ಮಹಾಯೋಗಿ ವೇಮನ ಜಯಂತಿ ಆಚರಣೆ
Mahayogi Veman Jayanti Celebration
ಕಾರವಾರ, ಜ.19 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಹಯೋಗದಲ್ಲಿ ಮಹಾಯೋಗಿ ವೇಮನ ಜಯಂತಿಯನ್ನು ಕಾರವಾರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ಆಚರಿಸಲಾಯಿತು.
ಅಂಕೋಲಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹೇಶ ಬಿ ನಾಯಕ ಮಹಾಯೋಗಿ ವೇಮನ ಕುರಿತು ವಿಶೇಷ ಉಪನ್ಯಾಸ ನೀಡಿ, ವೇಮನ ಕೆಟ್ಟದಾರಿಯನ್ನು ಹಿಡಿಯುವಾಗ ಅವನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ತತ್ವ ಉಪದೇಶದಿಂದ ತನ್ನ ಬದುಕನ್ನು ಬದಲಾಯಿಸಿಕೊಂಡು, ಮಹಾಯೋಗಿಯಾಗಿ ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ತ್ರಿಪದಿಗಳ ಮೂಲಕ ಪ್ರಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಆತ್ಮ, ಮನಸ್ಸು ಶುದ್ದವಾಗಿರಬೇಕು. ನಾವು ಮಾಡುವ ಕಾಯಕದಲ್ಲಿ ಶ್ರದ್ಧೆಯಿಂದ ಮಾಡಿದರೆ ದೇವರನ್ನು ಕಾಣಬಹುದು, ನಡೆ, ನುಡಿಯಲ್ಲಿ ವ್ಯತ್ಯಸವಾಗಬರದು ತಂದೆ ತಾಯಿಗಳನ್ನು ದೇವರಂತೆ ಕಾಣಬೇಕು ಎಂದು ವೇಮನು ಹೇಳಿದ್ದಾರೆ. ಇಂತಹ ಹಲವು ಮಹಾನೀಯರ ಜಯಂತಿಗಳನ್ನು ಕೇವಲ ಒಂದು ದಿನಕ್ಕೆ ಸಿಮಿತವಾಗಿದೆ ಅವರು ನಡೆದು ಬಂದ ದಾರಿ, ಆಚಾರ ವಿಚಾರ, ನಡೆ ನುಡಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಜೀವನ ಸಾಗಿಸಲು ಸಾಧ್ಯ ಎಂದರು.
ಪ್ರಥಮ ದರ್ಜೆ ಮಾಹಿಳಾ ಕಾಲೇಜಿನ ಪ್ರಚಾರ್ಯ ವಿ.ಜಿ ಗಣೇಶ ಮಾತನಾಡಿ, ರ್ದುಮಾರ್ಗದಲ್ಲಿ ನಡೆಯುತ್ತಿದ್ದ ವೇಮನ, ಬದುಕು ಎಂಬುವುದು ನಶ್ವರವಾದುದ್ದು ಎಂದು ಅರಿತು ಉತ್ತಮ ಮಾರ್ಗದಲ್ಲಿ ನಡೆದು ಮಹಾಯೋಗಿಯಾಗಿ ಬದಲಾದನು. ಆಂಧ್ರ ಪ್ರದೇಶದ ಕಡಪದಲ್ಲಿ 2006 ರಲ್ಲಿ ವೇಮನ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ವೇಮನಂತಹ ಮಹಾನೀಯರ ಜಯಂತಿಗಳ ಆಚರಣೆಯ ಮೂಲಕ ನಮ್ಮಲ್ಲಿರುವ ಆಚಾರ, ವಿಚಾರ, ಕಲ್ಮಷಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗಿವೆ. ಮನಸ್ಸನ್ನು ಅಂಕುಶದಿಂದ ಹಿಡಿದಿಟ್ಟುಕೊಂಡು ಮೊಬೈಲ್ ನಿಂದ ದೂರ ಉಳಿದು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಾಹಿಳಾ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತಿತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ ನಾಯ್ಕ ಸ್ವಾಗತಿಸಿದರು, ಸರ್ಕಾರಿ ಪ್ರಥಮ ದರ್ಜೆ ಮಾಹಿಳಾ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಹೇಮಲತಾ ಕೆ ನಿರೂಪಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ವನಿತಾ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 