ನಾಗಾವಿ ಗ್ರಾಮದಲ್ಲಿ ಮಾನುಳ್ಳವರ ಮನೆತನ ನಾಟಕ ಪ್ರದರ್ಶನ ಜ.3ಕ್ಕೆ
Manullavara family drama performance in Nagavi village on January 3rd
ಗದಗ 31: ಸಾಧು ಸತ್ಪುರುಷರ ತಪೋಭೂಮಿ ಗದಗ ತಾಲೂಕು ನಾಗಾವಿ ಗ್ರಾಮದ ಸುಕ್ಷೇತ್ರ ರೇಣುಕಾದೇವಿ ಜಾತ್ರೆ ನಿಮಿತ್ತ ಜ.3 ರಂದು ಶನಿವಾರ ರಾತ್ರಿ 10 ಗಂಟೆಗೆ ಗ್ರಾಮದ ರೇಣುಕಾದೇವಿ ರಂಗಮಂದಿರದಲ್ಲಿ ಬಸವೇಶ್ವರ ಭಜನಾ ನಾಟ್ಯ ಸಂಘದಿಂದ ಎಚ್.ಎಸ್. ಹೊಸಮನಿ ಕವಿಗಳು ರಚಿಸಿ ಮಾನುಳ್ಳವರ ಮನೆತನ ಎಂಬ ಸುಂದರ ಸಾಮಾಜಿಕ ನಾಟಕವು ಮಂಡಳ ಪಂಚಾಯತ್ ಪ್ರಧಾನರಾಗಿದ್ದ ದಿ.ವಿರುಪಾಕ್ಷಪ್ಪನವರು ಚಿಂಚಲಿ ಅವರ ಸವಿನೆನಪಿನೊಂದಿಗೆ ಜರುಗಲಿದೆ. ನಾಟಕದ ಉದ್ಘಾಟನೆಯನ್ನು ಡಾ.ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಕೊಟ್ಟೂರೇಶ್ವರ ಮಠ ಹರ್ಲಾಪುರ-ಹಳ್ಳಿಗುಡಿ ಇವರ ಸಾನ್ನಿಧ್ಯದಲ್ಲಿ ಗ್ರಾಮದ ಗಂಗಾಧರೇಶ್ವರ ಮಠದ ವೇ.ಮೂ. ಮೃತ್ಯುಂಜಯ ಸ್ವಾಮಿಗಳು ಹಿರೇಮಠ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರೊ.ಎಸ್.ವಿ. ಸಂಕನೂರ ಅವರು ನೆರವೇರಿಸಲಿದ್ದಾರೆ.
ತಾಲೂಕ ಪಂಚಾಯತ ಮಾಜಿ ಅಧ್ಯಕ್ಷರಾದ ಬಿ.ಎಸ್. ಚಿಂಚಲಿ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಕೆ.ಎಸ್. ಈಶ್ವರ್ಪನವರ ಪುತ್ರರಾದ ಕಾಂತೇಶ್, ಭಾರತೀಯ ಜನತಾ ಪಕ್ಷದ ಗದಗ ಜಿಲ್ಲಾಧ್ಯಕ್ಷ ರಾಜಣ್ಣ ಕುರುಡಗಿ, ಬಿಜೆಪಿ ಮುಖಂಡರಾದ ವಿಜಯಕುಮಾರ ಗಡ್ಡಿ, ಗದಗ ಗ್ರಾಮೀಣ ಪೊಲೀಸ್ ಠಾಣೆಯ ವಿ.ಜಿ. ಪವಾರ್, ಬೆಳದಡಿಯ ಬಿಜೆಪಿ ಮುಖಂಡರಾದ ಮಂಜುನಾಥ್ ಹಳ್ಳೂರಮಠ, ವಕೀಲರಾದ ರವಿಕಾಂತ್ ಅಂಗಡಿ, ಅಳಗವಾಡಿ ಗ್ರಾಮದ ಜಿ.ವೈ. ಅವರಾದಿ, ನಾಗಾವಿ ಗ್ರಾಮ ಪಂಚಾಯತ್ ಸದಸ್ಯರಾದ ಅಲ್ಲಾಸಾಬ್ ಪೀರಖಾನವರ, ಹನುಮವ್ವ ಗುಡಿಮನಿ, ಕಳಸಾಪುರ ಗ್ರಾಮದ ಬಸವಯ್ಯಸ್ವಾಮಿ ಸಾಸ್ವಿಹಳ್ಳಿಮಠ, ನಾಗಸಮುದ್ರ ಗ್ರಾಮದ ಪ್ರಗತಿಪರ ರೈತರಾದ ನಿಂಗಪ್ಪ ಮಣ್ಣೂರ, ನಾಗಾವಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಮುಖಂಡರುಗಳು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಬಸವೇಶ್ವರ ಭಜನಾ ಸಂಘದ ಸರ್ವ ಸದಸ್ಯರು ತಿಳಿಸಿದ್ದಾರೆ.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 