ಮಹಾಶಿವರಾತ್ರಿ: ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ
ಸಂಬರಗಿ 25: ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿ ಇರುವ ಲಕ್ಷಾಂತರ ಭಕ್ತರ ಆರಾಧ್ಯ ದೇವರು ಖಿಳೇಗಾಂವ ಬಸವೇಶ್ವರ ದೇವರು ಮಹಾ ಶಿವರಾತ್ರಿ ನಿಮಿತ್ಯವಾಗಿ ಬುಧವಾರ 26ರಂದು ವಿಶೇಷ ಕಾರ್ಯಕ್ರಮ ಏರಿ್ಡಸಲಾಗುವುದು ಎಂದು ದೇವಸ್ಥಾನದ ಕಮೀಟಿ ವತಿಯಿಂದ ತಿಳಿಸಲಾಗಿದೆ.
ಮಹಾಶಿವರಾತ್ರಿ ನಿಮಿತ್ಯವಾಗಿ ಬುಧುವಾರ ಬೆಳಿಗ್ಗೆ ಬಸವೇಶ್ವರ ದೇವರ ಮೂರ್ತಿಗೆ ದ್ರಾಕ್ಷಾ ಫಲದಿಂದ ವಿಶೇಷ ಪೂಜೆ, ಕೃಷ್ಣಾ ನದಿಯಿಂದ ನೀರು ತಂದು ದೇವರ ವಿಶೇಷ ಪೂಜೆ ನೆರವೇರಿಸಿ ಬುಧವಾರದಿಂದ ಗುರುವಾರ ಬೆಳಿಗಿನವರೆಗೆ 11 ಬೇಳೆ ಪೂಜೆ ಆಯೋಜಿಸಲಾಗಿದೆ. ಸಾಯಂಕಾಲ ಭಜನೆ, ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯುತ್ತದೆ. ದೇವರಿಗೆ ಬರುವ ಭಕ್ತರಿಗೆ ವಿಶೇಷ ಮಹಾಪ್ರಸಾಧ ಆಯೋಜಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಿರಿಗೆ ಎಲ್ಲಾ ಸೌಲಭ್ಯವನ್ನು ಕಲ್ಪಿಸಲಾಗಿದೆ.
ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಅಥಣಿ, ಬೈಲಹೊಂಗಲ, ಮಹಾರಾಷ್ಟ್ರದ ಜತ್ತ, ಕವಟೆಮಹಾಂಕಾಳ ಘಟಕದಿಂದ ವಿಶೇಷ ಬಸ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬರುವ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ದೇವಸ್ಥಾನದ ಕಮೀಟಿ ತಿಳಿಸಿದೆ.