ಮಹೇಶ ಕುಮಟಳ್ಳಿ ಹತಾಶೆರಾಗಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಶಾಸಕ ರಾಜು ಕಾಗೆ
Mahesh Kumatalli is disappointed. There is no substance in his allegations: MLA Raju Kage
ಕಾಗವಾಡ: ಕೃಷ್ಣಾ ಸಕ್ಕರೆ ಕಾರ್ಖಾನೆಯ ಮತದಾನದ ವೇಳೆ ಯಾವುದೇ ರೀತಿ ಅಕ್ರಮ ನಡೆದಿಲ್ಲ. ಮಹೇಶ ಕುಮಟಳ್ಳಿ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಅವರು ಹತಾಶೆ ಭಾವನೆಯಿಂದ ಹೇಳಿಕೆ ನೀಡಿದ್ದಾರೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ. ಅವರು ಸೋಮವಾರ ದಿ. 27 ರಂದು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ, ಮಾತನಾಡುತ್ತಿದ್ದರು. ಕೃಷ್ಣಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ನಮ್ಮ ಬಣದ 13 ಸದಸ್ಯರು ಆಯ್ಕೆಗೊಂಡಿದ್ದು, ನಮ್ಮ ಮೇಲೆ ವಿಶ್ವಾಸವಿಟ್ಟು ಮತ್ತೋಮ್ಮೆ ನಮಗೆ ಅಧಿಕಾರ ನಡಸಲು ಅನುಕೂಲ ಮಾಡಿಕೊಟ್ಟ ಎಲ್ಲ ರೈತ ಮತದಾರರಿಗೆ ಧನ್ಯವಾದ ತಿಳಿಸಿಸುತ್ತೇನೆ ಎಂದರು. ಶಾಸಕ ಲಕ್ಷ್ಮಣ ಸವದಿ ಮತ್ತು ನಾನು ಸೇರಿ ಸಂಘಟಿತ ಪ್ರಯತ್ನದಿಂದಾಗಿ ಮತ್ತು ಕಳೆದ 20 ವರ್ಷಗಳಿಂದ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ಪಾರದರ್ಶಕ ಆಡಳಿತ ನೀಡಿರುವ ಪರಿಣಾಮ ರೈತ ಸದಸ್ಯರು ನಮ್ಮನ್ನು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ.
ರೈತ ಸದಸ್ಯರ ವಿಶ್ವಾಸಕ್ಕೆ ದಕ್ಕೆ ಬಾರದಂತೆ ಮುಂದಿನ ದಿನಗಳಲ್ಲಿ ಕಾರ್ಖಾನೆಯ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿದರು. ಕಾಗವಾಡ ಪಟ್ಟಣದಲ್ಲಿ ಒಟ್ಟು ಮೂರು ಸಮುದಾಯ ಭವನಗಳ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿಗೆ ಇಂದು ಚಾಲನೆ ನೀಡಲಾಗಿದ್ದು, ಪಟ್ಟಣದ ಮತ್ತು ಕ್ಷೇತ್ರದ ಅಭಿವೃದ್ಧಿಗೆ ತಾವು ಸದಾ ಕ್ರಿಯಾಶೀಲರಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಪಡಿಸಲಾಗುವುದು ಎಂದರು. ಈ ವೇಳೆ ಮುಖಂಡರಾದ ರಮೇಶ ಚೌಗಲಾ, ಕಾಕಾ ಪಾಟೀಲ, ಪದ್ಮಾಕರ ಕರವ, ವಿನಾಯಕ ಚೌಗಲಾ, ಜ್ಯೋತಿಕುಮಾರ ಪಾಟೀಲ, ಶಾಂತಿನಾಥ ಕರವ, ಗುತ್ತಿಗೆದಾರರಾದ ಸೋಮರಾಜ ಪಾಟೀಲ, ಆದಿತ್ಯ ಭಿಂಗೆ, ವೃಷಭ ಪಾಟೀಲ, ಅಮರೇಶ ಕೋಳಿ, ಅವಿನಾಶ ದೇವಣೆ, ಮಹಾಂತೇಶ ಬಡಿಗೇರ, ಸುಧೀರ ಕರವ, ಉದಯ ಖೋಡೆ, ಅಶೋಕ ಪೂಜೇರಿ, ಮಹೇಶ ಪೂಜೇರಿ, ಜನಾರ್ಧನ ಧೊಂಡಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 