ಮಕ್ಕಳಿಗೆ ತಪ್ಪದೇ ಪೋಲಿಯೋ ಹಾಕಿಸಿ
Make sure to vaccinate children with polio
ಹೂವಿನಹಡಗಲಿ 21: ಜನಿಸಿದ ಮಗುವಿನಿಂದ ಐದು ವರ್ಷಗಳವಯೋಮಾನದ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೊಲಿಯೋ ಹನಿ ಹಾಕಿಸಿ ಜೀವನಪರ್ಯಂತ ಮಾರಕ ರೋಗಗಳಿಂದ ರಕ್ಷಿಸಬೇಕೆಂದು ಗ್ರಾ.ಪಂ.ಸದಸ್ಯ ರುದ್ರಗೌಡ ಹೇಳಿದರು. ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಭಾನುವಾರ ನಡೆದ ಪೊಲಿಯೋ ಹನಿ ಅಭಿಯಾನದಲ್ಲಿ ಮಾತನಾಡಿ ತಾಯಿ ತನ್ನ ಮಗುವಿಗೆ ಪಲ್ಸ್ ಪೊಲಿಯೋ ಹನಿ ಹಾಕಿಸುವಲ್ಲಿ ವಿಫಲವಾದರೆ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜೀವಿತಾವಧಿಯುದ್ದಕ್ಕೂ ಪೊಲಿಯೋ ರೋಗದ ವಿರುದ್ಧ ರಕ್ಷಣೆ ಪಡೆಯಲು ಪಲ್ಸ್ ಪೊಲಿಯೋ ಹನಿ ಹಾಕಿಸುವುದು ಕಡ್ಡಾಯ ಎಂದರು.ಇದೇ ವೇಳೆ ಹೊಳಗುಂದಿ ಸೊಸೈಟಿ ಅದ್ಯಕ್ಷ ಕಾತ್ರಿಕಿ ಕರಿಬಸವರಾಜ, ಅಂಗನವಾಡಿ ಕಾರ್ಯಕರ್ತೆ ಅಕ್ಕಮ್ಮ,ಆಶಾ ಕಾರ್ಯಕರ್ತೆ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 