ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವದಿಂದ ಸತತವಾಗಿ 42 ದಿನಗಳ ಮಂಡಲ ಪೂಜಾ ಕಾರ್ಯಕ್ರಮ: ಸೋಮಶೇಖರ ರೆಡ್ಡಿ
Mandala Puja program to continue for 42 days from the idol installation festival: Somashekar Reddy
ಬಳ್ಳಾರಿ 8: ನಗರದ ರಾಘವೇಂದ್ರ ಕಾಲೋನಿ 2ನೇ ಹಂತದಲ್ಲಿನ ಇಂಟೂರಿ ನಗರದಲ್ಲಿರುವ ಶ್ರೀ ಕಾಶೀ ವಿಶ್ವನಾಥ ವಿಶಾಲಾಕ್ಷಿ ದೇವಸ್ಥಾನದಲ್ಲ್ಲಿ ವಿಗ್ರಹಗಳ ಪ್ರತಿಷ್ಠಾಪನೆ ನೆರವೇರಿಸಿ 42 ದಿನಗಳು ಮುಗಿದಿದ್ದ ಸಂದರ್ಭದಲ್ಲಿ ಪ್ರತಿಷ್ಠಾಪನಾ ಮಹೋತ್ಸವದಿಂದ ಸತತವಾಗಿ 42 ದಿನಗಳ ಮಂಡಲ ಪೂಜಾ ಕಾರ್ಯಕ್ರಮಗಳು ಗಣಪತಿ ಪೂಜೆ, ನವಗ್ರಹ ಪೂಜಾ ಮತ್ತು ಮೃತ್ಯುಂಜಯ ಹೋಮಗಳು ಪ್ರಧಾನ ಅರ್ಚಕರಾದ ರಾಘವೇಂದ್ರ ಆಚಾರ್, ಸಂತೋಷ್ ಸ್ವಾಮಿ ಇವರ ನೇತೃತ್ವದಲ್ಲಿ ಸಂಪೂರ್ಣವಾಗಿ ಇಂದು ಮುಗಿಯಿತು. ಈ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸೋಮಶೇಖರರೆಡ್ಡಿ ಅವರು ಆಗಮಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಾಯಿತು. ಪೂಜೆಯ ನಂತರ ಮಾತನಾಡಿದ ಅವರು, ಇಂತಹ ಪೂಜಾ ಕಾರ್ಯಕ್ರಮಗಳು, ಇದರಲ್ಲಿ ವಿಧಿ-ವಿಧಾನಗಳು ಮಾನವನ ಜೀವನದಲ್ಲಿ ಅನುಸರಿಸಬೇಕೆಂದು ಆಶಿಸಿದರಲ್ಲದೆ,
ಇಂತಹ ಕಾರ್ಯಕ್ರಮ ಮುಂದಿನ ಪೀಳಿಗೆಯ ಯುವಕರಿಗೆ ದೇವರ ಮೇಲಿನ ಆಧ್ಯಾತ್ಮಿಕ ಭಕ್ತಿಗೆ ಅನುಗುಣವಾಗಬೇಕೆಂದು. ಇಂತಹ ಆಧಾತ್ಮಿಕ ಶಕ್ತಿಯಿಂದ ಮಾತ್ರ ಇಂದಿಗೆ ಕಾಲವು ನಡೆಯುತ್ತಿದೆ ಎಂದು ಈ ಸಂದರ್ಭದಲ್ಲಿ ನುಡಿದರು. ಈ ಕಾರ್ಯಕ್ರಮದಲ್ಲಿ 20ನೇ ವಾರ್ಡ್ ಪಾಲಿಕೆ ಸದಸ್ಯ ವಿವೇಕ್ (ವಿಕ್ಕಿ), ಮಾಜಿ ಪಾಲಿಕೆ ಸದಸ್ಯರಾದ ಕರಕೋಡಪ್ಪ ಸೇರಿದಂತೆ ಹಲವಾರು ಮುಖಂಡರು, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ನಂತರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಮಾರು 3000ಕ್ಕೂ ಅಧಿಕಾರ ಭಕ್ತಾದಿಗಳೆಲ್ಲರಿಗೂ ಅನ್ನಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ವೆಂಕಟಸಾಯಿ ಮುರಳಿ ಕೋಲಾಟ ಸಮಾಜದ ವತಿಯಿಂದ ಕೋಡೂರು ಪದ್ಮಾವತಿ ಇವರ ನೇತೃತ್ವದಲ್ಲಿ ಸುಮಾರು 30 ಜನ ಮಹಿಳೆಯರಿಂದ ಕೋಲಾಟ ಕಾರ್ಯಕ್ರಮ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 