ಗೋಕರ್ಣ೨೮: ಸಮುದ್ರ ಸ್ನಾನಕ್ಕೆ ತೆರಳಿದ ಬಾಲಕ ಸಮುದ್ರ ಸುಳಿಗೆ ಸಿಲುಕಿದಾಗ ಅವನ ರಕ್ಷಿಸಲು ಹೋದ ಕುಟುಂಬ ಸದಸ್ಯರು ಸಹ ಸೆಳತಕ್ಕೆ ಸಿಕ್ಕು ಪ್ರಾಣಾಪಾಯದಲ್ಲಿದ್ದವರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಇಲ್ಲಿನ ಓಂ ಕಡಲತೀದರಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಬೆಳಗಾವಿ ಮೂಲದ ಬಾಲಕ ಹುಸೈನ್ (14) ಈತ ಸಮುದ್ರಕ್ಕೆ ಇಳಿದಿದ್ದು, ಸಮುದ್ರ ಸೆಳತಕ್ಕೆ (ಸುಳಿ) ಸಿಲುಕಿದ್ದಾನೆ , ಇದನ್ನು ಅರಿತ ಕುಟುಂಬದವರು ಬಾಲಕ ರಕ್ಷಣೆಗೆ ಒಬ್ಬೊಬ್ಬರಾಗಿ ತೆರಳಿದ್ದು, ರಕ್ಷಣೆಗೆ ತೆರಳಿದ ಮೂರು ಜನ ಕ್ಷಣ ಮಾತ್ರದಲ್ಲಿ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದರು ಅಷ್ಟರಲ್ಲಿ ಕರ್ತವ್ಯದಲ್ಲಿ ಜೀವರಕ್ಷಕ ಸಿಬ್ಬಂದಿ ಗಮನಿಸಿದ್ದು ತಕ್ಷಣ ಧಾವಿಸಿ ನಾಲ್ಕು ಜನರನ್ನು ರಕ್ಷಿಸಿದ್ದಾರೆ. ಸಹಝಾದ(26), ಅಬ್ದುಲ್ಲಾ (20) ಬೇಪರಿ(42) ಬಾಲಕನ ರಕ್ಷಣೆಗೆ ಧಾವಿಸಿ ಅಪಾಯದಲ್ಲಿ ಸಿಲುಕಿ ಜೀವಾಪಾಯದಿಂದ ಪಾರಾಗಿ ಬಂದವರಾಗಿದ್ಧಾರೆ.
ಜೀವರಕ್ಷ ಸಿಬ್ಬಂದಿಗಳಾದ ಪಾಂಡುರಂಗ ಅಂಬಿಗ, ಪ್ರಭಾಕರ ಅಂಬಿಗ ರಕ್ಷಿಸಿದವರಿಗದ್ದಾರೆ. ಪ್ರವಾಸಿ ಮಿತ್ರ ಸಿಬ್ಬಂದಿ ಸತೀಶ ನಾಯ್ಕ ಜೊತೆಯಲ್ಲಿದ್ದು ಸಹಾಯ ಮಾಡಿದ್ದು, ತಮ್ಮ ಜೀವದ ಹಂಗು ತೊರೆದು ಜೀವರಕ್ಷಣೆ ಮಾಡುತ್ತಿರುವ ಇವರ ಕಾರ್ಯಕ್ಕೆ ಪ್ರವಾಸಿಗರು, ಸ್ಥಳೀಯರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಕಳೆದ ವಾರ ಕುಡ್ಲೆ ಕಡಲತೀರದಲ್ಲಿ ಇದೇ ರೀತಿ ಜೀವಪಾಯಕ್ಕೆ ಸಿಲುಕಿದಾಗ ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದು, ಇಲ್ಲಿ ಸ್ಮರಿಸಬಹುದಾಗಿದೆ.