ಜಿಪಂ, ತಾಪಂ ಚುನಾವಣೆಯಲ್ಲಿ ಸ್ಥಳೀಯರನ್ನು ಅಭ್ಯರ್ಥಿಯನ್ನಾಗಿಸಿ
ಸಂಬರಗಿ 08: ಮುಂಬರುವ ಜಿಲ್ಲಾ ಪಂಚಾಯತ ಹಾಗೂ ತಾಲೂಕಾ ಪಂಚಾಯತ ಚುನಾವಣೆಯಲ್ಲಿ ಅನಂತಪೂರ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಬೇರೆ ಗ್ರಾಮದ ಅಭ್ಯರ್ಥಿಯನ್ನು ಆಯ್ಕೆ ಮಾಡಬಾರದೆಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಬಸವೇಶ್ವರ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಓಂಪ್ರಕಾಶ ಡೊಳ್ಳಿ ಅಗ್ರಹಿಸಿದ್ದಾರೆ.
ಖಿಳೇಗಾಂವ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ, ಪಕ್ಷದಲ್ಲಿ ನಿಷ್ಟಾವಂತನಾಗಿ ಕೆಲಸ ಮಾಡುವವರಿಗೆ ಅಭ್ಯರ್ಥಿ ಸ್ಥಾನ ನೀಡಬೇಕು. ಈಗಾಗಲೇ ಪಕ್ಷದ ಯಾವುದೇ ಹುದ್ದೆ ಇದ್ದರೆ, ಅಂತಹವರಿಗೆ ನೀಡಬಾರದು. ಈ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಅನಂತಪೂರ, ಆಜೂರ, ಖಿಳೇಗಾಂವ, ಶಿರೂರ, ಸಂಬರಗಿ, ಅರಳೀಹಟ್ಟಿ, ಬೊಮ್ಮನಾಳ ಈ ಗ್ರಾಮಗಳು ಬರುತ್ತವೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಗಡಿಭಾಗದಿಂದ ಭಾರಿ ಮತ ನೀಡಿದ್ದೇವೆ ಎಂದು ಹೇಳಿದರು. ಈ ಕುರಿತು ಪಕ್ಷದ ಹಿರಿಯ ಮುಖಂಡರು ಶಾಸಕ ರಾಜು ಕಾಗೆ, ಶಾಸಕ ಲಕ್ಷ್ಮಣ ಸವದಿ ಇವರ ಗಮನಕ್ಕೆ ತಂದಿದ್ದೆವೆ. ಸ್ಥಳಿಯ ಕಾಂಗ್ರೆಸ್ ಯಾವುದೇ ಕಾರ್ಯಕರ್ತರು ಅಭ್ಯರ್ಥಿಯನ್ನು ಚುನಾವಣೆಗೆ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು. ಶಿವಾನಂದ ಪಾಟೀಲ, ಶಿವಾನಂದ ಖೋತ, ರಾಜು ಮದಭಾವಿ, ಬಾಹುಸಾಹೇಬ ಪತ್ತಾರ, ರಾಮ ದೇಶಿಂಗಿ, ರಾಜು ಸಾಲಿಮಠ, ಸಂಗಪ್ಪ ಜಾಬಗೌಡ ಉಪಸ್ಥಿತರಿದ್ದರು.