ಹನುಮನಹಟ್ಟಿ ಗ್ರಾಮದ ವ್ಯಕ್ತಿ ಕಾಣೆ: ಪ್ರಕರಣ ದಾಖಲು
Man missing from Hanumanahatti village: Case registered
ಹನುಮನಹಟ್ಟಿ ಗ್ರಾಮದ ವ್ಯಕ್ತಿ ಕಾಣೆ: ಪ್ರಕರಣ ದಾಖಲು
ಕೊಪ್ಪಳ 07: ಕೊಪ್ಪಳ ತಾಲೂಕಿನ ಹನುಮನಹಟ್ಟಿ ಗ್ರಾಮದ ನಿವಾಸಿ 35 ವರ್ಷದ ಮಂಜಪ್ಪ ತಂದೆ ನಾಗಪ್ಪ ಹೊಸಮನಿ ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆಯ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದದಾರೆ.
ವ್ಯಕ್ತಿಯು 2024ರ ಜನವರಿ 30 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ದುಡಿಯುವುದಕ್ಕಾಗಿ ಬೇರೆ ಬೇರೆ ಜಿಲ್ಲೆಗೆ ಹೋಗಿ ಬರುವುದಾಗಿ ಹೇಳಿ ಮನೆಗೆ ವಾಪಸ ಬಾರದೆ ಕಾಣೆಯಾಗಿದ್ದಾನೆ ಎಂದು ವ್ಯಕ್ತಿಯ ಹೆಂಡತಿ ದೂರು ನೀಡಿದ್ದು, ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ: 10/2025 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿ ಕೋಲು ಮುಖ, ಉದ್ದವಾದ ಮೂಗು, ತಲೆಯಲ್ಲಿ ಉದ್ದನೇಯ ಕಪ್ಪು ಕೂದಲುಗಳು, ಹೇರು ಹಣೆ, ಕುರುಚಲು ದಾಡಿ, ಮೀಸೆ ಇದ್ದು. ನನ್ನ ಗಂಡನ ಎಡಗಡೆ ಸೊಂಟದ ಹತ್ತಿರ ಹಳೆಯ ಗಾಯದ ಕಲೆ ಇರುತ್ತದೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಶರ್ಟ, ನೀಲಿ ಬಣ್ಣದ ಲುಂಗಿ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಈ ವ್ಯಕ್ತಿಯು ಯಾರಿಗಾದರೂ ಕಂಡಲ್ಲಿ ಅಥವಾ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ.ನಂ: 08539-100 ಮತ್ತು 230222, ಕೊಪ್ಪಳ ಗ್ರಾಮಿಣ ಪೊಲೀಸ ಠಾಣೆ ಪಿ.ಎಸ್.ಐ ಮೊ.ಸಂ: 08539-221333,9480803746 ಮತ್ತು ಸಿ.ಪಿ.ಐ ದೂರವಾಣಿ ನಂ: 9480803731 ಹಾಗೂ ಕೊಪ್ಪಳ ಡಿ.ವೈ.ಎಸ್.ಪಿ ಪೋ.ನಂ: 08539-230342,9480803720 ಮತ್ತು ಕೊಪ್ಪಳ ಪೊಲೀಸ್ ಠಾಣೆಯ ಎಸ್.ಪಿ ಮೊ.ಸಂ: 08539-230111ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ 