ಮಹಿಳೆಗೆ ಬಲತ್ಕಾರ ಮಾಡಿದವನಿಗೆ 10 ವರ್ಷ ಸದಾ ಸಜೆ ಹಾಗೂ 15 ಸಾವಿರ ರೂ.ದಂಡ
Man who raped woman gets 10 years in prison and fined Rs. 15,000
ಕಾರವಾರ 12: ಮಾಡಿದ ಆರೋಪ ಹೊತ್ತಿದ್ದ ಜೊಯಿಡಾ ತಾಲೂಕಿನ ನಿವಾಸಿ ಉಲ್ಲಾಸ ಸಡಕೋ ಗಾವಡಾ ಎಂಬಾತನಿಗೆ ಹತ್ತು ವರ್ಷ ಕಾರಾಗೃಹವಾಸದ ಸದಾ ಸಜೆ ಹಾಗೂ 15 ಸಾವಿರ ರೂ.ದಂಡ ವಿಧಿಸಿ , ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಶುಕ್ರವಾರ ತೀಪು ಪ್ರಕಟಿಸಿದರು. ಜೊಯಿಡಾ ತಾಲ್ಲೂಕಿನ ಅಣಶಿ ಸನಿಹ ಕರ್ಲವಾಡದ ಹುಲಿ ಸಂರಕ್ಷತ ಪ್ರದೇಶದಲ್ಲಿ ಮಹಿಳೆ ದನ ಮೇಯಿಸುತ್ತಿದ್ದಾಗ ,ಉಲ್ಲಾಸ ಸಡಕೊ ಗಾವಡಾ ಎಂಬಾತ ದನ ಮೇಯಿಸುವ ಮಹಿಳೆಗೆ ಬಲತ್ಕಾರದಿಂದ ಹಠ ಸಂಭೋಗ ಮಾಡಿ, ಸಾಕ್ಷ್ಯ ನಾಶ ಮಾಡಿದ್ದ. 1 ಡಿಸೆಂಬರ್ 2018 ರಲ್ಲಿ ಈ ಘಟನೆ ನಡೆದಿತ್ತು. ಜೊಯಿಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .
ಕಾನ್ಸಟೆಬಲ್ ಗಳಾದ ಲಿಯಾಕತ ಅಲಿ, ಖಲೀಲ್ ಮುಲ್ಲಾ ಸಾಕ್ಷ್ಯ ಸಂಗ್ರಹಿಸಿದ್ದರು.ಸಿಪಿಐ ರಮೇಶ್ ಹೂಗಾರ ಕೋರ್ಟಗೆ ಚಾರ್ಜಶೀಟ್ ಸಲ್ಲಿಸಿದ್ದರು. ಸಾಕ್ಷ್ಯ ಅಧರಿಸಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಮಳಗೀಕರ್ ಸಮರ್ಥವಾಗಿ ವಾದ ಮಂಡಿಸಿದ್ದರು. ಶಿರಸಿಯ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ್ ಕಿಣಿ ಸಾಕ್ಷಾಧಾರ ಹಾಗೂ ವಾದ ಆಲಿಸಿ, ತೀಪು ಪ್ರಕಟಿಸಿದರು. ಅಪರಾಧಿ ಉಲ್ಲಾಸ ಸಡಕೊ ಗಾವಡಾಗೆ ಹತ್ತು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿದರು. ಅಲ್ಲದೆ ಸಂತ್ರಸ್ತೆಗೆ 10 ಸಾವಿರ ರೂ. ಪರಿಹಾರ ನೀಡುವಂತೆ ತೀಪು ಪ್ರಕಟಿಸಿದರು. ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತೆಗೆ ಅಗತ್ಯ ನೆರವು ಪಡೆಯಬಹುದು ಎಂದು ಆದೇಶಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 