ವ್ಯಕ್ತಿಯನ್ನು ಅಡ್ಡಗಟ್ಟಿ ಚಿನ್ನಾಭರಣ ದರೋಡೆ

ವ್ಯಕ್ತಿಯನ್ನು ಅಡ್ಡಗಟ್ಟಿ ಚಿನ್ನಾಭರಣ ದರೋಡೆ Man robbed of gold jewellery while being held up

ವ್ಯಕ್ತಿಯನ್ನು ಅಡ್ಡಗಟ್ಟಿ ಚಿನ್ನಾಭರಣ ದರೋಡೆ 

ಯರಗಟ್ಟಿ 02: ಸಮೀಪದ ವನ್ನೂರ-ಕೇಶಪ್ಪನಟ್ಟಿ ನಿರ್ಜನವಾದ ಪ್ರದೇಶದಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ದೋಚಿದ ಪ್ರಕರಣಕ್ಕೆ ಸಂಬಂಧಿಸಿ, ಐವರು ಡಕಾಯಿತರ ತಂಡವನ್ನು ನೇಸರಗಿ ಪೊಲೀಸರು ಬಂಧಿಸಿದ್ದಾರೆ. 

ಆರೋಪಿತರಾದ. ಈರ​‍್ಪ ಮಹಾದೇವ ಪವಾಡಿ 26 ಉದ್ಯೋಗ : ಡ್ರೈವರ ಕೆಲಸ ಸಾ: ಹಣಬರಟ್ಟಿ ಹಾಲಿ ಚನ್ನಮ್ಮನಗರ ವಾಲ್ಮೀಕಿಗಲ್ಲಿ ಬೆಳಗಾವಿ., ಪ್ರಶಾಂತಅಪರ್ಸಾ ತಂದೆ ರಾಮಚಂದ್ರ ನಾರಿ 26 ವರ್ಷ ಉದ್ಯೋಗ : ಶೇತಿ ಕೆಲಸ ಸಾ: ಗುಜನಾಳ ತಾ: ಗೋಕಾಕ, ನಿಂಗಪ್ಪಅಅಜಯ ತಂದೆ ಅಡಿವೆಪ್ಪ ದೊಡಮನಿ 20 ವರ್ಷ ಉದ್ಯೋಗ : ಶೇತಿ ಕೆಲಸ. ಸಾ: ಗುಜನಾಳ ತಾ: ಗೋಕಾಕ, ರಾಮಪ್ಪಅರಮೇಶ ತಂದೆ ಬಾಳಪ್ಪ ಹಳಬನ್ನವರ 26 ವರ್ಷ : ಶೇತಿ ಕೆಲಸ ಸಾ: ಸುಣಕುಂಪಿ ಹಾಲಿ ರಾಜಕಟ್ಟಿ ತಾ: ಹುಕ್ಕೇರಿ, ಸದಾನಂದಅಸದಾಶಿವ ಬಾಳಪ್ಪ ಉದ್ದಾನಾಯ್ಕ 24 ವರ್ಷ ಜಾತಿ  ಶೇಕ್ಕಿ ಕೆಲಸ ಸಾ: ಸುಣಕುಂಪಿ ತಾ: ಬೈಲಹೊಂಗಲ ಅವರಿಂದ ರೂ. 15000 ಹಣ ರೂ. 80 ಸಾವಿರ ಮೌಲ್ಯ್‌ ಎರಡು ದ್ವಿಚಕ್ರ ವಾಹನ, ಐದು ನಾಲ್ಕು ಮೊಬೈಲ್ ಸೇರಿದಂತೆ ಚಾಕು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಈ ವೇಳೆ ಪಿಐ ಗಜಾನನ ನಾಯಕ, ಪಿಎಸ್‌ಐ ಈರಣ್ಣಾ ರಿತ್ತಿ, ಆರ್‌.ಬಿ. ಗೌಡರ, ಪೊಲೀಸ್ ಸಿಬ್ಬಂದಿಯಾದ ಎ. ಎ. ಗಡಿನಾಯಕ, ಎಸ್‌. ಆರ್‌. ದೇಸಾಯಿ, ಎಚ್‌. ಆರ್‌. ನ್ಯಾಮಗೌಡರ, ಜಿ. ಎಚ್‌. ಗುದಗಾಪೂರ, ಎನ್‌. ವ್ಹಿ. ಪರಡ್ಡಿ, ಎ. ಕೆ. ಡೊಂಬರ, ಎನ್‌. ಎಲ್‌. ಗುಡೆನ್ನವರ, ಸಂತೋಷ ದೇಯನ್ನವರ ಇದ್ದರು. ಪ್ರಕರಣ ಭೇದಿಸಿದ ಸಿಬ್ಬಂದಿಗಳಿಗೆ ಬೆಳಗಾವಿ ಎಸ್ ಪಿ ಭೀಮಾಶಂಕರ ಗುಳೇದ ಕಾರ್ಯ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.