ಡಾ.ಅಂಬೇಡ್ಕರರ ಜಯಂತಿ ಯಶಸ್ವಿಗೊಳಿಸಿ: ಮಯೂರ
ಸಿಂದಗಿ 08: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ್‌ಜಿ ಬಣ) ತಾಲೂಕ ಶಾಖೆ ಸಿಂದಗಿಯು ಮುಂಬರುವ ಏಪ್ರಿಲ್ 14ನೇ ರಂದು ವಿಶ್ವ ರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 134ನೇ ಜನ್ಮ ದಿನೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೈ ಸಿ ಮಯೂರ ಹೇಳಿದರು.
ಶುಕ್ರವಾರ ಪಟ್ಟಣದ ದಲಿತ ಸಂಘರ್ಷ ಸಮಿತಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಪ್ರತಿ ವರ್ಷ ಒಂದಿಲ್ಲ ಒಂದು ಚುನಾವಣೆಗಳು ಬಂದು ಜಯಂತ್ಯೋತ್ಸವ ಸರಳವಾಗಿ ಆಚರಿಸಿದ್ದು ಈ ವರ್ಷ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಮುಖ್ಯಮಂತ್ರಿಗಳಲ್ಲಿ ವಿನಂತಿಸಲಾಗಿದ್ದು. ಸತತ 5 ದಿನಗಳ ಕಾಲ ಅಂದರೆ ಏಪ್ರಿಲ್ 10 ರಿಂದ 14ನೇ ವರೆಗೆ ಪ್ರತಿದಿನ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಡಾ.ಬಾಬಾಸಾಹೇಬರ ಬಗ್ಗೆ ಮತ್ತು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಎಪ್ರಿಲ್ 14ರಂದು ಡಾ.ಬಾಬಾಸಾಹೇಬರ ಪ್ರತಿಮೆಯ ಭವ್ಯವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ರಾಜ್ಯದ ಪ್ರತಿಷ್ಠಿತ ಕಲಾ ತಂಡಗಳೊಂದಿಗೆ ಭವ್ಯವಾದ ಭೀಮೋತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾಯಂಕಾಲ 5:00 ಗಂಟೆಗೆ ಬಹಿರಂಗ ಸಭೆ ನಡೆಸಲಾಗುವುದು. ಮುಂದೆ ಸಾಯಂಕಾಲ 6 ಗಂಟೆಗೆ ಭಾರತ ಭಾಗ್ಯವಿದಾತ ನಾಟಕ ಪ್ರದರ್ಶನ ನಡೆಸಲಾಗುವುದು ಎಂದರು.
ಈ ಒಂದು ಮಹತ್ವದ ಕಾರ್ಯಕ್ರಮಕ್ಕೆ ಸಿಂದಗಿಯ ಶಾಸಕ ಅಶೋಕ ಎಮ್ ಮನಗೂಳಿ ಹಾಗೂ ಕ.ರಾ.ದ.ಸಂ.ಸ. ಯ ರಾಜ್ಯ ಸಂಚಾಲಕ ಡಾ.ಡಿ.ಜಿ ಸಾಗರ್ ಮತ್ತು ಜಿಲ್ಲೆಯ ತಾಲೂಕಿನ ವಿವಿಧ ರಾಜಕೀಯ ಪಕ್ಷದ ಗಣ್ಯರು ಮತ್ತು ಹಿರಿಯ ಅಧಿಕಾರಿಗಳು, ಸಾಮಾಜಿಕ ಹೋರಾಟಗಾರರು, ಅಹಿಂದ ಹೋರಾಟಗಾರರು, ಪ್ರಗತಿಪರ ವಿಚಾರವಾದಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಸುಮಾರು ಹತ್ತು ಸಾವಿರ ಜನ ಸಂಖ್ಯೆ ಸೇರುವ ನೀರೀಕ್ಷೆ ಇದೆ, ಡಾ.ಅಂಬೇಡ್ಕರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.