ಬೆಂಗಳೂರು ಉಚ್ಛ ನ್ಯಾಯಾಲಯದ ಪ್ರಧಾನ ಪೀಠದಲ್ಲಿಯೇ ವ್ಯಾಜ್ಯಗಳ ನಿರ್ವಹಣೆ

Management of litigations in the Principal Bench of Bangalore High Court

ಬೆಂಗಳೂರು ಉಚ್ಛ ನ್ಯಾಯಾಲಯದ ಪ್ರಧಾನ ಪೀಠದಲ್ಲಿಯೇ  ವ್ಯಾಜ್ಯಗಳ ನಿರ್ವಹಣೆ 

     ಸುವರ್ಣಸೌಧ 13: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಸಾರ್ವಜನಿಕರ ವ್ಯಾಜ್ಯಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇಲ್ಲಿನ ಪ್ರಧಾನ ಪೀಠದಲ್ಲಿ ನಿರ್ವಹಿಸಲಾಗುತ್ತಿದೆ. ಪ್ರಸ್ತುತ ಈಗ ಇರುವ ವ್ಯವಸ್ಥೆಯಲ್ಲಿಯೇ ಈ ಭಾಗದ ವ್ಯಾಜ್ಯಗಳನ್ನು ಸಮರ್ಥವಾಗಿ ಸದರಿ ಪೀಠದಲ್ಲಿಯೇ ನಿರ್ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.  

       ವಿಧಾನ ಪರಿಷತ್ತನಲ್ಲಿ ಸದಸ್ಯರಾದ ಐವಾನ್ ಡಿ'ಸೋಜಾ ಅವರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಗೆ ಬರುವ ಉಚ್ಚ ನ್ಯಾಯಾಲಯ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಸರ್ಕಾರ ಉಚ್ಛ ನ್ಯಾಯಾಲಯದೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಬೇಕೆಂಬ ಬೇಡಿಕೆಯ ಬಗ್ಗೆ ನಿಯಮ 72ರಡಿ ಮಂಡಿಸಿರುವ ಗಮನ ಸೆಳೆಯುವ ಸೂಚನೆಗೆ ಮುಖ್ಯಮಂತ್ರಿಗಳು ಲಿಖಿತ ಉತ್ತರ ನೀಡಿದ್ದಾರೆ. 

       ಭಾರತ ಸಂವಿಧಾನದ ಅನುಚ್ಛೇದ 214ರಲ್ಲಿ ಪ್ರತಿ ರಾಜ್ಯಕ್ಕೆ ಒಂದು ಉನ್ನತ ನ್ಯಾಯಾಲಯ ಇರಬೇಕೆಂದು ಆಸ್ಪದ ಕಲ್ಪಿಸಲಾಗಿದೆ. ರಾಜ್ ಪುನರ್ ವಿಂಗಡಣಾ ಕಾಯ್ದೆ 1956 (ಖಿಜ ಖಣಚಿಣಜ ಖಜ-ಠರಚಿಟಿಚಿಣಠ ಂಛಿಣ, 1956)ರ ಕಲಂ 51(3)ರನ್ವಯ, ಆಯಾ ರಾಜ್ಯಗಳ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಗಳು ಮಾನ್ಯ ರಾಜ್ಯಪಾಲರ ಅನುಮೋದನೆಯೊಂದಿಗೆ ರಾಜ್ಯದ ಇತರೆ ಯಾವುದೇ ಸ್ಥಳದಲ್ಲಿ ಸಂಚಾರಿ ಪೀಠವನ್ನು ವ್ಯವಸ್ಥೆಗೊಳಿಸಲು (ಣಣಟಿ) ಅಧಿಕಾರ ಹೊಂದಿರುತ್ತಾರೆ. ಅದರಂತೆ, ರಾಜ್ಯ ಉಚ್ಚ ನ್ಯಾಯಾಲಯದ  19.10.2004ರ ಅಧಿಸೂಚನೆಯನ್ವಯ ಕರ್ನಾಟಕ ರಾಜ್ಯದಲ್ಲಿ ಧಾರವಾಡ ಹಾಗೂ ಕಲಬುರಗಿಯಲ್ಲಿ ಉಚ್ಚ ನ್ಯಾಯಾಲಯದ ಸಂಚಾರಿ ಪೀಠಗಳನ್ನು ಆರಂಭಿಸಲಾಗಿದೆ. 

ತರುವಾಯ, ಭಾರತದ ರಾಷ್ಟ್ರಪತಿಯವರ ದಿನಾಂಕ: 8.8.2013ರ ಆದೇಶದನ್ವಯ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ದಿನಾಂಕ:23.08.2013ರ ಅಧಿಸೂಚನೆಯನ್ವಯ ರಾಜ್ಯದ ಗುಲ್ಬರ್ಗಾ ಹಾಗೂ ಧಾರವಾಡದ ಸಂಚಾರಿ ಪೀಠಗಳನ್ನು ಖಾಯಂ ಪೀಠಗಳನ್ನಾಗಿ ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಲಿಖಿತ ಉತ್ತರ ನೀಡಿದ್ದಾರೆ.