ತಹಶೀಲ್ದಾರ ಕಚೇರಿಯಲ್ಲಿ ಮಹಾವೀರ ಜಯಂತಿ ಆಚರಣೆ

Mahavir Jayanti celebration at Tahsildar's office

ತಹಶೀಲ್ದಾರ ಕಚೇರಿಯಲ್ಲಿ ಮಹಾವೀರ ಜಯಂತಿ ಆಚರಣೆ  

ಯರಗಟ್ಟಿ: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಭಗವಾನ ಮಹಾವೀರ ಜಯಂತಿ ಆಚರಿಸಲಾಯಿತು. ತಹಶೀಲ್ದಾರ ಎಂ ವಿ ಗುಂಡಪ್ಪಗೋಳ ಮಹಾವೀರ ಭಾವಚಿತ್ರ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಸಲ್ಲಿಸಿದರು. 

ಈ ವೇಳೆ ಉಪತಹಶೀಲ್ದಾರ್ ಎಸ್‌. ಎಸ್‌. ಜಾದವ, ಕಂದಾಯ ನೀರೀಕ್ಷಕ ವಾಯ್‌. ಎಸ್‌. ಮುರ್ತೇನ್ನವರ, ಜೈನ ಸಮಾಜದವರಾದ ಅಜೀತ ಟೋಪನ್ನವರ, ಮಹಾವೀರ ಟೌಪನ್ನವರ, ಶ್ರೀಮಂತ ಉಂದ್ರಿ, ಪೀರೋಜ ಖಾದ್ರಿ, ಈರಣ್ಣಾ ಹೂಲ್ಲೂರ ಸೇರಿದಂತೆ ತಹಶೀಲ್ದಾರ ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.