ಮಹಾತ್ಮ ಗಾಂಧಿಜಿಯವರ ಹುತಾತ್ಮ ದಿನ ಆಚರಣೆ

Mahatma Gandhi's Martyrdom Day Celebration

ಮಹಾತ್ಮ ಗಾಂಧಿಜಿಯವರ ಹುತಾತ್ಮ ದಿನ ಆಚರಣೆ 

ಧಾರವಾಡ 30: ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಹುತಾತ್ಮ ದಿನವಾಗಿದ್ದು ಸದರಿ ದಿನವನ್ನು ಶ್ರದ್ದಾಂಜಲಿಯ ದಿನವನ್ನಾಗಿ ಆಚರಿಸಲು ಸರ್ಕಾರದ ನಿರ್ದೇಶನಗಳನ್ನು ಪಾಲಿಸಿ ಆಚರಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪಾಲಿಕೆ ವ್ಯಾಪ್ತಿಯಲ್ಲಿ ಶ್ರದ್ದಾಂಜಲಿಯ ಕಾರ್ಯಕ್ರಮವನ್ನು ಜನೇವರಿ 30, 2025 ಗುರುವಾರ ದಿನದಂದು ಮುಂಜಾನೆ 10.30 ಘಂಟೆಗೆ ದುರ್ಗಮ್ಮ ಶಶಿಕಾಂಡ ಬಿಜವಾಡ, ಉಪ ಮಹಾಪೌರರು ಹು.ಧಾ.ಮ.ಪಾಲಿಕೆ ಇವರು ಹುಬ್ಬಳ್ಳಿಯ ಕಿಮ್ಸ್‌ ದ್ವಾರದ ಮುಂಭಾಗದಲ್ಲಿರುವ ಇರುವ ಮಹಾತ್ಮ ಗಾಂಧೀಜಿಯವರ ಪುತ್ಥಳಿಗೆ ಮಾಲಾರೆ​‍್ಣ ಮಾಡಿದರು ಮತ್ತು ಶಂಕರ ಶೇಳಕೆ, ಅಧ್ಯಕ್ಷರು, ನಗರ ಯೋಜನೆ ಮತ್ತು ಅಭಿವೃದ್ದಿ ಸ್ಥಾಯಿ ಸಮಿತಿ ಇವರು ಧಾರವಾಡದ ಆಝಾದ ಉಪವನದಲ್ಲಿ ಇರುವ ಮಹಾತ್ಮ ಗಾಂಧೀಜಿಯವರ ಪುತ್ಥಳಿಗೆ ಮಾಲಾರೆ​‍್ಣ ಮಾಡಿದರು.  

ಬೆಳಿಗ್ಗೆ 10.30 ರಿಂದ 11 ಘಂಟೆಯವರೆಗೆ “ರಘುಪತಿ ರಾಘವ ರಾಜರಾಮ”, “ವೈಷ್ಣವ ಜನತೋಮ” ಮತ್ತು “ಸುಮಿರನ್ ಕರಲೆ ಮೆರೆ ಮನ್‌” ಭಜನೆ ಗೀತೆಗಳನ್ನು ನುಡಿಸಿ ಸರಿಯಾಗಿ 11 ಘಂಟೆಗೆ 2 ನಿಮಿಷ ಮೌನವನ್ನು ಆಚರಿಸಲಾಯಿತು. ಮಾಲಾರೆ​‍್ಣ ಕಾರ್ಯಕ್ರಮದಲ್ಲಿ  ಡಾ. ರುದ್ರೇಶ ಘಾಳಿ, ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆರ್ ವಿಜಯಕುಮಾರ,  ಉಪ ಆಯುಕ್ತರು ಅಭಿವೃದ್ದಿ, ಉಮೇಶ ಸವಣೂರು, ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಮಹಮದ್ ಫೀರೋಜ, ಕಾರ್ಯನಿರ್ವಾಹಕ ಅಭಿಯಂತರರು ತೋಟಗಾರಿಕೆ ಮತ್ತು ಸಾರ್ವಜನಿಕರು ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.