ಮನುಷ್ಯ ಹುಟ್ಟಿನಿಂದ ಕೊನೆಯವರೆಗೆ ವಿಶ್ವ ಮಾನವನಾಗಿ ಬದುಕಿ ಬಾಳಬೇಕು: ನ್ಯಾ. ರೇಣುಕಾದೇವಿ

ಹಾವೇರಿ10: ಮನುಷ್ಯ ಹುಟ್ಟಿನಿಂದ ಕೊನೆಯವರೆಗೂ ವಿಶ್ವ ಮಾನವನಾಗಿ ಬದುಕಿ ಬಾಳಬೇಕು. ಅಹಿಂಸೆ, ಸಹಬಾಳ್ವೆ ಹಾಗೂ ಸೌಹಾರ್ದಯುತ ನಡೆ ಎಲ್ಲ ಧರ್ಮಗಳ ನೀತಿ ಒಂದೆಯಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಎಸ್.ಎಚ್.ರೇಣುಕಾದೇವಿ ಅವರು ಹೇಳಿದರು.

ಸೋಮವಾರ ನಗರದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಕರ್ಾರೇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಜರುಗಿತ್ತು.

    ಪ್ರಯುಕ್ತ ಪೋಕ್ಸೋ ಕಾಯ್ದೆ 2012, ಬಾಲ ನ್ಯಾಯ ಕಾಯ್ದೆ, ಲೈಂಗಿಕ ಹಲ್ಲೆಯಿಂದ ಚೇತರಿಸಿಕೊಂಡ ಹಾಗೂ ಆಸಿಡ್ ದಾಳಿಗೊಳಗಾದ ಸಂತ್ರಸ್ತರಿಗೆ ಪರಿಹಾರ ಯೋಜನೆ 2016 ಮತ್ತು 2018 ಹಾಗೂ ಪೊಲೀಸ್ ದೂರು ಪ್ರಾಧಿಕಾರ ಕುರಿತು ಜಿಲ್ಲಾ ಮಟ್ಟದ ಒಂದು ದಿನದ ಕಾನೂನು ಅರಿವು ನೆರವು ಕಾಯರ್ಾಗಾರದ ಉದ್ಘಾಟನೆ ನೆರವೇರಿಸಿದರು.

ನಂತರ ಅಪರಾಧ ಕಡಿಮೆಯಾಗಲು ಮನುಷ್ಯ ತನ್ನನ್ನು ತಾನು ಸುಧಾರಿಸಿಕೊಳ್ಳಬೇಕು, ಸುಧಾರಣೆ ನಿಜವಾದ ಬದುಕು. ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಜೊತೆಗೆ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು.  ಸನ್ಮಾರ್ಗದಿಂದ ನ್ಯಾಯುತ ಜೀವನ ನಡೆಸುವ ಮೂಲಕ  ಒಂದು ದಿನ ಎಲ್ಲ ಕಡತಗಳನ್ನು ಸುಟ್ಟುಹಾಕಿ ನ್ಯಾಯಾಲಯಗಳ ಬಾಗಿಲು ಹಾಕಿದಾಗ ವಿಶ್ವ ಮಾನವ ಹಕ್ಕುಗಳ ದಿನಾಚರಣೆಗೆ ಅರ್ಥಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 22 ಪೊಲೀಸ್ ಠಾಣೆಗಳಿವೆ, ಇದು ಹೆಮ್ಮೆಪಡುವ ವಿಷಯವಲ್ಲ. ಅಪರಾಧ ಹೆಚ್ಚಾಗಿದೆ ಎಂದು ಅರ್ಥ. ನಾವೆಲ್ಲರೂ ಅಪರಾಧ ತಡೆ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಮುಂದಿನ ದಿನಗಳಲ್ಲಿ  ಅಪರಾಧ ತಡೆ ಹಾಗೂ ರಸ್ತೆ ಸಂಚಾರದ ಕುರಿತು ವಿದ್ಯಾಥರ್ಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಕೆ.ಲೀಲಾವತಿ ಅವರು ಮಾತನಾಡಿ, ಕಾನೂನು ಅಂದರೆ ನಿಯಮ, ಮನುಷ್ಯನ ಸುಗಮ ಜೀವನಕ್ಕೆ ನಿಯಮಗಳು ಅನಿವಾರ್ಯವಾಗಿವೆ. ಆದರೆ ಇಂದು ವಿಭಕ್ತ ಕುಟುಂಬ ಪದ್ಧತಿಯಿಂದ ಮಕ್ಕಳಿಗೆ ಕೇವಲ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡುವಂತೆ ಮನವೀಯ ಮೌಲ್ಯಗಳನ್ನು ಕಲಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ ವೈ.ಎಲ್.ಲಾಡಖಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಹಾಗೂ ನಸರ್್ಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಇಂದು ಪೊಲೀಸ್ರಿಗೆ ನಸರ್್ಗಳಿಗೆ ಇಂದು ಕಾಯರ್ಾಗಾರ ಹಮ್ಮಿಕೊಳ್ಳಲಾಗಿದೆ.  ಪೊಲೀಸರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ಇಲ್ಲಿ ಎಲ್ಲರೂ ಸಮಾನ ಹಕ್ಕುಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿ.ಎಚ್.ಓ. ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಡಿಡಿಪಿಯು ಎಸ್.ಸಿ.ಪೀರಜಾದೆ, ಜಿಲ್ಲಾ ಕಾರಾಗೃಹದ ಅಧೀಕ್ಷಕ ಟಿ.ಬಿ.ಭಜಂತ್ರಿ, ತಹಶೀಲ್ದಾರ ಶಿವಕುಮಾರ ಹಾಗೂ ತಾಲೂಕು ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿ ಅನ್ನಪೂರ್ಣ ಇತರರು ಉಪಸ್ಥಿತರಿದ್ದರು.