ಯರಗಟ್ಟಿ ತಾಲೂಕು ಕೇಂದ್ರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ: ಶಾಸಕ ವೈದ್ಯ
Make Yaragati taluk center the district center: MLA Vaidya
ಯರಗಟ್ಟಿ, 17 : ಸವದತ್ತಿ ಯಲ್ಲಮ್ಮನ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಶಾಸಕ ವಿಶ್ವಾಸ ವೈದ್ಯ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗ ಬೆಳಗಾವಿ ಚಳಿಗಾಲ ಅಧಿವೇಶನ ಮುಗಿದ ಮೇಲೆ ಭೇಟಿ ಮಾಡಿ ಬೆಳಗಾವಿ ಜಿಲ್ಲೆ ವಿಭಜನೆಗೆ ಒತ್ತಾಯಿಸಿ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಬೆಳಗಾವಿಯನ್ನು ಸಣ್ಣ ಜಿಲ್ಲೆಯಾಗಿ ಉಳಿಸಿಕೊಂಡು ಚಿಕ್ಕೋಡಿ ಮತ್ತು ಗೋಕಾಕ್ ಎಂಬ ಹಾಗೂ ಯರಗಟ್ಟಿಯನ್ನು ಹೊಸ ಜಿಲ್ಲೆಗಳನ್ನು ರಚಿಸುವುದು ಬೇಡಿಕೆ ಇಡಲಾಗುವುದು. 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಬೆಂಗಳೂರಿನ ಹೊರಗಿನ ಅತಿದೊಡ್ಡ ರಾಜಕೀಯ ಜಿಲ್ಲೆಯಾಗಿದೆ.
ಭೌಗೋಳಿಕವಾಗಿ ಯರಗಟ್ಟಿ ಪಟ್ಟಣವು ಗೋಕಾಕ, ಸವದತ್ತಿ, ರಾಮದುರ್ಗ, ಬೈಲಹೊಂಗಲ ತಾಲೂಕು ಕೇಂದ್ರಗಳಿಗೆ ಕೇವಲ 30 ಕಿಲೋ ಮೀಟರ್ ಅಂತರದಲ್ಲಿ ಇರುವ ಕಾರಣ ಯರಗಟ್ಟಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೆ ಈ ಎಲ್ಲಾ ತಾಲೂಕಿನ ಜನರಿಗೆ ಅನುಕೂಲವಾಗುವುದು ಎಂದು ಸತೀಶ ಜಾರಕಿಹೊಳಿ ಆಪ್ತ ಶಾಸಕ ವಿಶ್ವಾಸ ವೈದ್ಯ ಹೇಳಿದರು.ಯರಗಟ್ಟಿ ಜಿಲ್ಲಾ ಕೇಂದ್ರ ಮಾಡಿದಲ್ಲಿ ಅದಕ್ಕೆ ಬೇಕಾಗುವ ಜಿಲ್ಲಾ ಕಛೇರಿ ಹಾಗೂ ಭವನಗಳಿಗೆ ಪಟ್ಟಣದ ಸುತ್ತಮುತ್ತಲು 500-550 ಎಕರೆ ಸರಕಾರಿ ಪಢಭೂಮಿ ಲಭ್ಯವಿರುತ್ತದೆ. ಇದರಿಂದಾಗಿ ಸರಕಾರಕ್ಕೆ ಯಾವುದೇ ರೀತಿಯ ಹಣಕಾಸಿನ ಹೊರೆ ಆಗುವದಿಲ್ಲ.
ಹಾಗೂ ಯರಗಟ್ಟಿ ತಾಲೂಕ ಯರಗಟ್ಟಿ ಪಟ್ಟಣದಲ್ಲಿ ರಾಜ್ಯ ವಿಖ್ಯಾತ ದನಗಳ ಪೇಟೆ ಮತ್ತು ಕಾಯಿಪಲ್ಯಗಳ ಪೇಟೆಗೆ ಯರಗಟ್ಟಿ ಪಟ್ಟಣವು ಬಹು ಪ್ರಸಿದ್ದಿ ಹೊಂದಿರುತ್ತದೆ. ಇದರಿಂದಾಗಿ ಯರಗಟ್ಟಿ ತಾಲೂಕ ಸುತ್ತಮುತ್ತಲಿನ 5 ತಾಲೂಕುಗಳ ಜನತೆಗೆ ಜಿಲ್ಲಾ ಕೇಂದ್ರಕ್ಕೆ ಬಂದು ಹೋಗಲು ಬಹಳ ಅನುಕೂಲ ಇರುವದರಿಂದ ಯರಗಟ್ಟಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು.ಆದ್ದರಿಂದ ಮಾನ್ಯ ಘಣ ಸರಕಾರವು ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಹೊಸ ಜಿಲ್ಲೆಗಳನ್ನು ಮಾಡುವುದಾದಲ್ಲಿ ಯರಗಟ್ಟಿ ತಾಲೂಕಿಗೆ ಮೊದಲ ಆದ್ಯತೆ ನೀಡಿ ಯರಗಟ್ಟಿಯನ್ನು ಹೊಸ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೆಕೆಂದು ಹೋರಾಟ ಸಮೀತಿ ಅಧ್ಯಕ್ಷ ವ್ಹಿ. ಜಿ. ಬಿರಾದಾರ ಪಾಟೀಲ ಆಗ್ರಹಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 