, ಜೋರು ಕಣ್ತುಂಬಿಕೊಳ್ಳೋಣ ಬಾರಾ, ಜೋ ಜೋ ಲಾಲಿ, ಜೋ ಜೋ ಲಾಲಿ ಎಂಬ ಜೋಗುಳ  ಹಾಡುಗಳ ಮಧ್ಯೆ ತೊಟ್ಟಿಲಲ್ಲಿ ತೂಗಿ, ಜನ್ಮದಿನಾಚರಣೆ ಆಚರಿಸಿದ್ದನ್ನು ಕಣ್ತುಂಬಿಕೊಂಡ ಸದ್ಭಕ್ತರು ಪಾವನರಾದರು. ನಂತರ ಕನಕ ಸಿಂಹಾಸನಾರೋಹಣ, ಕನಕ ಕಿರೀಟ ಮಹಾಪೂಜೆ, ಪಾದ ಪೂಜೆ ಅದ್ದೂರಿಯಾಗಿ ಜರುಗಿದವು. ಶಿವಯೋಗೀಶ್ವರ ಮಾಜಿ ಸೈನಿಕರ ಸೇವಾ ಸಂಘದಿಂದ ಮದ್ದಿನ ಬಿರುಸು ಬಾಣಗಳ ಪ್ರದರ್ಶನ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ, ನೊಡುಗರ ಮನ ಸೆಳೆದು ಆಕಷರ್ಿಸಿತು. ರಾಜ್ಯ ಪ್ರಶಸ್ತಿ ವಿಜೇತೆ ಮಲ್ಲಮ್ಮ ಮ್ಯಾಗೇರಿ ಸಂಗಡಿಗರಿಂದ ಕೃಷ್ಣ ಪಾರಿಜಾತ ಜರುಗಿತು.