ನಿರ್ಜನ ಮನೆಯಲ್ಲಿ ವ್ಯಕ್ತಿ ಕೊಲೆ; ತನಿಖೆ ಆರಂಭ

ನಿರ್ಜನ ಮನೆಯಲ್ಲಿ ವ್ಯಕ್ತಿ ಕೊಲೆ; ತನಿಖೆ ಆರಂಭ Man murdered in deserted house; investigation begins

ಲೋಕದರ್ಶನ ವರದಿ

 ಜಮಖಂಡಿ 2: ತಾಲೂಕಿನ ಚಿಕ್ಕಪಡಸಲಗಿ ಆರಿ​‍್ಸ. (ಪುನರ್ವಸತಿ) ಕೇಂದ್ರದ ನಿರ್ಜನ ಪ್ರದೇಶದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.  ಮೃತರನ್ನು ಮುಧೋಳ ತಾಲೂಕಿನ ಮುಗಳಕೊಡ ಗ್ರಾಮದ ನಿವಾಸಿ ಮಲ್ಲಪ್ಪ ಸಿದ್ದಪ್ಪ ಕಬ್ಬೂರ (27) ಎಂದು ಗುರುತಿಸಲಾಗಿದೆ.  ಸಾವಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಪಡಸಲಗಿ ಆರಿ​‍್ಸ. ಪುನರ್ವಸತಿ ಕೇಂದ್ರದ ನಿರ್ಜನ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮಲ್ಲಪ್ಪ ಅವರು ಕಳೆದ ಕೆಲವು ವರ್ಷಗಳಿಂದ ಇದೇ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.  

ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಪ್ಪ ಮಡ್ಡಿ, ಸಾವಳಗಿ ಪೊಲೀಸ್ ಠಾಣೆಯ ಪಿಎಸ್‌ಐ ಅಪ್ಪಣ್ಣ ಎಗಳಿ ಹಾಗೂ ಬಾಗಲಕೋಟೆ ಜಿಲ್ಲಾ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರೀಶೀಲನೆ ನಡೆಸಿತು.  ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಹಾಗೂ ಕೊಲೆಯ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.