ಸರಕಾರಿ ನೌಕರರ ಮಲ್ಟಿ ಪರಪಸ್ ಕೋ.ಆಪ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಆಯ್ಕೆ
ಅಥಣಿ 06: ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಲ್ಟಿ ಪರಪಸ್ ಕೋ.ಆಪ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಲೋಕೋಪಯೋಗಿ ಇಲಾಖೆಯ ಮಲ್ಲಿಕಾರ್ಜುನ ಮಗದುಮ್ ಮುಂದಿನ 4 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೊಸೈಟಿಯ ಅಧ್ಯಕ್ಷರಾಗಿ ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ ಸಣ್ಣ ನೀರಾವರಿ ಇಲಾಖೆಯ ಎಸ್.ಎಸ್ ಮಾಕಾಣಿ ನಿವೃತ್ತರಾದ ನಂತರ ಅಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ನೂತನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆ ಆಗುವವರೆಗೆ ಮಲ್ಲಿಕಾರ್ಜುನ ಮಗದುಮ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಜನೇವರಿ 6 ರಂದು ಅಧ್ಯಕ್ಷ ಸ್ಥಾನದ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ ಮಗದುಮ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಸಹಕಾರಿ ಸಂಘದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಮಗದುಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಘವೇಂದ್ರ ನೂಲಿ ಘೋಷಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಜಯಾನಂದ ಹಿರೇಮಠ, ನೌಕರ ಸಂಘದ ಮಾಜಿ ಅಧ್ಯಕ್ಷ ರಾಮಣ್ಣಾ ಧರಿಗೌಡ, ಸೊಸೈಟಿಯ ನಿರ್ದೇಶಕರಾದ ಪ್ರವೀಣ ಹುಣಸಿಕಟ್ಟಿ, ರಮೇಶ ಚೌಗಲಾ, ಎಸ್.ಬಿ.ಪಾಟೀಲ, ರವಿ ಅಂಗಡಿ, ಚಂದು ಕಾಂಬಳೆ, ಸುಮೀತ ಮರನೂರ, ಜಿ.ಎಮ್.ಸ್ವಾಮಿ, ಜಾವೇದ ಪಟೇಲ್, ಈರ್ಪ ಕಡಗಂಚಿ, ಅಪ್ಪಾಸಾಬ ಹಿಪ್ಪರಗಿ, ವಿಜಯ ಢವಳೆ, ಸುಮಿತ್ರಾ ಮಗೆನ್ನವರ, ರೇಣುಕಾ ಘಾಣಗಿ, ವ್ಯವಸ್ಥಾಪಕ ಚಿದಾನಂದ ಬಡವಗೋಳ, ನಿವೃತ್ತ ನೌಕರ ಬಿ.ಎಸ್. ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.